ಹೀಗೂ ಉಂಟೇ..! ಶಾಲೆಗೆ ಒಂದೇ ಜಡೆ ಕಟ್ಟಿಕೊಂಡು ಬಂದ ವಿದ್ಯಾರ್ಥಿನಿ : ಮನಸ್ಸೋ ಇಚ್ಚೆ ಕೂದಲು ಕಟ್‌ ಮಾಡಿದ ಶಿಕ್ಷಕ

ಲಕ್ನೋ: ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯ ನವಾಬ್ ಗಂಜ್ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಒಂಡೆ ಜಡೆ ಕಟ್ಟಿಕೊಂಡು ಬಂದಿದ್ದಳು. ಈ ಕಾರಣಕ್ಕಾಗಿ ಮುಖ್ಯ ಶಿಕ್ಷಕ ಮಾಡಿದ್ದೇನು ಗೊತ್ತಾ? ಮುಂದೆ ಓದಿ…ಈ ಸಂಬಂಧ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಮುಖ್ಯ ಶಿಕ್ಷಕ ತರಗತಿಯೊಂದರಲ್ಲಿ ಲಾಕ್ ಮಾಡಿ ಅವಳ ಇಚ್ಛೆಗೆ ವಿರುದ್ಧವಾಗಿ ಕೂದಲನ್ನು ಕತ್ತರಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರು 2 ಜಡೆಯನ್ನು ಹಾಕಿಕೊಂಡು ಶಾಲೆಗೆ ಬರಬೇಕು ಎಂಬ ನಿಯಮವಿತ್ತು. ಆದರೆ 9ನೇ ತರಗತಿಯ ವಿದ್ಯಾರ್ಥಿನಿಯು ಒಂದೇ ಜಡೆಯನ್ನು ಹಾಕಿಕೊಂಡು ಹೋಗಿದ್ದರಿಂದ ಮುಖ್ಯಶಿಕ್ಷಕ ಕೋಪಗೊಂಡು,ಆಕೆಯನ್ನು ಕೊಠಡಿಯೊಂದರಲ್ಲಿ ಬಂಧಿಸಿ ಶಿಕ್ಷೆಯಾಗಿ ಆಕೆಯ ಕೂದಲನ್ನು ಕತ್ತರಿಸಿದ್ದಾರೆ.ಮುಖ್ಯಶಿಕ್ಷಕ ಈ ರೀತಿ ವಿದ್ಯಾರ್ಥಿನಿಯ ಕೂದಲನ್ನು ಕತ್ತರಿಸಿರುವುದು ಇದೇ ಮೊದಲಲ್ಲ. ಹಿಂದೆಯೂ ಇತರ ವಿದ್ಯಾರ್ಥಿನಿಯರ ಕೂದಲನ್ನು ಕತ್ತರಿಸಿದ್ದ ಎನ್ನುವ ಆರೋಪ ಬೆಳಕಿಗೆ ಬಂದಿದೆ.

 

ಘಟನೆಗೆ ಸಂಬಂಧಿಸಿ ಮುಖ್ಯಶಿಕ್ಷಕರ ವಿರುದ್ಧ ವಿದ್ಯಾರ್ಥಿನಿ ಫರೂಕಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆ. ಅಷ್ಟೇ ಅಲ್ಲದೇ ಮುಖ್ಯಶಿಕ್ಷಕನ ದುಷ್ಕೃತ್ಯಕ್ಕೆ ಶಿಕ್ಷೆಯಾಗದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿನಿ ಎಚ್ಚರಿಸಿದ್ದಾಳೆ. ಇನ್ನೂ ಮುಖ್ಯ ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿಯ ಇತರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಮಾತನಾಡಿ, ಸದ್ಯಕ್ಕೆ ಮುಖ್ಯ ಶಿಕ್ಷಕ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿ ಸದ್ಯದಲ್ಲೇ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Leave A Reply

Your email address will not be published.