ದೀಪಾವಳಿ ಹಬ್ಬಕ್ಕೆ ಮತ್ತೆ ಬೆಲೆ ಏರಿಕೆ ಬಿಸಿ | ಖಾದ್ಯ ತೈಲ ದರ ಹೆಚ್ಚಳ
ದೀಪಾವಳಿ ಹಬ್ಬದ ಹೊಸ್ತಿಲಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಾಲಿನ ದರ ಏರಿಕೆಯ ಬಿಸಿ ತಟ್ಟಿದ ನಡುವೆ,ಈರುಳ್ಳಿ ಬೆಲೆ ಏರಿಕೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಈಗಾಗಲೇ ಕಂಗೆಟ್ಟಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಶಾಕ್ ಎದುರಾಗಿದ್ದು, ಇದೀಗ ಖಾದ್ಯ ತೈಲ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಕಳೆದ 15 ದಿನಗಳಿಂದ ಕಚ್ಚಾ ತೈಲ ಬೆಲೆ ಹೆಚ್ಚಳದ ಜೊತೆ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿರುವುದು ಮೂಲ ಕಾರಣವಾದರೆ, ಭಾರತವು ಶೇಕಡಾ 70ರಷ್ಟು ತೈಲವನ್ನು ಅಮದು ಮಾಡಿಕೊಳ್ಳುತ್ತಿರುವುದು ಈ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.
ಇನ್ನು ರಷ್ಯಾ-ಉಕ್ರೇನ್ ಯುದ್ಧವೂ ಸೂರ್ಯಕಾಂತಿ ಎಣ್ಣೆಯ ಪೂರೈಕೆಗೆ ಅಡ್ಡಿಯಾಗಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಕಳೆದ ವಾರದಲ್ಲಿ ತಾಳೆ ಎಣ್ಣೆ ಬೆಲೆ 10 ರಿಂದ 12 ರೂಪಾಯಿ, ಸೋಯಾಬಿನ್ ಆಯಿಲ್ ಬೆಲೆ 14 ರಿಂದ 16 ರೂಪಾಯಿ ಹಾಗೂ ಸೂರ್ಯಕಾಂತಿ ಎಣ್ಣೆ ಬೆಲೆ ಪ್ರತಿ ಲೀಟರ್ ಗೆ 18 ರಿಂದ 20 ರೂಪಾಯಿ ಚಿಲ್ಲರೆ ಮಾರಾಟದಲ್ಲಿ ಏರಿಕೆಯಾಗಿದೆ. ಸಾಮಾನ್ಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನವೇ ಶಾಕ್ ಎದುರಾಗಿದೆ..