WhatsApp ನಲ್ಲಿ ಇನ್ನು ಮುಂದೆ ಅಪ್ಪಿತಪ್ಪಿಯೂ ಈ ಕೆಲಸ ಮಾಡ ಬಾರದು!!!
ಮೆಟಾ-ಮಾಲೀಕತ್ವದ ಜನಪ್ರಿಯ ವಾಟ್ಸಪ್ ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ವಾಟ್ಸಾಪ್ ಚಾಟ್, ವಾಟ್ಸಾಪ್ ಕಾಲ್, ಅಥವಾ ವಾಟ್ಸಾಪ್ ವೀಡಿಯೊ ಕಾಲ್ ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದೆ. ಇದು ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಿಗಿಂತ ಹೆಚ್ಚು ಸುರಕ್ಷಿತವಾಗಿದ್ದು ತ್ವರಿತ ಸಂದೇಶವನ್ನು ಕಳುಹಿಸಲು ನೆರವಾಗುತ್ತದೆ.
ದಿನದಿಂದ ದಿನಕ್ಕೆ ಹೊಸ ಅಪ್ಡೇಟ್ ಮಾಡುತ್ತಾ ಹೊಸ ವೈಶಿಷ್ಟ್ಯದ ಮೂಲಕ ಜನರ ಬಳಕೆಗೆ ಅವಕಾಶ ಕಲ್ಪಿಸಿರುವ ವಾಟ್ಸಪ್ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲ ವಿಚಾರಗಳಿವೆ. ವಾಟ್ಸಪ್ ಸಂಸ್ಥೆ ಪ್ರತಿ ತಿಂಗಳು ಸರಾಸರಿ 20 ಲಕ್ಷ ಖಾತೆಗಳನ್ನು ನಿಷೇಧಿಸುತ್ತಿದ್ದು, ನಿಷೇಧಿತ ಖಾತೆಗಳ ದೊಡ್ಡ ಸಂಖ್ಯೆಯ ಹೊರತಾಗಿಯೂ, ವಾಟ್ಸಪ್ ಮೂಲಕ ನಕಲಿ ಸಂದೇಶಗಳನ್ನು ಹರಡುವ ಕಳವಳವನ್ನು ಮುಂದುವರೆಸಿದೆ.
ಇದರಿಂದ ವಾಟ್ಸಪ್ ಬಳಕೆದಾರರು ತಮ್ಮ ಖಾತೆ ನಿಷೇಧವಾಗುವುದನ್ನು ತಡೆಯಲು ಅನುಸರಿಸಬೇಕಾದ ಕೆಲವು ಪ್ರೋಟೋಕಾಲ್ಗಳನ್ನು ಅಧಿಕೃತವಾಗಿ ಘೋಷಿಸಿದೆ. ಪ್ಲಾಟ್ಫಾರ್ಮ್ ವಾಟ್ಸಪ್ ತನ್ನ ಅಪ್ಲಿಕೇಷನ್ ಮೂಲಕ ದ್ವೇಷದ ಸಂದೇಶಗಳು, ಬಾಟ್ಗಳು, ನಕಲಿ ಸುದ್ದಿಗಳು ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೋಟ್ಯಾಂತರ ಬಳಕೆದಾರರ ಖಾತೆಗಳನ್ನು ನಿರ್ಬಂಧಿಸುತ್ತಿದೆ.
ಕಳೆದ ಆಗಸ್ಟ್ ಒಂದೇ ತಿಂಗಳಲ್ಲೇ ವಾಟ್ಸಪ್ ತನ್ನ ಪ್ಲಾಟ್ಫಾರ್ಮ್ನಿಂದ 23 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದ್ದು, ಒಟ್ಟಾರೆ ಕಳೆದೆರಡು ವರ್ಷಗಳಲ್ಲಿ 3 ಕೋಟಿಗೂ ಅಧಿಕ ಖಾತೆಗಳನ್ನು ಬ್ಲಾಕ್ ಮಾಡಿದೆ.ವಾಟ್ಸಪ್ ಸಂಸ್ಥೆ ಪ್ರತಿ ತಿಂಗಳು ಸರಾಸರಿ 20 ಲಕ್ಷ ಖಾತೆಗಳನ್ನು ನಿಷೇಧಿಸುತ್ತಿದ್ದು, ನಿಷೇಧಿತ ಖಾತೆಗಳ ದೊಡ್ಡ ಸಂಖ್ಯೆಯ ಹೊರತಾಗಿಯೂ, ವಾಟ್ಸಪ್ ಮೂಲಕ ನಕಲಿ ಸಂದೇಶಗಳನ್ನು ಹರಡುವ ಕಳವಳವನ್ನು ಮುಂದುವರೆಸಿದೆ.
ವಾಟ್ಸಪ್ ತನ್ನ “ಮಾಸಿಕ ಬಳಕೆದಾರ ಸುರಕ್ಷತಾ ವರದಿ”ಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಯಾವ ರೀತಿಯ ಖಾತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಅವುಗಳಲ್ಲಿ ಎಷ್ಟು ಬ್ಯಾನ್ ಮಾಡಲಾಗಿದೆ ಎಂಬುದರ ಕುರಿತು ವಿವರಗಳನ್ನು ಒದಗಿಸಲಾಗಿದೆ. ವಾಟ್ಸಪ್ ಸಂಸ್ಥೆ ಹೇಳುವಂತೆ, “ಉದ್ದೇಶಪೂರ್ವಕವಾಗಿ, ಕಂಪನಿಯ ನಿಯಮಗಳನ್ನು ಉಲ್ಲಂಘಿಸುವ ಚಟುವಟಿಕೆಯನ್ನು ಒಳಗೊಂಡಿರುವ ಖಾತೆಗಳನ್ನು ನಿಷೇಧಿಸಲಾಗುತ್ತದೆ.
ಅಸಹಜ ನಡವಳಿಕೆ ಹೊಂದಿರುವ ವಾಟ್ಸಪ್ ಖಾತೆಗಳನ್ನು ಗುರುತಿಸಲು ಮತ್ತು ಕ್ರಮ ತೆಗೆದುಕೊಳ್ಳಲು ವಾಟ್ಸಪ್ ಸ್ಪ್ಯಾಮ್ ಪತ್ತೆ ತಂತ್ರಜ್ಞಾನವನ್ನು ಬಳಸುತ್ತದೆ. ಹಾಗಾಗಿ, ನೀವು ಹಲವಾರು “ಗುಡ್ ಮಾರ್ನಿಂಗ್” ಸಂದೇಶಗಳನ್ನು ಫಾರ್ವರ್ಡ್ ಮಾಡಿದರೂ ಕೂಡ ವಾಟ್ಸಪ್ ಖಾತೆಯನ್ನು ಬ್ಯಾನ್ ಮಾಡುವ ಸಾಧ್ಯತೆಯಿದೆ. ಹಾಗಾದರೆ, ವಾಟ್ಸಪ್ ಖಾತೆಯನ್ನು ಬ್ಯಾನ್ ಆಗದಂತೆ ತಡೆಯಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು .
ವಾಟ್ಸಪ್ ನಿಯಮದ ಪ್ರಕಾರ, ಅಶ್ಲೀಲ, ಅಕ್ರಮ, ಅನಗತ್ಯ, ಬೆದರಿಕೆ ಮತ್ತು ಮಾನಹಾನಿಕಾರಕ ಸಂದೇಶಗಳನ್ನು ಕಳುಹಿಸುವಂತಿಲ್ಲ ಹಾಗೂ ಹಿಂಸೆಯನ್ನು ಪ್ರಚೋದನೆ ಮಾಡುವ ಸಂದೇಶ ರವಾನಿಸಬಾರದು. ಜೊತೆಗೆ ಯಾವುದೇ ರೀತಿಯ ಹಿಂಸಾಕೃತ್ಯಗಳಿಗೆ ಪ್ರಚೋದನೆ ನೀಡುವ ಪೋಸ್ಟ್ ಅನ್ನು ಬಳಕೆದಾರ ಹಂಚಿಕೊಂಡು ಪ್ರಸರಿಸಲು ವಾಟ್ಸಪ್ ಬಳಕೆ ಮಾಡಿಕೊಂಡರೆ ಆ ಖಾತೆಯು ಬ್ಲಾಕ್ ಆಗಬಹುದು.
ತಮ್ಮ ಕಾಂಟಾಕ್ಟ್ನಲ್ಲಿ ಇಲ್ಲದೇ ಇರುವವರಿಗೆ, ಯಾವುದೇ ಗುರುತು ಪರಿಚಯವೇ ಇಲ್ಲದ ವ್ಯಕ್ತಿಗೆ ಅನಗತ್ಯವಾಗಿ ವಾಟ್ಸಪ್ ಮೂಲಕ ಮೆಸೇಜ್ ಮಾಡಿ ಕಿರಿಕಿರಿ ಉಂಟುಮಾಡುವ ಪದೇಪದೇ ಮೆಸೇಜ್, ವಾಟ್ಸಪ್ ಕಾಲ್ ಮಾಡುವುದು ಕೂಡ ಸಮಸ್ಯೆಯನ್ನು ಸೃಷ್ಟಿಸಬಹುದು.
ಒಬ್ಬ ಬಳಕೆದಾರನ ವಾಟ್ಸಪ್ ಖಾತೆ ಕುರಿತು ಹಲವರು ರಿಪೋರ್ಟ್ ಮಾಡಿದ್ದರೆ, ಅಥವಾ ಬಹಳಷ್ಟು ಮಂದಿ ಆ ವ್ಯಕ್ತಿಯ ವಾಟ್ಸಪ್ನಲ್ಲಿ ಬ್ಲಾಕ್ ಮಾಡಿದ್ದರೆ,ಆಗ ಆ ಖಾತೆಯ ವಿರುದ್ಧ ವಾಟ್ಸಪ್ ಸೂಕ್ತ ಕ್ರಮ ಕೈಗೊಳ್ಳಬಹುದು. ಖಾತೆಯನ್ನೇ ಬ್ಯಾನ್ ಮಾಡುವ ಅಧಿಕಾರ ಕೂಡ ವಾಟ್ಸಪ್ಗಿದೆ.
ಬೇರೆ ಯಾರದೋ ಫೋಟೋ ವಾಟ್ಸಪ್ ಡಿಪಿ, ಹೆಸರು ಬಳಸಿಕೊಂಡು ಇನ್ನೊಬ್ಬರ ಹೆಸರಿನಲ್ಲಿ ವಾಟ್ಸಪ್ ಬಳಸುವುದು ನಿಯಮಬಾಹಿರವಾಗಿದೆ. ಹಾಗಾಗಿ ಈ ರೀತಿ ಬಳಕೆ ಮಾಡಿದರೆ ವಾಟ್ಸಪ್ ಸೂಕ್ತ ಕ್ರಮವನ್ನು ಕೈಗೊಳ್ಳುತ್ತದೆ.
ವಾಟ್ಸಪ್ ಪ್ಲಸ್ ಎನ್ನುವ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆ, ವಾಟ್ಸಪ್ ಗೋಲ್ಡ್, ವಾಟ್ಸಪ್ ಪ್ರೊ ಎನ್ನುವ ಅಪ್ಲಿಕೇಶನ್ ಬಳಕೆ ಕೂಡ ನಿಯಮಕ್ಕೆ ವಿರುದ್ಧವಾಗಿದೆ. ವಾಟ್ಸಪ್ ಮತ್ತು ವಾಟ್ಸಪ್ ಬಿಜಿನೆಸ್ ಎನ್ನುವ ಎರಡು ಅಪ್ಲಿಕೇಶನ್ ಹೊರತುಪಡಿಸಿ, ಬೇರಾವುದೇ ಅಪ್ಲಿಕೇಶನ್ ಅನ್ನು ವಾಟ್ಸಪ್ ಹೊಂದಿಲ್ಲ. ಈ ಬಗ್ಗೆ ಕಂಪನಿ ಕೂಡ ಅಧಿಕೃತವಾಗಿ ಪ್ರಕಟಿಸಿದೆ.
ಹೀಗಾಗಿ ವಾಟ್ಸಪ್ ಹೆಸರಿನ ನಕಲಿ ಮತ್ತು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆ ಮಾಡಿದರೆ ತೊಂದರೆಗಳು ಕಟ್ಟಿಟ್ಟ ಬುತ್ತಿ ಎಂಬುದನ್ನು ನೆನಪಿಡಬೇಕು. ವಾಟ್ಸಪ್ ಬಳಕೆ ಮಾಡುವಾಗ ಕೆಲ ವಿಚಾರಗಳನ್ನು ತಿಳಿದುಕೊಂಡು ಬಳಕೆ ಮಾಡುವುದು ಉತ್ತಮ.