ಬ್ರೆಸ್ಟ್ ಕ್ಯಾನ್ಸರ್ ಅನ್ನು ಹೀಗೆ ತಡೆಗಟ್ಟಬಹುದು

ಭಾರತದಲ್ಲಿ ವರ್ಷಕ್ಕೆ ಶೇಖಡ ಎಂಬತ್ತರಷ್ಟು ಮಹಿಳೆಯರು ಬಲಿಯಾಗುತ್ತಿರುವುದು ಬ್ರೆಸ್ಟ್ ಸ್ಥಾನ ಕ್ಯಾನ್ಸರ್ ನಿಂದ . ಇದು ಆರಂಭದ ದಿನಗಳಲ್ಲಿಯೇ ತಡೆಗಟ್ಟಬಹುದು. ಆದರೆ ಸಾಕಷ್ಟು ಜನ ಮಹಿಳೆಯರು ಮುಜುಗರಕ್ಕೀಡಾಗಿಯೆ ವೈದ್ಯರ ಬಳಿ ಹೋಗುವುದಿಲ್ಲ. ಇದರಿಂದ ಹದಿನೈದನೇ ನೋವು ಹೆಚ್ಚಾಗಿ ಕ್ಯಾನ್ಸರ್ ಕೂಡ ಬೆಳೆಯುತ್ತದೆ. ಕೊನೆಗೆ ಫೈನಲ್ ಸ್ಟೇಜಿಗೆ ಹತ್ತಿದ ನಂತರ ಉಳಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಯಾವ ರೀತಿಯಾಗಿ ಬ್ರೆಸ್ಟ್ ಕ್ಯಾನ್ಸರ್ ಬರುವುದನ್ನು ತಡೆಯಬಹುದು ಎಂಬುದರ ಬಗ್ಗೆ ತಿಳಿಯೋಣ.

 

ಯಾವ ವಯಸ್ಸಿಗೆ ಮಹಿಳೆಯರಿಗೆ ಈ ಕ್ಯಾನ್ಸರ್ ಬರುತ್ತದೆ ಎಂದು ಹೇಳಲು ಅಸಾಧ್ಯ. ಆದರೆ ನಿಮ್ಮ ಜೀವನ ಶೈಲಿಯನ್ನು ಈ ರೀತಿಯಾಗಿ ಪಾಲಿಸುವುದರಿಂದ ಅನಾರೋಗ್ಯದಿಂದ ಆದಷ್ಟು ತಡೆಗಟ್ಟಬಹುದು.

ಹೆಲ್ದಿ ಫುಡ್ ಹಣ್ಣುಗಳು, ತರಕಾರಿ ಮತ್ತು ಪ್ರೊಟೀನ್‌ಯುಕ್ತ ಆಹಾರವನ್ನು ಸೇವಿಸಿ ಎಂದು ಡಾಕ್ಟರ್ ಸಲಹೆ ನೀಡುತ್ತಾರೆ. ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರುವಂತೆ ಸಲಹೆ ನೀಡುತ್ತಾರೆ.

ಸೊಪ್ಪು ಮತ್ತು ಮೆಡಿಟರೇನಿಯನ್ ಆಹಾರಗಳು ಉರಿಯೂತದ ಮತ್ತು ದೇಹದಲ್ಲಿ ಮಾರಣಾಂತಿಕ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವ ಗುಣಲಕ್ಷಣಗಳ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆಚ್ಚಿನ ಫೈಬರ್ ಯುತ ಆಹಾರವನ್ನು ಯಾವುದೇ ಕಾರಣಕ್ಕೂ ಜಾಸ್ತಿ ಸೇವಿಸಲೇಬಾರದು.

ಹೆಚ್ಚಾಗಿ ಆಲ್ಕೋಹಾಲ್ ಸೇವನೆಯನ್ನು ಮಾಡಬಾರದು. ಲಿಮಿಟ್ ಆಗಿ ಆಲ್ಕೋಹಾಲ್ ಸೇವನೆ ಇದ್ದರೆ ಒಳಿತು. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಮದ್ಯವು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಬಹುದು. ಇದು ಸ್ತನ ಅಂಗಾಂಶದ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಅಮೆರಿಕದ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ ಅಧ್ಯಯನದ ಪ್ರಕಾರ, ಆಲ್ಕೋಹಾಲ್‌ ಸೇವಿಸುವವರ ಪೈಕಿ ಹೆಚ್ಚಿನ ಮಂದಿ ಸ್ತನ ಕ್ಯಾನ್ಸರ್‌ ಸಮಸ್ಯೆ ಎದುರಿಸುತ್ತಿದ್ದಾರೆ.

ಈಗಿನ ಕಾಲದಲ್ಲಿ ಜಿಮ್ ಗೆ ಹೋಗುವುದು ಕಾಮನ್. ಹಾಗಾಗಿ ಹೆಚ್ಚಾಗಿ ವ್ಯಾಯಾಮಗಳನ್ನು ಮಾಡುವುದರಿಂದ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾಗಿದೆ. ವ್ಯಾಯಾಮದಲ್ಲಿ ಸಕ್ರಿಯರಾಗಿದ್ದರೆ ರಕ್ತದ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗಲು ಸಹಾಯವಾಗುತ್ತದೆ. ಅದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಂಶೋಧನೆಯ ಪ್ರಕಾರ, ನಿಯಮಿತ ವ್ಯಾಯಾಮವನ್ನು ಮಾಡುವ ಮಹಿಳೆಯರು ಸಕ್ರಿಯವಾಗಿರದ ಮಹಿಳೆಯರಿಗಿಂತ 10-20 ಪ್ರತಿಶತದಷ್ಟು ಕಡಿಮೆ ಸ್ತನ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ.

ನೀರನ್ನು ಹೆಚ್ಚಾಗಿ ಕುಡಿಯಿರಿ ಇದರ ಜೊತೆಗೆ ಡ್ರೈ ಫ್ರೂಟ್ಸ್ ಮತ್ತು ಹಣ್ಣು ,ಹಸಿ ತರಕಾರಿಗಳನ್ನು ಸೇವಿಸುತ್ತಾ ಇರಬೇಕು. ಈ ರೀತಿಯ ಜೀವನಶೈಲಿಯನ್ನು ನೀವು ಪಾಲಿಸುವುದರಿಂದ ಹೆಚ್ಚಾಗಿ ಸ್ತನ ಕ್ಯಾನ್ಸರ್ ಬರುವುದನ್ನು ಆದಷ್ಟು ತಡೆಯಬಹುದು.

Leave A Reply

Your email address will not be published.