Galaxy F13. : ದೀಪಾವಳಿಗೆ ಗ್ರಾಹಕರಿಗೆ ನೀಡಿದೆ ಧಮಾಕಾ ಆಫರ್ | ಗ್ಯಾಲಕ್ಸಿ F13 ಮೇಲೆ ಯಾರೂ ಊಹಿಸದಷ್ಟು ಭಾರೀ ಡಿಸ್ಕೌಂಟ್ !!!

ಭಾರತದಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಶಾಪಿಂಗ್ ಕೂಡ ಬಹಳ ಜೋರಾಗಿರುತ್ತದೆ. ಹಬ್ಬದ ಸಲುವಾಗಿ ಕಂಪನಿಗಳು ವಿಶೇಷ ಆಫರ್ಗಳನ್ನು ಸಹ ನೀಡುತ್ತದೆ.
ಸ್ಮಾರ್ಟ್ ಫೋನ್ ಪ್ರಿಯರೇ ಇಲ್ಲಿ ಸ್ವಲ್ಪ ಗಮನಿಸಿ.

 

ಈ ವಿಶೇಷ ರಿಯಾಯಿತಿ ಬೆಲೆಯಲ್ಲಿ ಜನರು ಸ್ಮಾರ್ಟ್ ಫೋನ್ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ಯಾರಿಗುಂಟು ಯಾರಿಗಿಲ್ಲ ಅನ್ನೋತರ ಜನರು ತಾ ಮುಂದು ತಾ ಮುಂದು ಅಂತಾ ಆರ್ಡರ್ ಮಾಡುವ ಭರದಲ್ಲಿ ಇದ್ದಾರೆ.

ನೀವು ದೊಡ್ಡ ಬ್ಯಾಟರಿ, ಉತ್ತಮ ಡಿಸ್ ಪ್ಲೇ, ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್ ಹುಡುಕುತ್ತಿದ್ದರೆ ಇಲ್ಲೊಂದು ಆಯ್ಕೆಯಿದೆ. ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಸ್ಯಾಮ್​ಸಂಗ್ ಇದೀಗ ದೀಪಾವಳಿ ಆಫರ್​ನಲ್ಲಿ ತನ್ನ ಫೋನೊಂದನ್ನು 10,000 ರೂ. ಒಳಗೆ ಮಾರಾಟ ಮಾಡುತ್ತಿದೆ.

ಕಳೆದ ಜೂನ್​ನಲ್ಲಿ ಭಾರತದಲ್ಲಿ ಸ್ಯಾಮ್​ಸಂಗ್ ಬಜೆಟ್ ಬೆಲೆಗೆ ಗ್ಯಾಲಕ್ಸಿ ಎಫ್​​13 ಫೋನನ್ನು ಲಾಂಚ್‌ ಮಾಡಿತ್ತು. ಬರೋಬ್ಬರಿ 6000mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿರುವ ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಈ ಫೋನು ಈಗ ಶೇ. 36 ರಷ್ಟು ರಿಯಾಯಿತಿ ಪಡೆದುಕೊಂಡು ಸೇಲ್ ಕಾಣುತ್ತಿದೆ

ಈಗಾಗಲೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಭಾರತದಲ್ಲಿ 14,999 ರೂ. ಗೆ ಬಿಡುಗಡೆ ಆಗಿತ್ತು. ಇದೀಗ ಭರ್ಜರಿ ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಕೇವಲ 9499 ರೂ. ಗೆ ಮಾರಾಟ ಆಗುತ್ತಿದೆ. ಅದಲ್ಲದೆ ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ ಮೂಲಕ ಖರೀದಿಸಿದರೆ ಮತ್ತಷ್ಟು ರಿಯಾಯಿತಿ ಪಡೆಯಬಹುದಾಗಿದೆ.

ಈ ಫೋನ್‌ 6.6 ಫುಲ್‌ ಹೆಚ್‌ಡಿ + LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಗೀರುಗಳಿಂದ ರಕ್ಷಣೆಯನ್ನು ಪಡೆಯಲಿದೆ.

ದೀರ್ಘ ಸಮಯ ಬಾಳಿಕೆ ಬರುವ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲುಟೂತ್‌ v5.0, ವೈಫೈ, ಯುಎಸ್‌ಬಿ ಪೋರ್ಟ್‌, 3.5ಮಿ.ಮೀ ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿದೆ.

ಅದಲ್ಲದೆ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಫ್ಲಿಪ್‌ಕಾರ್ಟ್ ನಲ್ಲಿ ಬಿಗ್ ದಿವಾಳಿ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ನ್ನು ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ ಮೂಲಕ ಖರೀದಿಸಿದರೆ ಮತ್ತಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ.

Leave A Reply

Your email address will not be published.