Big News | ಮೊಟ್ಟಮೊದಲ ಬಾರಿಗೆ ಒಂದೇ ಫೋನ್ ಕಾಲ್ ನಲ್ಲಿ ನಡೆದು ಹೋದ ವಿಚಾರಣೆ, ಕೆಲವೇ ನಿಮಿಷಗಳಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ !
ನೆರೆಕರೆ ಜಗಳ, ಗಂಡ ಹೆಂಡತಿ ಕಾದಾಟ, ಡೈವೋರ್ಸ್ ಇಂತಹ ಎಷ್ಟೋ ದೊಡ್ಡ-ಚಿಕ್ಕ ಕೇಸುಗಳನ್ನು ಕೋರ್ಟ್ ಗೆ ಬರುತ್ತೆ. ಜಡ್ಜ್ ಗಳು ವಿವಾದ ಬಗೆಹರಿಸುತ್ತಾರೆ. ಸಣ್ಣದೇ ಇರಲಿ ದೊಡ್ಡದೇ ಇರಲಿ ಕೆಲವೊಂದು ಕೇಸುಗಳು ಪರಿಹಾರವಾಗಲು ತಿಂಗಳು, ವರ್ಷಗಳು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ದಶಕಗಳೇ ಕಳಚಿಕೊಳುತ್ತವೆ.
ಆದರೆ ಇಲ್ಲೊಂದು ಕಡೆ ಕೇವಲ ಒಂದೇ ಒಂದು ಫೋನ್ ಕಾಲ್ ನಲ್ಲಿ ಸಮಸ್ಯೆ ಬಗೆಹರಿದಿದೆ. ತೀರ್ಪು ಐದು ನಿಮಿಷಗಳಲ್ಲಿ ಹೊರಬಂದಿದೆ. ವರ್ಷಗಟ್ಟಲೆ ಕಾಯುವ, ಸಮಯ ವ್ಯರ್ಥ ಆಗುವ ಸನ್ನಿವೇಶ ಇಲ್ಲದೆ ಕೇಸ್ ನೀಡುವ ಅಗತ್ಯ ಕೂಡಾ ಬಾರದೆ ವ್ಯಾಜ್ಯ ಫೈಸಲ್ ಆಗಿದೆ.
ವ್ಯಕ್ತಿಯೊಬ್ಬರು ತಮ್ಮ ಮಗಳಿಗೆ ಈ ವರ್ಷ ಪದವಿಪೂರ್ವ ವೈದ್ಯಕೀಯ ಸೀಟುಗಳಲ್ಲಿ ವಸತಿ ಸಿಗುವಂತೆ ಮನವಿ ಸಲ್ಲಿಸಿದ್ದರು. ಆದರೆ ಇವರ ಪುತ್ರಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-2022(ನೀಟ್ 2022) ಗೆ ಹಾಜರಾಗಿರಲಿಲ್ಲ. ಅವರು ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಸಂಸ್ಥೆಯಲ್ಲಿ ವಿಮಾದಾರರ ಕೋಟಾದಡಿ ಪ್ರವೇಶ ಪಡೆಯಲು ಬಯಸಿದ್ದರು.
ದೂರವಾಣಿಯ ಮೂಲಕ ಇವರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ ಹಾಗೂ ಹಿಮಾ ಕೊಹ್ಲಿ ಅವರ ವಿಭಾಗೀಯ ಪೀಠವು ನೀಟ್ ಪರೀಕ್ಷೆಗೆ ಹಾಜರಾಗದ ಕಾರಣ ಯಾವುದೇ ವಾರ್ಡ್ ನಲ್ಲಿ ಸೀಟ್ ನೀಡಲು ಸಾಧ್ಯವಿಲ್ಲ ಎಂದು ಅವರ ಮನವಿಯನ್ನು ತಳ್ಳಿ ಹಾಕಿದೆ.
ಇದುವೇ ಮೊದಲ ಬಾರಿಗೆ ಕೇವಲ ಕೆಲವೇ ನಿಮಿಷಗಳಲ್ಲಿ ಫೋನ್ ಕಾಲ್ ಒಂದರಲ್ಲಿ ಬಗೆಹರಿದ ಸಮಸ್ಯೆಯಾಗಿದೆ.