ಟೆರೇಸ್ ಮೇಲೆ ರಂಗಿಲೋ ಮಾರೋ ಡೋಲ್ನಾ ಹಾಡಿಗೆ ಹುಚ್ಚೆದ್ದು ಕುಣಿದ ಮಹಿಳೆಯ Video Viral | Watch
ಮನಸ್ಸೆಂಬ ಮಾಯಾವಿ ಮರ್ಕಟದಂತೆ ಯೋಚನಾ ಲಹರಿ ಆಗಿಂದಾಗ್ಗೆ ಬದಲಾಗುತ್ತಾ ಇರುವುದು ಸಾಮಾನ್ಯ. ಇಂದಿನ ಜೀವನ ಶೈಲಿಯಲ್ಲಿ ಒತ್ತಡಯುತ ಕೆಲಸಗಳ ನಡುವೆ ಸಂಸಾರದ ಜಂಜಾಟದ ನಡುವೆ ನೆಮ್ಮದಿಯ ಜೊತೆಗೆ ನಿದ್ರಾ ಹೀನತೆಯ ಕೊರತೆ ಹೆಚ್ಚಿನವರನ್ನು ಕಾಡುವುದು ಸಹಜ.
ಹಾಗಾಗಿ, ಬೇಗನೆ ಮನಸ್ಸು ಬೇಸರಗೊಳ್ಳುವ ಜೊತೆಗೆ ಕೋಪಗೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಈ ನಡುವೆ ಮಹಿಳೆಯೊಬ್ಬಳು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.
ಮನಸ್ಸನ್ನೂ ಉಲ್ಲಾಸಗೊಳಿಸುವಲ್ಲಿ ನೃತ್ಯ ಕೂಡ ಮಹತ್ತರ ಪಾತ್ರ ವಹಿಸುತ್ತದೆ. ಕರ್ನಾಟಕ ಕಲೆಯ ಸಂಸ್ಕೃತಿಯ ಪೋಷಿಸುವ ತವರು ಎಂದರೆ ತಪ್ಪಾಗದು. ಅದರಲ್ಲೂ ಕೂಡ ವಿಶೇಷವಾಗಿ ಮಕ್ಕಳಿಗೆ ಬಾಲ್ಯದಲ್ಲೇ ಸಂಗೀತ , ನೃತ್ಯ ಕಲಿಸಿ, ಒಳ್ಳೆಯ ಅಭ್ಯಾಸ ಹುಟ್ಟುಹಾಕಲು ಪ್ರಯತ್ನಿಸುವ ಪ್ರಕ್ರಿಯೆ ಕೂಡ ಹೆಚ್ಚಾಗಿ ನಡೆಯುತ್ತಿವೆ.
ದಿನಂಪ್ರತಿ ಸಾಕಷ್ಟು ನೃತ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ವೈರಲ್ ಆಗುತ್ತಿರುತ್ತವೆ. ಏಕೆಂದರೆ ಅವು ಒತ್ತಡವನ್ನು ಕಡಿಮೆ ಮಾಡುತ್ತವೆ.
ರಂಗಿಲೋ ಮಾರೋ ಡೋಲ್ನಾ ಹಾಡಿಗೆ ಟೆರೇಸ್ ಮೇಲೆ ಮಹಿಳೆಯೊಬ್ಬರು ಸಂತೋಷದಿಂದ ನೃತ್ಯ ಮಾಡುತ್ತಿರುವುದನ್ನು ತೋರಿಸುವಂತಹ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೊದಲ್ಲಿ, ಮಹಿಳೆ ನೀಲಿ ಸೀರೆಯಲ್ಲಿ ಜನಪ್ರಿಯ ಹಾಡಿನಲ್ಲಿ ನೃತ್ಯ ಮಾಡುತ್ತಿದ್ದಾರೆ.
ನೃತ್ಯದುದ್ದಕ್ಕೂ, ಅವಳು ತನ್ನ ಮುಖದ ಮೇಲೆ ಸುಂದರವಾದ ನಗುವನ್ನು ಹೊಂದಿದ್ದು, ನೃತ್ಯದ ಜೊತೆಗೆ ಹಾವ ಭಾವ ನೋಡುಗರನ್ನು ಬೆರಗು ಮೂಡಿಸಿದೆ.
ಪ್ರಣಲಿ ಮ್ಯೂಸಿಕ್ ಈ ವೀಡಿಯೊವನ್ನು ಹಂಚಿಕೊಂಡು, “ನನ್ನ ನೆಚ್ಚಿನ ಬಾಲ್ಯದ ಹಾಡು ಫಾರ್ ಡಾನ್ಸ್” ಎಂದು ಬರೆದುಕೊಂಡಿದ್ದು, ಈ ವೀಡಿಯೊಗೆ 38,000 ಕ್ಕೂ ಹೆಚ್ಚು ಲೈಕ್ಗಳು ಬಂದಿದ್ದು, ನೋಡುಗರು ಈ ಕ್ಲಿಪ್ ಅನ್ನು ನೋಡಿ ಸಂತೋಷಪಟ್ಟಿದ್ದಾರೆ.
ಆದರೆ ಅನೇಕರು ನಗೆ ಎಮೋಜಿಗಳನ್ನು ರವಾನಿಸಿದ್ದು, ಸುಂದರ ವದನಕ್ಕೆ ಕಾಂತಿ ನೀಡುವ ನಗು ಮತ್ತೊಬ್ಬರಲ್ಲಿಯೂ ಸಂತೋಷದ ಚಿಲುಮೆಯನ್ನು ಹರಿಸುವ ಪ್ರಯತ್ನ ನಡೆಸಿದ್ದಾರೆ.
“ಆಪ್ ಬಹುತ್ ಅಚ್ಚಾ ಡ್ಯಾನ್ಸ್ ಕಾರ್ತಿ ಹೋ ಆಪ್ ಶಾದಿ ಮೇ ಭಿ ಬಹುತ್ ಹಮಾರೆ ಭಾರತ್ ಕಿ ಸಂಸ್ಕೃತಿ ಹೈ ಔರ್ ಆಪ್ ಇಸ್ ಶಾದಿ ಮೇ ಬಹುತ್ ಸುಂದರ್ ದಿಖ್ ರಹಿ ಹೋ ಆಪ್ ಹಮೇಶಾ ಐಸೆ ಹಿ ಡ್ಯಾನ್ಸ್ ಕಾರ್ತಿ ರಹನಾ ಔರ್ ಆಪ್ ದೋನೋನ್ ಕಿ ಜೋಡಿ ಹಮೇಶಾ ಸಲಾಮತ್” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
ಇನ್ನೊಬ್ಬರು ಕಾಮೆಂಟ್ ಮಾಡಿ, “ವಾವ್ ಸೂಪರ್ ಅಮೇಜಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ. ಇಂದಿನ ದಿನಚರಿಯಲ್ಲಿ ಆರೋಗ್ಯ ದೃಷ್ಟಿಯಲ್ಲೂ ಕೂಡ ನೃತ್ಯ ಉತ್ತಮ ಪಾತ್ರ ವಹಿಸುತ್ತದೆ.ಉತ್ಸಾಹದಿಂದ ನರ್ತಿಸುವ ಜೊತೆಗೆ ಸಂತೋಷ ಪಸರಿಸಿರುವ ಮಹಿಳೆಗೊಂದು ಮೆಚ್ಚುಗೆ ಸಲ್ಲಿಸಲೇಬೇಕು.