ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್ : ಮತ್ತೊಂದು ಹೊಸ ಫೀಚರ್ ಶೀಘ್ರದಲ್ಲಿ..
ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇವಾಗ ಅಂತೂ ಯಾವುದೇ ಸೋಶಿಯಲ್ ಮೀಡಿಯಾಕ್ಕೂ ಕಮ್ಮಿ ಇಲ್ಲ ಎಂಬಂತೆ ಬಳಕೆದಾರರ ಭದ್ರತೆಯ ಜೊತೆಗೆ ಉತ್ತಮ ಫೀಚರ್ ಗಳನ್ನು ಜಾರಿಗೊಳಿಸಿದೆ. ಇದೀಗ ಮತ್ತೆ ಶೀಘ್ರದಲ್ಲೇ ಹೊಸ ಅಪ್ಡೇಟ್ ಕಾಣಿಸಿಕೊಳ್ಳಲಿದೆ.
ಸಾಮಾನ್ಯವಾಗಿ ಇನ್ಸ್ಟಾಗ್ರಾಮ್ ಸ್ಟೋರಿಗಳಿಗೆ ರಿಯಾಕ್ಟ್ ಮಾಡೋ ಎಮೋಜಿಯನ್ನು ಬಳಸುತ್ತೇವೆ. ಆದ್ರೆ, ವಾಟ್ಸಪ್ ಲೀ ಮಾತ್ರ ಸ್ಟೇಟಸ್ ಗೆ ರಿಪ್ಲೇ ಮಾಡೋದೊಂದೇ ಆಯ್ಕೆ ಇತ್ತು. ಇದೀಗ ವಾಟ್ಯಾಪ್ ನಲ್ಲೂ ಸ್ಟೇಟಸ್ ಗಳಿಗೆ ರಿಯಾಕ್ಟ್ ಮಾಡುವ ಆಪ್ಷನ್ ಗಳು ಬರಲಿದೆ. ಸ್ವೈಪ್ ಆಪ್ ಮಾಡಿದರೆ ನಾನಾ ಇಮೋಜಿಗಳಿರುತ್ತವೆ. ಅದರಲ್ಲಿ ನಮಗೆ ಯಾವುದು ಸೂಕ್ತ ಅದನ್ನು ಆಯ್ದುಕೊಂಡು ನಾವು ಸ್ಟೇಟಸ್ ಗೆ ರಿಯಾಕ್ಟ್ ಮಾಡಬಹುದು.
ಹೀಗೆಂದು WabetaInfo ಸಂಸ್ಥೆ ವರದಿ ಮಾಡಿದೆ. ಸ್ಟೇಟಸ್ ಗಳಿಗೆ ರಿಯಾಕ್ಟ್ ಮಾಡುವ ಆಪ್ಷನ್ ಗಳು ಮಾತ್ರವಲ್ಲದೆ, ಇನ್ಮುಂದೆ ಆಡ್ಮಿನ್ ಗಳಿಗೆ ಮಾತ್ರ ನೀವು ಗ್ರೂಪ್ ನಿಂದ ಹೊರ ಹೋದರೆ ( ಲೆಫ್ಟ್ ಆದರೆ) ನೋಟಿಫಿಕೇಶನ್ ಹೋಗಲಿದೆ. ಆಡ್ಮಿನ್ ನೀವು ಮಾಡಿದ ಮೆಸೇಜ್ ಗಳನ್ನು ಡಿಲೀಟ್ ಮಾಡಬಹುದು. ಮತ್ತು ಅದನ್ನು ಯಾರು ಡಿಲೀಟ್ ಮಾಡಿದ್ದಾರೆ ಎನ್ನುವುದನ್ನು ಗ್ರೂಪಿನ ಇತರ ಸದಸ್ಯರು ನೋಡಬಹುದು.
ಸದ್ಯ ಈ ಹೊಸ ಫೀಚರ್ಸ್ ಗಳು ಎಲ್ಲಾ ಆ್ಯಂಡ್ರಾಯ್ಡ್ ಮೊಬೈಲ್ ಗಳಿಗೆ ಬಂದಿಲ್ಲ. ಐಒಎಸ್ ಬಳಕೆದಾರರಿಗೆ ಇದು ಲಭ್ಯವಿದೆ ಶೀಘ್ರದಲ್ಲಿ ಎಲ್ಲರ ವಾಟ್ಸ್ ಆ್ಯಪ್ ಗೂ ಬರಲಿದೆ ಎಂದು ವರದಿ ತಿಳಿಸಿದೆ. ವಾಟ್ಸಪ್ ಹೊಸ ಹೊಸ ಅಪ್ಡೇಟ್ ಮಾಡುತ್ತಲೆ ಬಂದಿದ್ದು, ಇತ್ತೀಚೆಗೆ ವಾಟ್ಸ್ ಆ್ಯಪ್ ಗ್ರೂಪ್ ಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿತು. ಆ ಬಳಿಕ ಶೀಘ್ರದಲ್ಲಿ ಎಡಿಟ್ ಆಯ್ಕೆಯ ಫೀಚರನ್ನು ತರುವುದಾಗಿ ಹೇಳಿದೆ. ಅಲ್ಲದೆ ಆನ್ಲೈನ್ ಇರುವುದನ್ನು ಹೈಡ್ ಮಾಡುವ ಆಪ್ಷನ್ ಕೂಡ ಜಾರಿ ಗೊಳಿಸಿದೆ.