ಕುಟುಂಬಸ್ಥರು ಅನಾರೋಗ್ಯ ಪೀಡಿತರು ,ಚಿಕಿತ್ಸೆಗೆ ಹಣವಿಲ್ಲವೆಂದು ಹಣ ಸಂಗ್ರಹ ಮಾಡುವ ಜಾಲ ಸಕ್ರಿಯ | ಮಾತಿನಲ್ಲೇ ಮರಳು ಮಾಡುವ ತಂಡ

ವಿವಿಧ ರೀತಿಯಲ್ಲಿ ಮಾತಿನಲ್ಲೇ ಮರಳು ಮಾಡಿ ಜನರನ್ನು ಯಾಮಾರಿಸಿ ಹಣ ಸಂಗ್ರಹ ಮಾಡುವ ಜಾಲ ಸಕ್ರೀಯವಾಗಿದೆ.ಈ ಕುರಿತು ಜನರು ಎಚ್ಚರಿಕೆ ವಹಿಸುವುದು ಸೂಕ್ತ.

ತಮ್ಮ ಮನೆಯವರು ಕಾಯಿಲೆಗೆ ತುತ್ತಾಗಿದ್ದಾರೆ. ಚಿಕಿತ್ಸೆಗೆ ಹಣ ಇಲ್ಲ, ಹಣ ಸಂಗ್ರಹಿಸಿ ಕೊಡುತ್ತೇನೆ. ಬೆಂಗಳೂರಿನಿದ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದ ವ್ಯಕ್ತಿ ಈಗ ನಾಪತ್ತೆಯಾಗಿದ್ದಾನೆ. ಹೀಗೆ ಮಾತಿನಲ್ಲೇ ಮರಳು ಮಾಡುವ ತಂಡವೊಂದು ಹಲವರನ್ನು ತಮ್ಮ ಕಟ್ಟುಕತೆಗಳಿಂದಲೇ ನಂಬಿಸಿ ಹಣ ಪೀಕಿಸಿ ವಂಚಿಸುವ ಘಟನೆ ಬೆಳಕಿಗೆ ಬಂದಿದೆ.

ಮಗುವಿನ ಜತೆಯಲ್ಲಿ ಗಂಡ-ಹೆಂಡತಿ ಎಂದು ಹೇಳಿಕೊಂಡು ಮಲ್ಪೆಗೆ ಬಂದಿದ್ದ ಈ ತಂಡದವರು ಆಂಧ್ರಪ್ರದೇಶದವರು ಎಂದು ಹೇಳಲಾಗುತ್ತಿದೆ.

ಮಲ್ಪೆ ಬಂದರಿನಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನು ಭೇಟಿಯಾಗಿ ಅವರಲ್ಲಿ ತಮ್ಮ ವಿಚಾರವನ್ನು ಹೇಳಿಕೊಂಡಿದ್ದರು. ನಮಗೆ ಬಂಧು-ಬಳಗ ಯಾರೂ ಇಲ್ಲ, ತಾಯಿ ಆಸ್ಪತ್ರೆಯಲ್ಲಿದ್ದಾರೆ.

ತಮ್ಮ ಕೈಲಾದ ನೆರವನ್ನು ನೀಡಿ ಸಹಕರಿಸುವಂತೆ ವಿನಂತಿಸಿದ್ದರು. ಅವರು ಸುಮಾರು 2 ಸಾವಿರ ರೂಪಾಯಿ ಸಂಗ್ರಹಿಸಿ ಅವರಿಗೆ ನೀಡಿ ರೈಲು ನಿಲ್ದಾಣಕ್ಕೆ ಕಳುಹಿಸಿ ಕೊಟ್ಟಿದ್ದರು. ಮಲ್ಪೆ ಬಂದರಿನಲ್ಲಿ ನಾನಾ ಕಥೆ ಕಟ್ಟಿದ ಈ ತಂಡ ಬೇರೆ ಬೇರೆ ಜನರಿಂದ ಸಾವಿರಾರು ರೂ. ಪಡೆದುಕೊಂಡಿದೆ ಎನ್ನಲಾಗುತ್ತಿದೆ.

Leave A Reply