New Pension Calculation ; ಇಪಿಎಫ್ ವೆಬ್ಸೈಟ್ ನಲ್ಲಿ ಪಿಂಚಣಿ ಕ್ಯಾಲ್ಕುಲೇಟರ್ | ಸುಲಭ ಸರಳ ವಿಧಾನಗಳ ಮೂಲಕ ಹೀಗೆ ಲೆಕ್ಕ ಮಾಡಿ!!!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಜನರ ಅನುಕೂಲಗಳಿಗಾಗಿ ಹೊಸ ನಿಯಮ ಜಾರಿಗೆ ತಂದಿದೆ. ಅಂದರೆ ಜೀವನಕ್ಕೆ ಆಧಾರವಾಗಿರುವ ಪಿಂಚಣಿ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳಲು ಪಿಎಫ್‌ಒ ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಹೊಸ ಪಿಂಚಣಿ ಕ್ಯಾಲ್ಕುಲೇಟರ್ ಅನ್ನು ಹಂಚಿಕೊಂಡಿದೆ. ಇದರ ಮೂಲಕ ಪಿಂಚಣಿದಾರರು ಪಿಂಚಣಿ ಮೊತ್ತವನ್ನು ಸುಲಭವಾಗಿ ಲೆಕ್ಕಹಾಕಬಹುದು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 1995 ರಲ್ಲಿ ಹೊಸ ಪಿಂಚಣಿ ಯೋಜನೆಯನ್ನು ತಂದಿತು.
ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶವಿದೆ ಎಂದು ಈಗಾಗಲೇ ತಿಳಿದಿರುವಿರಿ.

ಆದರೆ ಪ್ರಸ್ತುತ ಇಪಿಎಫ್‌ಒ ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಪಿಂಚಣಿ ಕ್ಯಾಲ್ಕುಲೇಟರ್ ಅನ್ನು ಅಪ್ಲೋಡ್ ಮಾಡಿದ್ದು, ಇದರ ಮೂಲಕ ಪಿಂಚಣಿದಾರರು ನಿವೃತ್ತಿಯ ನಂತರ ನಿಮಗೆ ಎಷ್ಟು ಪಿಂಚಣಿ ಸಿಗಲಿದೆ ಎಂದು ತಿಳಿಯಬಹುದು.

ನೀವು 50 ದ ನಂತರ ವರ್ಷದಿಂದ ಪಿಂಚಣಿ ಪಡೆಯಲು ಪ್ರಾರಂಭಿಸಿದರೆ, ನಿಮಗೆ ಎಷ್ಟು ಪಿಂಚಣಿ ಸಿಗುತ್ತದೆ? ಹೀಗೆ ಇತ್ಯಾದಿ ವಿಚಾರಗಳ ಬಗ್ಗೆ ನೀವು ತಿಳಿಯಬಹುದು.

ಮುಖ್ಯವಾಗಿ ಏಪ್ರಿಲ್ 1, 2014 ರಂದು ಅಥವಾ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸಿದ ಜನರು ಇಪಿಎಸ್ (EPS) ಕ್ಯಾಲ್ಕುಲೇಟರ್ ಅನ್ನು ಬಳಸಬಹುದಾಗಿದೆ.

ಹೊಸ ಪಿಂಚಣಿ ಲೆಕ್ಕಾಚಾರ ಮಾಹಿತಿ ಪಡೆಯುವ ಕ್ರಮಗಳು :
1.ವೆಬ್‌ಸೈಟ್‌ನಲ್ಲಿ, ನೀವು ಪಿಂಚಣಿದಾರರ ಜನ್ಮ ದಿನಾಂಕವನ್ನು ನಮೂದಿಸಬೇಕು. ಇಪಿಎಫ್ ಸದಸ್ಯರು 1ನೇ ಏಪ್ರಿಲ್ 2011 ಕ್ಕೆ 58 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಅಂದರೆ ಈ ಕ್ಯಾಲ್ಕುಲೇಟರ್ ಅನ್ನು ಬಳಸುವ ಮೊದಲು ಹುಟ್ಟಿದ ದಿನಾಂಕವು 1 ನೇ ಏಪ್ರಿಲ್ 1953 ರಂದು ಅಥವಾ ನಂತರ ಇರಬೇಕು.

  1. ಜನ್ಮ ದಿನಾಂಕವನ್ನು ನಮೂದಿಸಿದ ನಂತರ, ನೀವು ಉದ್ಯೋಗದ ಸೇರ್ಪಡೆ ಮತ್ತು ನಿರ್ಗಮನದ ವಿವರಗಳನ್ನು ಅಂದರೆ ನಿವೃತ್ತಿಯ ದಿನಾಂಕವನ್ನು ಕ್ಯಾಲ್ಕುಲೇಟರ್‌ನಲ್ಲಿ ನಮೂದಿಸಬೇಕು. ಇಪಿಎಫ್‌ಒ ನಿಯಮಗಳು ಸೇವೆಗೆ ಸೇರುವ ದಿನಾಂಕವು ನವೆಂಬರ್ 16, 1995 ರಂದು ಅಥವಾ ನಂತರ ಇರಬೇಕು ಎಂದು ಸೂಚಿಸುತ್ತದೆ.
  2. ನಂತರ ನೀವು ಎನ್‌ಸಿಪಿ (NCP) ದಿನದ ಸಂಖ್ಯೆಯನ್ನು ನಮೂದಿಸಬೇಕು. ಎನ್‌ಸಿಪಿ ಅಂದರೆ ನಾನ್-ಕಾಂಟ್ರಿಬ್ಯೂಟರಿ ಅವಧಿ, ಅಂದರೆ ನೀವು ಆ ದಿನಗಳಲ್ಲಿ ಆದಾಯವನ್ನು ಪಡೆದಿಲ್ಲ ಅಥವಾ ಸದಸ್ಯರ ಇಪಿಏಫ್ ಕೊಡುಗೆಯನ್ನು ಕಂಪನಿಯು ಪಾವತಿಸಿಲ್ಲ. ನೀವು ರಜೆಯಲ್ಲಿರುವ ದಿನವನ್ನು ನಿಮ್ಮ ಕೊಡುಗೆ ರಹಿತ ಅವಧಿ ಎಂದು ಕರೆಯುವ ರೀತಿಯಲ್ಲಿ ನೀವು ಇದನ್ನು ಅರ್ಥಮಾಡಿಕೊಳ್ಳಬಹುದು. ಎನ್‌ಸಿಪಿಯಲ್ಲಿ ಎರಡು ವಿಧಗಳಿವೆ. NCP-1 ನಲ್ಲಿ, ನೀವು 31ನೇ ಆಗಸ್ಟ್ 2014 ರವರೆಗಿನ ಎನ್‌ಸಿಪಿ ದಿನಗಳನ್ನು ನಮೂದಿಸಬೇಕು. ಮತ್ತೊಂದೆಡೆ, 31 ಆಗಸ್ಟ್ 2014 ರ ನಂತರ ಎನ್‌ಸಿಪಿ ದಿನಗಳನ್ನು NCP-2 ನಲ್ಲಿ ದಾಖಲಿಸಬೇಕು.
  3. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ​​ಪ್ರಕಾರ, ಒಬ್ಬ ಸದಸ್ಯರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಕೆಲಸ ಮಾಡಿದ್ದರೆ, ಅವರು ಆ ಎಲ್ಲಾ ಅವಧಿಗಳನ್ನು ಸೇರಿಸಬಹುದು. ಅಂದರೆ ನೀವು ಒಂದು ಕಂಪನಿಯಲ್ಲಿ ಎರಡು ವರ್ಷ ಕೆಲಸ ಮಾಡಿ ನಂತರ ಇನ್ನೊಂದು ಕಂಪನಿಯಲ್ಲಿ ಮೂರು ವರ್ಷ ಕೆಲಸ ಮಾಡಿದರೆ, ನಂತರ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ​​ಪ್ರಕಾರ, ನೀವು ಸೇವಾ ಅವಧಿಯಲ್ಲಿ ಎರಡೂ ಕಂಪನಿಗಳಲ್ಲಿ ಮಾಡಿದ ಕೆಲಸವನ್ನು ನಮೂದಿಸಬಹುದು.
  4. ಇದರ ನಂತರ ನೀವು ಪಿಂಚಣಿ ಪ್ರಾರಂಭವಾಗುವ ದಿನಾಂಕವನ್ನು ನೋಡುತ್ತೀರಿ. ಅಲ್ಲಿ ನೀವು ಮೊದಲ ಪಿಂಚಣಿ ಪಡೆದ ದಿನಾಂಕವನ್ನು ನಮೂದಿಸ ಬೇಕು.
  5. ನಂತರ ನಿಮಗೆ ಪಿಂಚಣಿ ವೇತನ ನಮೂದಿಸುವುದನ್ನು ನೋಡುತ್ತೀರಿ. ಇಲ್ಲಿ ನೀವು ನಿಮ್ಮ ಸಂಬಳವನ್ನು ನಮೂದಿಸಿ. ನಿಮ್ಮ ಪಿಂಚಣಿಯು 31 ಆಗಸ್ಟ್ 2014 ರಂದು ಅಥವಾ ಮೊದಲು ಪ್ರಾರಂಭವಾದರೆ, ಪಿಂಚಣಿ ವೇತನವು ಕಳೆದ 12 ತಿಂಗಳ ಸರಾಸರಿ ಆದಾಯವಾಗಿರುತ್ತದೆ ಮತ್ತು ಈ ದಿನಾಂಕದ ನಂತರ ಪಿಂಚಣಿ ಪ್ರಾರಂಭವಾದರೆ 60 ತಿಂಗಳ ಸರಾಸರಿ ಆದಾಯವಾಗಿರುತ್ತದೆ.
  6. EPFO ​​ನ ಹೊಸ ನಿಯಮಗಳ ಪ್ರಕಾರ, ಪಿಂಚಣಿ ಆದಾಯದ ಗರಿಷ್ಠ ಮಿತಿಯು ಆಗಸ್ಟ್ 31, 2014ರವರೆಗೆ ರೂ.6500 ಆಗಿತ್ತು, ನಂತರದ ದಿನಾಂಕಕ್ಕೆ ರೂ.15 ಸಾವಿರಕ್ಕೆ ಅಂದರೆ ಸೆಪ್ಟೆಂಬರ್ 1, 2014 ರವರೆಗೆ ಈ ಕ್ಯಾಲ್ಕುಲೇಟರ್ ಅನ್ನು ಬಳಸಲು 15 ಸಾವಿರಕ್ಕೆ ಹೆಚ್ಚಿಸಲಾಗಿದೆ. 31 ಆಗಸ್ಟ್ 2014 ರಂತೆ ಗರಿಷ್ಠ ಆದಾಯ ರೂ.6500 ಆಗಿರಬೇಕು.

8.ಎಲ್ಲಾ ಡೇಟಾವನ್ನು ನಮೂದಿಸಿದ ನಂತರ, ನಿಮ್ಮ ಮಾಸಿಕ ಪಿಂಚಣಿ ಕ್ಯಾಲ್ಕುಲೇಟರ್ನಲ್ಲಿ ಪಿಂಚಣಿ ವಿವರವನ್ನು ನೋಡಬಹುಸು. EPFO ಪ್ರಕಾರ, ಸೆಪ್ಟೆಂಬರ್ 1, 2014 ರಿಂದ, ಪಿಂಚಣಿದಾರರಿಗೆ ಕನಿಷ್ಠ 1 ಸಾವಿರ ರೂ ಪಿಂಚಣಿ ನೀಡಲಾಗುತ್ತದೆ, ಅಂದರೆ, ನಿಮ್ಮ ಪಿಂಚಣಿ ರೂ 540 ಆಗಿದ್ದರೆ, ಇಪಿಎಫ್‌ಒ ನಿಮಗೆ ರೂ 1000 ಪಿಂಚಣಿ ನೀಡುತ್ತದೆ.

58 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ?
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಪ್ರಕಾರ, 50 ವರ್ಷಗಳ ನಂತರ ಪಿಂಚಣಿ ಪಡೆಯಲು ಆರಂಭಿಸಬಹುದು. ಆದರೆ ನೀವು 58 ವರ್ಷಗಳ ಮೊದಲು ಪಿಂಚಣಿ ತೆಗೆದುಕೊಂಡರೆ, ನಂತರ ಇಪಿಎಫ್‌ಒ ವಾರ್ಷಿಕವಾಗಿ ಶೇ.4 ಪ್ರತಿಶತದಷ್ಟು ಕಡಿತಗೊಳಿಸುತ್ತದೆ. ಅಂದರೆ, 58 ರಿಂದ ಪಿಂಚಣಿ ತೆಗೆದುಕೊಳ್ಳುವ ಮೊದಲು ವರ್ಷಗಳ ಸಂಖ್ಯೆ, ಆ ವರ್ಷಗಳಿಗೆ 4% ದರದಲ್ಲಿ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

ಅಂದರೆ ಒಬ್ಬ ವ್ಯಕ್ತಿಯ ಪಿಂಚಣಿ ಮಾಹಿತಿಯ ಮಾದರಿ ಪ್ರಕಾರ :
ಸದಸ್ಯನ ಜನ್ಮ ದಿನಾಂಕ 2 ಅಕ್ಟೋಬರ್ 1964 ಮತ್ತು ಅವರು 27 ನವೆಂಬರ್ 1995 ರಂದು ಸೇವೆಯನ್ನು ಪ್ರಾರಂಭಿಸಿದ್ದಾರೆ. ಅವರು 21 ಜನವರಿ 2022 ರಂದು ರೂ 15,000 ರ ಪಿಂಚಣಿ ವೇತನದೊಂದಿಗೆ ನಿವೃತ್ತರಾಗುತ್ತಾರೆ. NCP ದಿನಗಳ ಸಂಖ್ಯೆ ಶೂನ್ಯವಾಗಿದ್ದರೆ. ಅವರ ಪಿಂಚಣಿ ಜನವರಿ 21, 2022 ರಿಂದ ಪ್ರಾರಂಭವಾಗಬೇಕಾದರೆ, ಈ ಎಲ್ಲಾ ಮಾಹಿತಿಯನ್ನು ಕ್ಯಾಲ್ಕುಲೇಟರ್‌ನಲ್ಲಿ ಭರ್ತಿ ಮಾಡಿದ ನಂತರ, ಅವರು ಮಾಸಿಕವಾಗಿ ರೂ. 3327 ರೂ ಪಿಂಚಣಿ ಪಡೆಯಲಿದ್ದಾರೆ ಎಂಬುದನ್ನು ನೀವು ಗಮನಿಸಬಹುದು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಪ್ರಕಾರವಾಗಿ ಈ ಮೇಲಿನ ಕ್ರಮವನ್ನು ಅನುಸರಿಸಿ ಪಿಂಚಣಿದಾರರು ನಿವೃತ್ತಿಯ ನಂತರ ನಿಮಗೆ ಎಷ್ಟು ಪಿಂಚಣಿ ಸಿಗಲಿದೆ ಎಂದು ತಿಳಿಯಬಹುದಾಗಿದೆ.

Leave A Reply

Your email address will not be published.