Travel : ಭಾರತದ ಟಾಪ್ 5 ಹೌಸ್ ಬೋಟ್ ತಾಣ ಯಾವುದೆಲ್ಲ? ಇಲ್ಲಿದೆ ಉತ್ತರ!!!
ಭಾರತ ಕೇವಲ ಸಂಸ್ಕೃತಿಯ ತವರು ಮಾತ್ರವಲ್ಲದೆ, ಸೌಂದರ್ಯದ ಗಣಿಯೆಂದರೆ ಎಂದರೆ ತಪ್ಪಾಗದು. ವಿಶೇಷತೆಯ ಆಗರವಾಗಿರುವ ಕಲೆ , ಸಾಹಿತ್ಯದ ಜೊತೆಗೆ ವಿಭಿನ್ನ ಆಚರಣೆ, ಜೀವನ ಶೈಲಿಯನ್ನು ಒಳಗೊಂಡಿದೆ.
ಸುಪ್ರಸಿದ್ಧ ಪುರಾತನ ಹಿನ್ನೆಲೆಯುಳ್ಳ ದೇವಾಲಯಗಳು, ಕಣ್ಣಿಗೆ ಹಬ್ಬವನ್ನು ಉಣ ಬಡಿಸುವ ಪ್ರಕೃತಿಯ ಮಡಿಲಲ್ಲಿ ಸೊಬಗನ್ನು ಕಣ್ಣಾರೆ ಸವಿಯಬಹುದು. ಬೆಟ್ಟ ಗುಡ್ಡಗಳ ನಡುವೆ ಜಲಪಾತಗಳು, ಇತಿಹಾಸ ಅರಹುವ ಅರಮನೆಗಳು, ಇವೆಲ್ಲವೂ ಭಾರತದ ಸೊಬಗಿಗೆ ಶಿರಮುಕುಟದಂತಾಗಿದೆ.
ವಿಭಿನ್ನ ವೈವಿಧ್ಯಗಳ ಸಂಗಮವಾಗಿರುವ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳಲು ಮನಸ್ಸು ಮಾಡಿದರೆ ನೋಡಲು ಬೇಕಾದಷ್ಟು ಸುಂದರ ರಮಣೀಯ ತಾಣಗಳಿವೆ. ಕೆಲಸದ ಒತ್ತಡದ ಜಂಜಾಟದ ಜೀವನದಲ್ಲಿ ಕೊಂಚ ಮಟ್ಟಿಗಾದರೂ ವಿಶ್ರಾಂತಿ ನೆಮ್ಮದಿ ಸಿಕ್ಕರೆ ಸಾಕು ಎಂದು ಬಯಸುವವರು ಹೆಚ್ಚು. ಪ್ರವಾಸ ಎಂದೊಡನೆ ಮೈಮನ ನವಿರೇಳಿ ಉಲ್ಲಾಸ ಉತ್ಸಾಹ ದುಪ್ಪಟ್ಟಾಗುತ್ತದೆ.
ಪ್ರವಾಸದಲ್ಲಿ ಹೌಸ್ ಬೋಟ್ ನವೀನ ಅನುಭವದ ಜೊತೆಗೆ ಸಂತೋಷವನ್ನು ಇಮ್ಮಡಿಸುವುದರಲ್ಲಿ ಸಂದೇಹವಿಲ್ಲ. ಹೌಸ್ಬೋಟ್ಗಳೆಂದರೆ ಮನೆಯಂತೆ ಇರುವ ದೋಣಿಗಳು. ನೀರಿನ ಮಧ್ಯದಲ್ಲಿ ಬೋಟ್ಗಳ ಮೇಲಿರುವ ಮನೆಯಂತೆ ಭಾಸವಾಗುವ ಅನುಭೂತಿ ಸುಂದರವಾಗಿದ್ದು, ಹೊಸ ಅನುಭವವನ್ನು ನೀಡುತ್ತದೆ. ಇದರ ಜೊತೆಗೆ ಸೂರ್ಯೋದಯ, ಸೂರ್ಯಾಸ್ತಗಳನ್ನು ಕೂಡ ಕಣ್ತುಂಬಿ ಕೊಳ್ಳಬಹುದು.
ಭಾರತದ ಟಾಪ್ 5 ಹೌಸ್ಬೋಟ್ ತಾಣಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗಿರಿಧಾಮಗಳಿಗೆ ಹೆಸರುವಾಸಿಯಾದ ಭಾರತದ ಒಂದು ರಾಜ್ಯವೆಂದರೆ ಅಸ್ಸಾಂ , ಸುಂದರ ಚಹಾ ತೋಟಗಳು, ಬ್ರಹ್ಮಪುತ್ರ ನದಿ ಅಲ್ಲಿನ ವಿಶೇಷತೆಯನ್ನು ಒಳಗೊಂಡಿದೆ.
ಅಲ್ಲಿನ ದೋಣಿ ವಿಹಾರ ಮತ್ತು ಹೌಸ್ಬೋಟ್ಗಳು ಪ್ರವಾಸಿಗರಿಗೆ ಸಂತೋಷ ನೀಡುವುದರಲ್ಲಿ ಸಂದೇಹವಿಲ್ಲ. ಇದರ ಜೊತೆಗೆ ಅಲ್ಲಿನ ಡಾಲ್ಫಿನ್ ಮತ್ತು ವಲಸೆ ಹಕ್ಕಿಗಳನ್ನು ಸಹ ನೋಡಬಹುದಾಗಿದೆ.
ಸ್ವರ್ಣಾ ನದಿ ಹೌಸ್ಬೋಟ್ ಉಡುಪಿಯ ಏಕೈಕ ಹಿನ್ನೀರು ಹೌಸ್ಬೋಟ್ ಆಗಿದ್ದು, ತೆಂಗಿನ ತೋಟ, ಗದ್ದೆಗಳ ಸುಂದರ ದೃಶ್ಯಗಳನ್ನು ಒಳಗೊಂಡಿದ್ದು, ಪ್ರವಾಸಿಗರಿಗೆ ಹಳ್ಳಿಯ ಸುಂದರ ಪರಿಸರದ ಅನುಭವ ನೀಡುವ ಜೊತೆಗೆ ಐಷಾರಾಮಿಯಿಂದ ಬಜೆಟ್ವರೆಗು ಆಯ್ಕೆಗಳಿರುವ ಹೌಸ್ಬೋಟ್ಗಳನ್ನು ಒಳಗೊಂಡಿದೆ.
ಸ್ವರ್ಣಾ ನದಿ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಬೆಳಗ್ಗೆ, ಸಂಜೆ ಹಾಗೂ ರಾತ್ರಿ ಯಾನ ಎನ್ನುವ ೩ ವಿಭಾಗ ಮಾಡಲಾಗಿದೆ. ೩೫ ರಿಂದ ೪೦ ಜನರ ಸಾಮರ್ಥ್ಯ ಹೊಂದಿರುವ ಈ ಬೋಟ್ ಹೌಸ್ ನಲ್ಲಿ ಶೌಚಾಲಯ, ಅಡುಗೆಕೋಣೆಯ ವ್ಯವಸ್ಥೆ ಕೂಡಾ ಮಾಡಲಾಗಿದೆ.
ಇದಲ್ಲದೆ ಮೀಟಿಂಗ್, ವರ್ಕ್ ಶಾಪ್, ಬರ್ತ್ ಡೇ ಆಯೋಜನೆ ಮಾಡಲು ಸ್ಥಳಾವಕಾಶವನ್ನು ಹೊಂದಿದೆ.ಬೋಟ್ ನಲ್ಲಿ ಕುಳಿತು ಅಕ್ಕಪಕ್ಕ ನೋಡಿದರೆ ನಾವು ಬ್ರಹ್ಮಾಂಡದ ಮಧ್ಯದಲ್ಲಿ ಕುಳಿತು ಪ್ರಕೃತಿ ತಾಯಿಯ ಪೋಷಣೆಯಲ್ಲಿರುವಂತೆ ಉಸಿರನ್ನು ತೆಗೆದುಕೊಳ್ಳುವಂತಹ ಕುತೂಹಲವಾದ ಅನುಭವವನ್ನು ನೀಡುತ್ತದೆ.
ಸೂರ್ಯನು ಪ್ರಕಾಶಮಾನವಾಗಿ ಕಾಣುವ ಜೊತೆಗೆ ಹಿನ್ನೀರಿನಾದ್ಯಂತ ಹರಿಯುವ ತಂಪಾದ ಗಾಳಿ ಆತಂಕ ಮತ್ತು ಒತ್ತಡಮುಕ್ತಗೊಳಿಸುತ್ತದೆ.
ಕೇರಳ ಇತಿಹಾಸದ ಅತ್ಯಂತ ಪ್ರಮುಖ ತಾಣವಾಗಿದ್ದು, ಇಂದು ಇದು ತನ್ನ ಬೋಟ್ ರೇಸ್ಗಳು, ಹಿನ್ನೀರಿನ ರಜಾದಿನಗಳು, ಬೀಚ್ಗಳು, ಹಡಗು ನಿರ್ಮಾಣ ಉತ್ಪನ್ನಗಳು ಮತ್ತು ತೆಂಗಿನ ನಾರಿನ ಉದ್ಯಮಗಳಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಹತ್ತಿರದಲ್ಲಿ ಎಲ್ಲಾ ಪ್ರವಾಸಿಗರನ್ನು ಸೆಳೆಯುವ ಹಳೆಯ ಲೈಟ್ಹೌಸ್ ಇದೆ. ಅಲಾಪ್ಪುಝಾದ ಮತ್ತೊಂದು ಮನರಂಜನೀಯ ಅನುಭವ ಎಂದರೆ ಹೌಸ್ಬೋಟ್ ನೌಕಾಯಾನವಾಗಿದೆ. ಈ ಹೌಸ್ಬೋಟ್ಗಳು ಹಿಂದಿನ ಕಾಲದ ಕೆತ್ತುವಲ್ಲಮ್ ನ ಪುನರ್ ನಿರ್ಮಾಣಗೊಂಡ ಅಲಾಪ್ಪುಝಾದ ಹಿನ್ನೀರಿನಲ್ಲಿ ಕಂಡುಬರುತ್ತವೆ.
ಹಿನ್ನೀರು ಮತ್ತು ಹೌಸ್ಬೋಟ್ಗಳು ಎಂದ ತಕ್ಷಣ ಮೊದಲು ನೆನಪಾಗುವುದೇ ಕೇರಳ. ಕೆಟ್ಟವಲ್ಲಂ ಎಂದು ಕರೆಯಲ್ಪಡುವ ಹೌಸ್ಬೋಟ್ ಸಾಕಷ್ಟು ಜನಪ್ರಿಯವಾಗಿದೆ. ಅಲಪ್ಪುಳ (ಅಲೆಪ್ಪಿ), ಕುಮಾರಕೋಮ್ ಮತ್ತು ಕೋವಲಂಗಳು ಹೌಸ್ಬೋಟ್ ಅಡ್ವೆಂಚರ್ ತಾಣಗಳು ಕೂಡ ಅಲ್ಲಿದೆ. ಪ್ರವಾಸಿಗರು ಸುಂದರ ಪ್ರಕೃತಿಯ ಸೊಬಗನ್ನು ಕಣ್ಣಾರೆ ಸವಿಯಬಹುದು.
ಹೆಚ್ಚಿನ ಜನರ ನೆಚ್ಚಿನ ತಾಣ ಆಗಿರುವ ಗೋವಾ ಸಾಮಾನ್ಯವಾಗಿ ಪಾರ್ಟಿ ಮತ್ತು ನೈಟ್ಲೈಫ್ಗಳಿಗೆ ಹೆಸರುವಾಸಿಯಾಗಿದೆ. ಅಲ್ಲಿ ಐಷಾರಾಮಿ ಹೌಸ್ಬೋಟ್ಗಳನ್ನು ಸಹ ನೋಡಬಹುದು. ಸುಂದರ ಕ್ಷಣಗಳನ್ನು ಆಸ್ವಾದಿಸುವ ಪ್ರವಾಸಿ ಪ್ರಿಯರು ಇಲ್ಲಿಗೆ ಭೇಟಿ ನೀಡಬಹುದು.
ಭಾರತದಲ್ಲಿ ಹೌಸ್ಬೋಟ್ಗೆ ಬಹಳ ಪ್ರಸಿದ್ಧಿ ಪಡೆದ ಸ್ಥಳವೆಂದರೆ ಅದು ಶ್ರೀನಗರದಲ್ಲಿರುವ ದಾಲ್ ಲೇಕ್. ದಾಲ್ ಸರೋವರದ ಮೇಲಿರುವ ಹೌಸ್ಬೋಟ್ಗಳು ಸ್ವಪ್ನನಗರಿಯಂದರೆ ಕಾಣಿಸುವುದಲ್ಲದೆ, ಅಲ್ಲಿನ ಸನ್ಸೆಟ್ ಒಂದು ಅದ್ಭುತ ದೃಶ್ಯವನ್ನು ಕಣ್ತುಂಬಿ ಕೊಳ್ಳಬಹುದು.
ಪ್ರವಾಸ ಮಾಡಲು ಬಯಸುವವರು ಈ ಸ್ಥಳಗಳಿಗೆ ಭೇಟಿ ನೀಡಿ ಸಂತೋಷದ ಕ್ಷಣಗಳನ್ನು ಕಳೆಯಬಹುದು