ಕೆಲವರಿಗೇ ಯಾಕೆ ಹೆಚ್ಚು ಸೊಳ್ಳೆಗಳು ಕಚ್ಚುತ್ತವೆ ಗೊತ್ತೆ ? | ಯಾರ ದೇಹದ ರಕ್ತ ಪ್ರೊಟೀನ್ ಶೇಕ್ ಥರ ಆಕರ್ಷಕ ಈ ಸೊಳ್ಳೆಗಳಿಗೆ, ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ !
ಕೆಲವೊಮ್ಮೆ ತೋಟಕ್ಕೆ ತೆರಳಿದ ಸಂದರ್ಭದಲ್ಲಿ ಒಟ್ಟಿಗೆ ನಿಂತುಕೊಂಡು ಹರಟೆ ಹೊಡೆಯುತ್ತಿದ್ದಾಗ ಅದರಲ್ಲಿ ಯಾರಾದ್ರೂ ಒಬ್ಬರು ʻನನಗೆ ಹೆಚ್ಚು ಸೊಳ್ಳೆಗಳು ಕಚ್ಚುತ್ತವೆ ʼ ಎಂದು ಹೀಗೆ ಹೇಳುವುದನ್ನು ಕೇಳಿರಬಹುದು.. ಅರೇ ಹೌದಲ್ವಾ? ಯಾಕೆ ಅಂತಾ ಎಂದಾದರೂ ಚಿಂತಿಸಿದ್ದೀರಾ? ನಾವು ಈ ಸ್ಟೋರಿಯಲ್ಲಿ ನಿಮಗೆ ತಿಳಿಸುತ್ತೇವೆ ಅದಕ್ಕೆ ನಿಖರ ಕಾರಣ.
ಸೊಳ್ಳೆಗಳಿಗೆ ನಿಮ್ಮ ದೇಹದ ರಕ್ತ ಪ್ರೊಟೀನ್ ಷೇಕ್ ತರಹ. ಸಂಶೋಧನೆಯ ಪ್ರಕಾರ, ‘ಹಸಿದ ಸೊಳ್ಳೆಗಳು ನಿಮ್ಮ ದೇಹವನ್ನು ಪ್ರೋಟೀನ್ ಶೇಕ್‌ನಂತೆ ನೋಡುತ್ವೆ. ಯಾರ ದೇಹದಿಂದ ಪ್ರೋಟೀನ್ ವಾಸನೆ ಬರುತ್ತೋ ಅವು ಆ ದೇಹಕ್ಕೆ ಅದಕ್ಕೆ ಆಕರ್ಷಿತವಾಗುತ್ತವೆ. ಹಾಗಾದ್ರೆ ಕೆಲವೇ ಕೆಲ ವ್ಯಕ್ತಿಗಳ ರಕ್ತ ತೀವ್ರ ಆಸಕ್ತಿಕರವಾಗಿ, ರುಚಿಕರವಾಗಿ ಮತ್ತು ಸೊಳ್ಳೆಗಳು ಇಷ್ಟ ಪಡುವ ಹಾಗೆ ಇದ್ದಿರಲೆ ಬೇಕಲ್ಲವೇ ? ಹಾಗಾದ್ರೆ ಯಾರ ರಕ್ತ ಸೊಳ್ಳೆಗಳಿಗೆ ಇಷ್ಟ ?
ಸೊಳ್ಳೆಗಳಿಗೆ ಕೆಲವು ಜನರು ಹೆಚ್ಚು ಆಕರ್ಷಿತರಾಗುತ್ತಾರೆ.
ನಾವು ಹೇಳಿದಂತೆ, ನಿಮ್ಮ ದೇಹದಿಂದ ಬರುವ ವಾಸನೆಗೆ ಸೊಳ್ಳೆಗಳು ಆಕರ್ಷಿತವಾಗುತ್ತವೆ. ಆದ್ದರಿಂದ ದೇಹವು ಪ್ರೋಟೀನ್ ಶೇಕ್’ನಂತಹ ವಾಸನೆಯನ್ನು ಹೊಂದಿರುವ ವ್ಯಕ್ತಿಯನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ.
ಡಿಯೋ ಅಥವಾ ಸುಗಂಧ ದ್ರವ್ಯವನ್ನು ಅನ್ವಯಿಸಿದ್ರು ಸೊಳ್ಳೆಗಳು ಆಕರ್ಷಿತರಾಗಿರುವುದಿಲ್ಲ. ಸೊಳ್ಳೆಗಳು ಮತ್ತು ದೇಹದ ವಾಸನೆಯ ನಡುವಿನ ಸಂಬಂಧವು ವಿಶೇಷವಾಗಿದೆ. ಮೂರು ವರ್ಷಗಳ ಕಾಲ ನಡೆದ ಸಂಶೋಧನೆಯು ನೀವು ಡಿಯೋ ಅಥವಾ ಪರ್ಫ್ಯೂಮ್ ಅನ್ವಯಿಸಿದರೂ ಅಥವಾ ಶಾಂಪೂವನ್ನ ಬದಲಾಯಿಸಿದರೂ ಸೊಳ್ಳೆಗಳನ್ನು ಆಕರ್ಷಿಸುವ ನಿಮ್ಮ ದೇಹದ ವಾಸನೆಯು ಬದಲಾಗುವುದಿಲ್ಲ ಎಂದು ತಿಳಿದುಬಂದಿದೆ. ನೀವು ಬೆವರು ಮಾಡುತ್ತಿದ್ದೀರಾ ಅಥವಾ ಆ ದಿನ ನೀವು ಏನು ತಿಂದಿದ್ದೀರಿ ಎಂಬುದು ಸಹ ಮುಖ್ಯವಲ್ಲ. ಒಮ್ಮೆ ನಿಮ್ಮ ದೇಹದಿಂದ ಬರುವ ವಾಸನೆಯೊಂದಿಗೆ ಸೊಳ್ಳೆಗಳ ಆಕರ್ಷಣೆ ಪ್ರಬಲವಾಗಿದ್ದರೆ, ನೀವು ಏನು ಮಾಡಿದರೂ, ಸೊಳ್ಳೆಗಳಿಂದ ನೀವು ಯಾವಾಗಲೂ ತೊಂದರೆಗೊಳಗಾಗುತ್ತೀರಿ. ಆಗ ನೀವು ಅವುಗಳಿಗೆ ನೆಚ್ಚಿನ ಆಹಾರವಾಗುತ್ತೀರಿ.
ಬಿಯರ್ ಕುಡಿದ ನಂತರ ಸೊಳ್ಳೆಗಳು ಹೆಚ್ಚು ಆಕರ್ಷಿಸುತ್ತವೆ.!
ಈ ಸಂಶೋಧನೆಯನ್ನ ವಿವಿಧ ರೀತಿಯಲ್ಲಿ ನಡೆಸಿದ್ದಾರೆ, ಆದರೆ ಯಾವುದೇ ವ್ಯಕ್ತಿಯ ದೇಹದಿಂದ ಬರುವ ವಾಸನೆಗಳು ಅಥವಾ ಆಮ್ಲವು ರೂಪುಗೊಳ್ಳುತ್ತದೆ ಎಂದು ಇನ್ನೂ ಸಂಶೋಧನೆ ನಡೆಯುತ್ತಿದೆ. ಆದಾಗ್ಯೂ, ಮಹಿಳೆಯರು ಗರ್ಭಿಣಿಯಾಗಿದ್ದಾಗ ಅಥವಾ ಜನರು ಬಿಯರ್ ಕುಡಿಯುವಾಗ ಸೊಳ್ಳೆಗಳು ಹೆಚ್ಚು ಆಕರ್ಷಕವಾಗಿವೆ ಎಂದು ತಜ್ಞರು ಕಂಡುಕೊಂಡಿದ್ದಾರೆ.
ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು ಕಾರ್ಬಾಕ್ಸಿಲಿಕ್ ಆಮ್ಲದ ಹೆಚ್ಚು ವಾಸನೆಯನ್ನ ಹೊಂದಿರುವ ಜನರು ಇತರ ಜನರಿಗಿಂತ 100 ಬಾರಿ ಹೆಚ್ಚು ಹೆಣ್ಣು ಈಡಿಸ್ ಈಜಿಪ್ಟಿ (ಸೊಳ್ಳೆಯ ವಿಶೇಷ ಜಾತಿ) ದಾಳಿಗೆ ಒಳಗಾಗುತ್ತಾರೆ ಎಂದು ಕಂಡುಹಿಡಿದಿದ್ದಾರೆ. ಅಂದ್ಹಾಗೆ, ಈ ಹೆಣ್ಣು ಸೊಳ್ಳೆ (Aedes aegypti) ಡೆಂಗ್ಯೂ, ಚಿಕೂನ್‌ಗುನ್ಯಾ, ಹಳದಿ ಜ್ವರ ಮತ್ತು ಝಿಕಾ ಮುಂತಾದ ರೋಗಗಳನ್ನು ಹರಡಲು ಕಾರಣವಾಗಿದೆ.
ಸೊಳ್ಳೆಗಳು ರೋಗಗಳ ಹಿಂದಿನ ಪ್ರಮುಖ ಕಾರಣ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಪ್ರತಿ ವರ್ಷ ಪ್ರಪಂಚದಲ್ಲಿ ಸುಮಾರು 700 ಮಿಲಿಯನ್ ಜನರು ಸೊಳ್ಳೆಯಿಂದ ಹರಡುವ ರೋಗಗಳಿಂದ ಬಳಲುತ್ತಿದ್ದಾರೆ. ತಾಪಮಾನ ಹೆಚ್ಚಾದಂತೆ, ಈ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ.