ಕೇವಲ 1,50,000 ರೂ. ನಲ್ಲಿ ಶಾಸ್ತ್ರೋಕ್ತವಾಗಿ ಮದುವೆ | ಮದುವೆ ಹಾಲ್, ಪೌರೋಹಿತ್ಯ, ತಿಂಡಿ, ಊಟ, ವೀಡಿಯೋಗ್ರಫಿ – ಎಲ್ಲವೂ ಉಚಿತ |ಬಿ. ಪಿ. ಎಲ್. ಕಾರ್ಡ್ ಹೊಂದಿದವರಿಗೆ ಚಿನ್ನದ ತಾಳಿ!

ಇಂದಿನ ದಿನಗಳಲ್ಲಿ ಮದುವೆ ಅಂದ್ರೆ ಬಹಳಷ್ಟು ಖರ್ಚುಗಳಿರುತ್ತದೆ ಅದು ಮದುವೆ ನಡೆದಿರುವ  ಮನೆಯವರಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಮದುವೆಗೆ ಬೇಕಾಗುವ ಬಟ್ಟೆಗಳಿಂದ ಹಿಡಿದು ಮದುವೆಯ ಹಾಲ್, ಊಟದ ವ್ಯವಸ್ಥೆ, ಫೋಟೋಗ್ರಫಿ, ತಾಳಿ, ಪುರೋಹಿತರ ಖರ್ಚು ಹೀಗೇ ಎಲ್ಲಾ ಸೇರಿ ಖರ್ಚು ಹತ್ತು ಲಕ್ಷಕ್ಕಿಂತ ಹೆಚ್ಚೇ ಆಗುತ್ತದೆ.ಹೀಗಿರುವಾಗ ಅತ್ಯಂತ ಕಡಿಮೆ ಖರ್ಚಿನಲ್ಲಿ, ಅದೂ ಕೇವಲ 1.5 ಲಕ್ಷದಲ್ಲಿ ಮದುವೆ ಮಾಡಿಸುವ ಪ್ಯಾಕೇಜ್ ಮದುವೆ ಒಂದರ ಬ್ಯಾನರ್ ಇದೀಗ ವೈರಲ್ ಆಗಿದೆ.

 

ಕಡಿಮೆ ಖರ್ಚಿನಲ್ಲಿ ಆದರೂ ಎಲ್ಲಾ ಮದುವೆ ಸಮಾರಂಭಗಳಲ್ಲಿ ಇರುವಂತಹ ಪ್ರತಿಯೊಂದು ಕಾರ್ಯಕ್ರಮಗಳಿವೆ. ಬೆಳಗ್ಗೆ ಬೇಗನೆ ಬರುವ ಅತಿಥಿಗಳಿಗೆ ಘಮ ಘಮವಾದ ತಿಂಡಿ ತಿನಿಸುಗಳ ವ್ಯವಸ್ಥೆ , ಮದುವೆಗೆ ಆಗಮಿಸುವ ಎಲ್ಲಾ ಅತಿಥಿಗಳಿಗೆ ಆಸೀನರಾಗಲು ಫಂಕ್ಷನ್ ಹಾಲ್, ಮದುವೆಗೆ ಸೊಬಗು ನೀಡಲು ಮಂಗಳವಾದ್ಯ, ನಾದಸ್ವರ, ಡೋಲು, ಸರಳವಾದ ಮದುವೆಗೆ ಸರಳವಾದ ವೇದಿಕೆಯ ಡೆಕೋರೇಷನ್, ಎಲ್ಲಾ ಇದ್ದೂ ಪುರೋಹಿತರಿಲ್ಲದಿದ್ದರೆ ಹೇಗೆ ಹಾಗಾಗಿ ಶಾಸ್ತ್ರೀಯವಾಗಿ ಮದುವೆ ಕಾರ್ಯ ನಡೆಸಲು ಸಾರಥಿಯಾಗಿ  ಪುರೋಹಿತರು ಇರುತ್ತಾರೆ.

ಅಲ್ಲದೆ, ವಧು-ವರರೊಂದಿಗೆ ನಮ್ಮ ಆಗಮನದ ಸಂತೋಷದ ನೆನಪುಗಳನ್ನು ಹಂಚಿಕೊಳ್ಳಲು, ಫೋಟೋ ಕ್ಲಿಕ್ಕಿಸಿ ನಮ್ಮ ಸಂಭ್ರಮವನ್ನು ಹೆಚ್ಚಿಸಲು ಫೋಟೋಗ್ರಫಿ, ವಿಡಿಯೋಗ್ರಫಿ ಕೂಡಾ ಇದೇ ಪ್ಯಾಕೇಜ್ ಅಡಿಯಲ್ಲಿ ಬರುತ್ತವೆ. ಮದುವೆಯ ಪ್ಯಾಕೇಜಿನ ಒಳಗೆ ಲಭ್ಯ.

ಇಷ್ಟೆಲ್ಲಾ ಮದುವೆ ಸಮಾರಂಭದ ಒಟ್ಟು ಖರ್ಚ್ ಕೇವಲ 1.5 ಲಕ್ಷ ರೂಪಾಯಿಗಳು. ಅಷ್ಟೇ ಅಲ್ಲದೆ ಬಿ. ಪಿ. ಎಲ್. ಕಾರ್ಡ್ ಹೊಂದಿದವರಿಗೆ ಚಿನ್ನದ ತಾಳಿ, ಬಟ್ಟೆ, ಸೀರೆ, ಛತ್ರಿ, ಪೇಟ, ಗಾಜಿನ ಬಳೆ, ಅರಶಿಣ ಕುಂಕುಮ ಅವರೇ ನೀಡುತ್ತಾರೆ. ಯಾರಿಗುಂಟು ಯಾರಿಗಿಲ್ಲ ಈ ಅವಕಾಶ ?ಇನ್ನೇನು ಮದುವೆ ಯಾವುದೇ ಕೊರತೆಯಿಲ್ಲದೆ ನಡೆದ ನಂತರ ಊಟದ ಸಮಯ ಎಲ್ಲರ ಹೊಟ್ಟೆ ತಾಳ ಹಾಕುತ್ತಿರುತ್ತದೆ ಅದಕ್ಕಾಗಿ ಬಾಯಿ ಚಪ್ಪರಿಸಿಕೊಂಡು ತಿನ್ನಲು ಭರ್ಜರಿ ಊಟದ ವ್ಯವಸ್ಥೆ ಇರುತ್ತದೆ.

ಇನ್ನೇಕೆ ತಡ ಒಂಟಿ ಕಾಲಿನಲ್ಲಿ ಮದುವೆಗಾಗಿ ಚಡಪಡಿಸುತ್ತಿರುವ ಎಲ್ಲಾ ಯುವಕ ಯುವತಿಯರೆ ?!  ಶಾಸ್ತ್ರೋಸ್ತವಾಗಿ, ಸರಳತೆಯ ಮತ್ತು ವಿಜೃಂಭಣೆಯಿಂದ ಅತಿ ಶ್ರೇಷ್ಠ ಕಾರ್ಯವಾದ ಮದುವೆಯನ್ನು ಕಡಿಮೆ ಖರ್ಚಿನಲ್ಲಿ ಮಾಡಿಸುವ ತಂಡ ನಿಮಗಾಗಿ ಕಾದು ಕೂತಿದೆ. ಮೈಸೂರಿನ ಮೈಸೂರ್ ಮನೀಶ್ ಎನ್ನುವವರು ಸಮಾಜದಲ್ಲಿ ಒಂದು ಬದಲಾವಣೆ ತರುವುದಕ್ಕೋಸ್ಕರ ನಿಮ್ಮ ಸಪ್ತಪದಿ ಹೆಜ್ಜೆಯ ಜೊತೆಗೆ ಅವರೂ ಒಂದು ಹೆಜ್ಜೆ ಸೇರಿಸಿದ್ದಾರೆ. ಅವರನ್ನು ನಾವೆಲ್ಲ ಬೆಂಬಲಿಸೋಣ.ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ :ಮೈಸೂರ್ ಮನೀಶ್,mobile:93421 83867

Leave A Reply

Your email address will not be published.