ಮಲಯಾಳಂ ನಟ ಮೋಹನ್ ಲಾಲ್ ನಟಿಸಿರುವ ‘ ಮಾನ್ ಸ್ಟರ್ ‘ ಸಿನಿಮಾ ಬ್ಯಾನ್ !

ಪ್ರಸ್ತುತ ಕೊರೋನ ನಂತರ ಇದೀಗ ಸಿನಿಮಾ ರಂಗದಲ್ಲಿ ಮತ್ತೆ ಝಲಕ್ ಎದ್ದಿದೆ. ಪ್ರೇಕ್ಷಕರು ಹೊಸ ಸಿನಿಮಾಗಳನ್ನು ಬಿಡುವು ಮಾಡಿಕೊಂಡು ನೋಡುವುದೇ ಒಂದು ಮಜಾ ಆಗಿದೆ.

 

ಇತ್ತೀಚಿಗೆ ಮಲಯಾಳಂನ ಖ್ಯಾತ ನಟ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್ ಅಭಿನಯದ ʼಮಾನ್ ಸ್ಟರ್‌ʼ ಸಿನಿಮಾ ಇದೇ ಅ.21 ರಂದು ತೆರೆಗೆ ಬರುವ ಸುದ್ದಿ. ಪ್ರಚಾರದಲ್ಲಿ ನಿರತರಾಗಿರುವ ಚಿತ್ರ ತಂಡಕ್ಕೆ ಇದೀಗ ಬ್ಯಾನ್‌ ಬಿಸಿ ತಟ್ಟಿದೆ.

ಮೋಹನ್‌ ಲಾಲ್‌ ಅವರ ಅಭಿಮಾನಿ ಬಳಗ ದೊಡ್ಡದು ಅಲ್ಲದೆ ಅವರ ಸಿನಿಮಾಗಳನ್ನು ನೋಡಲು ಕಾತುರತೆಯಿಂದ ಪ್ರೇಕ್ಷಕರು ಕಾಯುತ್ತಿರುತ್ತಾರೆ. ದೃಶ್ಯಂ ಸರಣಿಯ ಚಿತ್ರದ ಬಳಿಕ ಅವರ ಅಭಿನಯದ ಯಾವುದೇ ಸಿನಿಮಾ ಬಂದರೂ ಅದನ್ನು ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ವರದಿ ಮೂಲಕ ಗಲ್ಫ್‌ ದೇಶದಲ್ಲಿ “ಮಾನ್ ಸ್ಟರ್‌ʼ‌ ಚಿತ್ರವನ್ನು ಬ್ಯಾನ್‌ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಕಾರಣ ಸಿನಿಮಾದಲ್ಲಿ ಎಲ್ ಜಿಬಿಟಿ ( ಸಲಿಂಗ ಕಾಮಿ) ವಿಷಯವನ್ನು ತೋರಿಸಲಾಗಿದೆ. ಆ ಕಾರಣದಿಂದ ಗಲ್ಫ್‌ ದೇಶದಲ್ಲಿ ಇಂಥ ವಿಷಯಗಳನ್ನು ತೋರಿಸಬಾರದೆನ್ನುವ ನಿಯಮಗಳಿದ್ದು, ಅದಕ್ಕಾಗಿ ಚಿತ್ರವನ್ನು ಬ್ಯಾನ್‌ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಮೋಹನ್‌ ಲಾಲ್‌ ಚಿತ್ರದಲ್ಲಿ ಲಕ್ಕಿ ಸಿಂಗ್‌ ಎನ್ನುವ ಪಾತ್ರವನ್ನು ಮಾಡಲಿದ್ದಾರೆ. ಇದೊಂದು ಥಿಲ್ಲರ್‌ ಇನ್​ವೆಸ್ಟಿಗೇಷನ್​ ಕಥಾ ಹಂದರವುಳ್ಳ ಸಿನಿಮಾ. ಚಿತ್ರವನ್ನು ವೈಶಾಖ್ ನಿರ್ದೇಶನ ಮಾಡಿದ್ದು, ಲಕ್ಷ್ಮಿ ಮಂಜು, ಸಿದ್ದಿಕ್, ಲೀನಾ, ಹನಿ ರೋಸ್, ಸುದೇವ್ ನಾಯರ್, ಕೆಬಿ ಗಣೇಶ್ ಕುಮಾರ್ ಮತ್ತು ಜಾನಿ ಆಯಂಟನಿ ನಟಿಸಿದ್ದಾರೆ.

ಚಿತ್ರತಂಡವು ಗಲ್ಫ್ ದೇಶದ ಸೆನ್ಸಾರ್‌ ಬೋರ್ಡ್‌ ಗೆ ಚಿತ್ರವನ್ನು ಮರು ಪರಿಶೀಲಿಸಬೇಕೆಂದು ಮನವಿ ಮಾಡಿಕೊಂಡಿದೆ. ಒಂದು ವೇಳೆ ಮರು ಪರಿಶೀಲಿಸಿ ಚಿತ್ರವನ್ನು ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರೆ ಮುಂದಿನ ವಾರ ರಿಲೀಸ್‌ ಆಗಲಿದೆ ಎಂದು ವರದಿ ತಿಳಿಸಿದೆ.

Leave A Reply

Your email address will not be published.