ಕೃಷಿಕರೇ ನಿಮಗೊಂದು ಗುಡ್ ನ್ಯೂಸ್ | ಈ ಆರು ಬೆಳೆಗಳಿಗೆ ಸಿಕ್ತು ಬೆಂಬಲ ಬೆಲೆ!!!

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಇಲ್ಲಿ ಶೇ.60ಕ್ಕಿಂತ ಹೆಚ್ಚು ಜನಸಂಖ್ಯೆ ಕೃಷಿಯನ್ನೆ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗಿದ್ದರೂ ಕೂಡ ದೇಶದಲ್ಲಿ ಕೃಷಿ ಕ್ಷೇತ್ರ ಹಲವಾರು ಸಮಸ್ಯೆಯನ್ನು ಒಳಗೊಂಡಿದೆ.

ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ಅತಿವೃಷ್ಟಿ, ಅನಾವೃಷ್ಟಿಯ ನಡುವೆಯೂ ರೈತರು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡು ಕಾಯಕವೇ ಕೈಲಾಸ ಎಂದು ಜೀವಿಸುತ್ತಿದ್ದಾರೆ. ನೀರಾವರಿ, ಮಾರುಕಟ್ಟೆ ಸಮಸ್ಯೆ, ಬೆಲೆ ಕುಸಿತ, ಕಡಿಮೆ ಇಳುವರಿ ಮೊದಲಾದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಹಾಗಾಗಿ, ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲೆಂದೇ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಈ ಪೈಕಿ ‘ಕನಿಷ್ಠ ಬೆಂಬಲ ಬೆಲೆ’ ಯೋಜನೆ ಪ್ರಮುಖವಾಗಿದೆ. ಕೃಷಿ ಉತ್ಪಾದನೆ ಹೆಚ್ಚಳವಾದಾಗ ಬೆಲೆಗಳು ತೀವ್ರ ಇಳಿಕೆಯಾಗುತ್ತದೆ. ಇದರಿಂದ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವೇ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸುತ್ತದೆ.

ಇದರಿಂದ ಬೆಲೆ ಕುಸಿತದ ವಿರುದ್ಧ ರೈತರನ್ನು ರಕ್ಷಿಸಬಹುದಾಗಿದ್ದು, ಕನಿಷ್ಠ ಬೆಂಬಲ ಬೆಲೆಗಳು ಸರ್ಕಾರದಿಂದ ಕೃಷಿ ಉತ್ಪನ್ನಗಳಿಗೆ ನೀಡುವ ಖಾತರಿಯ ಬೆಲೆಯಾಗಿದೆ.

ಸರಿಯಾದ ಬೆಲೆಗೆ ಸರ್ಕಾರವೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಮಸ್ಯೆಯೂ ತಪ್ಪುತ್ತದೆ. ಅಲ್ಲದೆ ಸರ್ಕಾರವು ಸಾರ್ವಜನಿಕ ವಿತರಣೆಗಾಗಿ (ಪಡಿತರ) ಆಹಾರ ಧಾನ್ಯಗಳನ್ನು ಸಂಗ್ರಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕೇಂದ್ರ ಸರ್ಕಾರ ಇದೀಗ ಒಂದಿಷ್ಟು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ್ದು, ಗೋಧಿ, ಬಾರ್ಲಿ, ಅಲಸಂಡೆ ಹೆಸರುಕಾಳು, ಸೂರ್ಯಕಾಂತಿ, ಸಾಸಿವೆ ಸೇರಿದಂತೆ 6 ಬೇಳೆಕಾಳುಗಳ ಕನಿಷ್ಠ ಖರೀದಿ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಹೆಚ್ಚಿಸುವ ಮೂಲಕ ರೈತರಿಗೆ ಸಂತಸ ಸುದ್ದಿಯನ್ನು ನೀಡಿದೆ.

ಮಾರುಕಟ್ಟೆ ಋತುವಿಗಾಗಿ ಎಲ್ಲಾ ಕಡ್ಡಾಯ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ಖಾರಿಫ್ (ಬೇಸಿಗೆ) ಬೆಳೆಗಳ ಕೊಯ್ಲು ಮಾಡಿದ ತಕ್ಷಣ ರಾಬಿ (ಚಳಿಗಾಲ) ಬೆಳೆಗಳ ಬಿತ್ತನೆ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ. ಪ್ರಮುಖ ರಾಬಿ ಬೆಳೆಗಳೆಂದರೆ ಗೋಧಿ ಮತ್ತು ಸಾಸಿವೆ. ಅಧಿಕೃತ ಪ್ರಕಟಣೆ ಪ್ರಕಾರ, 2022-23 ಬೆಳೆ ವರ್ಷ (ಜುಲೈ-ಜೂನ್) ಮತ್ತು 2023-24 ಮಾರುಕಟ್ಟೆ ಋತುವಿಗಾಗಿ ಆರು ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವನ್ನು CCEA ಅನುಮೋದಿಸಲಾಗಿದೆ.

2021-22ರ ಬೆಳೆ ವರ್ಷದಲ್ಲಿ ಕ್ವಿಂಟಲ್‌ಗೆ 2,015 ರೂ.ಗಳಿಂದ ಈ ಬೆಳೆ ವರ್ಷಕ್ಕೆ ಗೋಧಿ ಎಂಎಸ್‌ಪಿಯನ್ನು 110 ರೂ.ನಿಂದ 2,125 ರೂ.ಗೆ ಹೆಚ್ಚಿಸಲಾಗಿದೆ. ಗೋಧಿ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಲ್‌ಗೆ 1,065 ರೂ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಂತರ ಕೇಂದ್ರದ ನಿರ್ಧಾರಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅನುರಾಗ್ ಠಾಕೂರ್ , ಗೋಧಿಯ ಎಂಎಸ್‌ಪಿಯನ್ನು 110 ರೂ, ಬಾರ್ಲಿ 100ರೂ, ಬೇಳೆ 105ರೂ, ಬೇಳೆ ಅಥವಾ ಮಸೂರ್ 500ರೂ, ರೇಪ್‌ಸೀಡ್ ಮತ್ತು ಸಾಸಿವೆ 400ರೂ. ಮತ್ತು ಸೂರ್ಯಕಾಂತಿ ಬೀಜ 209 ರೂ. ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.