ಕಾಂತಾರ ಯಾವ ಓಟಿಟಿ ಪ್ಲಾಟ್ ಫಾರಂ ಗೆ ಬರುತ್ತೆ?
ಸದ್ಯಕ್ಕಂತೂ ಎಲ್ಲಾ ಕಡೆ ಕಾಂತಾರದ್ದೇ ಸದ್ದು. ಯಾಕೆಂದ್ರೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಕಾಂತಾರ ಸಿನಿಮಾವನ್ನು ಕಂಡು ಜನರು ಪಾಸಿಟಿವ್ ವಿಮರ್ಶೆಗಳನ್ನು ನೀಡಿದ್ದಾರೆ. ಇದು ನಿಜಕ್ಕೂ ಕನ್ನಡದ ಸಿನಿಮಾ ಇಂಡಸ್ಟ್ರಿಯ ಋಣಾತ್ಮಕ ಸುದ್ದಿ ಅಂತನೇ ಹೇಳಬಹುದು.
ಕೇವಲ ಒಂದು ಸಿನಿಮಾದ ಮೂಲಕ ದೈವಾರಾಧನೆಯ ಬಗ್ಗೆ ರಿಷಬ್ ಶೆಟ್ಟಿಯವರು ಎಲ್ಲೆಡೆ ವಿಷಯವನ್ನು ಪಸರಿಸಿರುವುದು ಶ್ಲಾಘನೀಯ ಸಂಗತಿ. ಈಗಲೂ ಕೂಡ ಚಿತ್ರಮಂದಿರಗಳಲ್ಲಿ ಕಾಂತಾರಾ ಸಿನಿಮಾದ ಟಿಕೆಟ್ ಕಾದಿರಿಸಿಕೊಳ್ಳಲು ಜನರು ಹರಸಾಹಸವನ್ನು ಪಡುತಿದ್ದಾರೆ. ಟಿಕೆಟ್ ಬುಕ್ ಮಾಡುವುದು ಸ್ವಲ್ಪ ತಡವಾದರೂ ಫುಲ್ ಸೀಟ್ ಆಗಿರುತ್ತದೆ. ಅಷ್ಟರ ಮಟ್ಟಿಗೆ ಸಿನಿಮಾದ ಹವಾ ಧೂಳ್ ಎಬ್ಬಿಸುತ್ತಿದೆ.
ಇದರ ಮಧ್ಯೆ ಸಿನಿಮಾ ಯಾವ ಓ ಟಿ ಟಿ ಫ್ಲ್ಯಾಟ್ ಫಾರ್ಮ್ ಗೆ ಬರುತ್ತೆ ಎಂಬುದು ಕೂಡ ರಿವಿಲ್ ಆಗಿದೆ. ಅದೆಷ್ಟೋ ಜನ ಚಿತ್ರಮಂದಿರಕ್ಕೆ ಐದು, ಹತ್ತು ಸಲ ಹೋಗಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ಇದರ ಮಧ್ಯೆ ಓ ಟಿ ಟಿ ಪ್ಲಾಟ್ ಫಾರ್ಮ್ ಕೂಡ ಭಾರಿ ಮೊತ್ತಕ್ಕೆ ಕಾಂತಾರ ಸಿನಿಮಾವನ್ನು ಖರೀದಿ ಮಾಡಿದೆ.
ಹೌದು. ಅಮೆಜಾನ್ ಪ್ರೈಮ್ ಪ್ಲಾಟ್ ಫಾರಮ್ ಸಿನಿಮಾವನ್ನು ಖರೀದಿ ಮಾಡಿದೆ. ನವೆಂಬರ್ 4 ರಂದು ಓಟಿಟಿ ಯಲ್ಲಿ ಬಿಡುಗಡೆಯಾಗಲಿದೆ ಎಂಬ ವರದಿಗಳು ಈಗಾಗಲೇ ಬಂದಿದೆ. ಪ್ಯಾನ್ ಇಂಡಿಯಾ ಸಿನಿಮವಾಗಿರುವ ಕಾಂತಾರ, ಮೊದಲು ಕನ್ನಡ ಅವತರಣಿಕೆಯಲ್ಲಿ ಪ್ರೈಮ್ ನಲ್ಲಿ ಬರಲಿದೆ. ನಂತರ ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ. ಓಟಿಟಿಯಲ್ಲೂ ಕಾಂತಾರ ಸಿನಿಮಾ ನೋಡಲು ಜನರು ಬಹುಶಃ ಮುಗಿಬಿದ್ದು ನೋಡಬಹುದು.