ಮತ್ತೆ ಮತ್ತೆ ಕಾಂತಾರದ ಹೆಸರು..! | ಭಾರತೀಯ ಚಿತ್ರರಂಗದ ಅತ್ಯುತ್ತಮ 250 ಚಿತ್ರಗಳ ಪೈಕಿ ನಂ.1 ಸ್ಥಾನದಲ್ಲಿ ಕಾಂತಾರ !

ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿರುವ, ಕಂಡ ಕಂಡ ಚಿತ್ರೋದ್ಯಮದಲ್ಲಿ ಕಲರವ ಎಬ್ಬಿಸಿ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರದ ಸಿರಿ ಮುಡಿಗೆ ಮತ್ತೊಂದು ಪಿಂಗಾರದ ಗರಿ ಮೂಡಿದೆ. ಕಾಂತಾರ ಚಿತ್ರ ಇದೀಗ ‘ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ’ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಇತ್ತೀಚೆಗೆ IMDb ಟಾಪ್ 250 ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲಿ ‘ಕಾಂತಾರ’ ನಂ. 1 ಸ್ಥಾನವನ್ನು ಪಡೆದುಕೊಂಡಿದೆ. ಇದು ಅಭಿಮಾನಿಗಳಿಂದ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ. ಇದು ಗಲ್ಲಾಪೆಟ್ಟಿಗೆಯ ಗಳಿಕೆಯ ಬೆಳೆಯುತ್ತಿರುವಾಗ ಚಿತ್ರವು ಸಾಧಿಸಿದ ಮತ್ತೊಂದು ಸಾಧನೆಗೆ ಸೇರಿಸಿದೆ. ಶುಕ್ರವಾರದಿಂದ ಈ ಚಿತ್ರದ ವೀಕ್ಷಕರ ಸಂಖ್ಯೆಯು ಸುಮಾರು 40 ರಿಂದ 50% ರಷ್ಟು ಹೆಚ್ಚಾಗಿದೆ.


Ad Widget

ಕಾಂತಾರ ದಿನದಿಂದ ದಿನಕ್ಕೆ ತನ್ನ ಕಲೆಕ್ಷನ್ ಅನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಾಂತಾರ ಚಿತ್ರವು ಇದೀಗ ವಿಶ್ವದಾದ್ಯಂತ 119 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದ 6 ನೇ ಕನ್ನಡ ಚಿತ್ರವಾಗಿದೆ. ಕರ್ನಾಟಕದಲ್ಲಿ ಕಾಂತಾರ ಕಾರಣದಿಂದ ಸಿನಿಮಾ ಹಾಲ್‌ಗಳು ಇನ್ನೂ ತುಂಬಿ ತುಳುಕುತ್ತಿದೆ. ಎಲ್ಲೆಡೆ ಹೌಸ್ ಫುಲ್ ರಾರಾಜಿಸುತ್ತಿದೆ.

ಈಗ ಕಾಂತಾರ ಚಿತ್ರದ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಅವರಣಿಕೆ ಡಬ್ ಆಗಿ ಬಿಡುಗಡೆಯಾಗಿದೆ. ಹೀಗಾಗಿ ಚಿತ್ರದ ಕಲೆಕ್ಷನ್ ಮತ್ತಷ್ಟು ಜಾಸ್ತಿಯಾಗಲಿದೆ. ಕಳೆದ ಶನಿವಾರದ ಗಳಿಕೆ 14 ಕೋಟಿ ಇದ್ದರೆ, ಭಾನುವಾರ 18 ಕೋಟಿ ಬಾಚಿಕೊಂಡಿದೆ ಕಾಂತಾರ.

ಕಾಂತಾರ ಚಿತ್ರವನ್ನು ಸಾಲು ಸಾಲು ಸೆಲೆಬ್ರಿಟಿಗಳು ಹೊಗಳಿದ್ದಾರೆ. ಹಲವು ಸಿನಿಮಾಗಳ ಬಗ್ಗೆ, ಸಮಾಜದ ಆಗುಹೋಗುಗಳ ಬಗ್ಗೆ ವಿಲಕ್ಷಣವಾಗಿ, ವಿಚಿತ್ರವಾಗಿ, ಹಲವು ಬಾರಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡಾ ಕಾಂತಾರವನ್ನು ಹೊಗಳಿದ್ದಾರೆ.

‘ಕಾಂತಾರ’ ಚಿತ್ರವು ಎಲ್ಲಾ ಕಡೆಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ. ಪ್ರಮುಖ ಸೆಲೆಬ್ರಿಟಿಗಳಾದ ಜಗ್ಗೇಶ್, ಕಂಗನಾ ರಾಣಾವತ್, ಸುದೀಪ್, ಪ್ರಭಾಸ್, ಧನುಷ್, ಅನಿಲ್ ಕುಂಬ್ಳೆ, ಶಿಲ್ಪಾ ಶೆಟ್ಟಿ, ಮತ್ತು ಭಾರತದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮುಂತಾದ ಘಟಾನುಘಟಿಗಳು ಕಾಂತಾರ ಚಿತ್ರವನ್ನು ಹೊಗಳಿದ್ದಾರೆ.

error: Content is protected !!
Scroll to Top
%d bloggers like this: