EMI : ನೀವೇನಾದರೂ ಇಎಂಐ ನಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡಲು ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ ಈ ಟ್ರಿಕ್ ಫಾಲೋ ಮಾಡಿ!!!
ಸ್ಮಾರ್ಟ್ಫೋನ್ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್ಫೋನ್ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್ಫೋನ್ ಯಾವುದು ಬೆಸ್ಟ್ ಮತ್ತು ಹೇಗೆ ಖರೀದಿ ಮಾಡಿದರೆ ಬೆಸ್ಟ್ ಅನ್ನೋದು ಕೂಡ ನಮಗೆ ಗೊತ್ತಿದ್ದರೆ ಉತ್ತಮ.
ಹೆಚ್ಚಾಗಿ ದೇಶದಲ್ಲಿ ಅನೇಕ ಮಂದಿ ಇಎಂಐ ಆಯ್ಕೆಯಲ್ಲಿ ಮೊಬೈಲ್ ಖರೀದಿಸುವವರೇ ಹೆಚ್ಚು. ಬೇರೆ ಬೇರೆ ಕಂತಿನ ರೂಪವನ್ನೂ ನೀಡುವುದರ ಮೂಲಕ ಖರೀದಿ ಮಾಡುವುದಾಗಿದೆ. ಅಂದರೆ ಮೊದಲು ಮೊಬೈಲ್ ಅನ್ನು ಖರೀದಿ ಮಾಡಿ ನಂತರ ಕಂತಿನ ರೂಪದಲ್ಲಿ ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಪಾವತಿ ಮಾಡುವುದು ಇದರ ನಿಯಮ ಆಗಿದೆ.
ನಾಲ್ಕು ಐದು ಸ್ಮಾರ್ಟ್ಫೋನ್ಗಳು ವಾರಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತವೆ. ದುಬಾರಿ ಫೋನ್ ಕೂಡ ಭರ್ಜರಿ ಸೇಲ್ ಕಾಣುತ್ತವೆ, ಬೇಗನೆ ಸೇಲ್ ಆಗಿ ಬಿಡುತ್ತದೆ. ಇದಕ್ಕೆ ಕಾರಣ ಇಂದು ಒಂದು ಮೊಬೈಲ್ಗೆ ನಿಗದಿ ಪಡಿಸಿರುವ ಎಲ್ಲಾ ಬೆಲೆಯನ್ನು ಒಮ್ಮೆಯೆ ಕಟ್ಟಬೇಕು ಎಂಬ ನಿಯಮ ಇಲ್ಲದಿರುವುದು.
ಇಎಂಐ ನಲ್ಲಿ ಮೊಬೈಲ್ ಖರೀದಿಸುವುದು ಬಹಳ ಸುಲಭವಾದ ಮಾರ್ಗವಾಗಿದೆ. ಸರಿಯಾದ ಕ್ರೆಡಿಟ್ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಬೇಕಾಗುತ್ತದೆ ಅಷ್ಟೇ.
ಹಾಗಿದ್ದರೆ ಇಎಂಐ ಆಯ್ಕೆಯಲ್ಲಿ ಮೊಬೈಲ್ ಖರೀದಿಸುವ ಬಗ್ಗೆ ಸಲಹೆಗಳು ಇಲ್ಲಿವೆ.
ಇಎಂಐ ಮೂಲಕ ಫೋನ್ ಖರೀದಿಸಬೇಕು ಎಂದರೆ, ನೀವು ಸರಿಯಾದ ಕ್ರೆಡಿಟ್ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಬಳಕೆ ಮಾಡಬೇಕು.
ಇಎಂಐ ಆಯ್ಕೆಯು ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಲಭ್ಯವಾಗುತ್ತದೆ.
ನಿಮ್ಮ ಕಾರ್ಡಿನ ವಿವರಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ.
ಓಟಿಪಿಗಾಗಿ ನಿಮ್ಮ ಫೋನಿಗೆ ಆಕ್ಸಿಸ್ ಇಟ್ಟುಕೊಂಡಿರಬೇಕು.
ಇಎಂಐ ಮೂಲಕ ಆನ್ ಲೈನ್ ಖರೀದಿ ಮಾಡುವ ಕ್ರಮ:
ಆನ್ ಲೈನ್ ವೆಬ್ ಸೈಟ್ ಅಥವಾ ಆ್ಯಪ್ ಅನ್ನು ತೆರೆಯಿರಿ .
ಈಗ ಯಾವ ಸ್ಮಾರ್ಟ್ ಫೋನ್ ಖರೀದಿಸಲು ನೀವು ಇಚ್ಛಿಸುತ್ತಿದ್ದೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ.
ನಂತರ ‘Buy Now’ ಆಯ್ಕೆಯನ್ನು ಟ್ಯಾಪ್ ಮಾಡಬೇಕು.
ಅಲ್ಲಿ ನಿಮ್ಮ ವಿಳಾಸವನ್ನು ಆಯ್ಕೆ ಮಾಡಿ ಅಥವಾ ಟೈಪ್ ಮಾಡಿ ಮತ್ತು ಕಂಟಿನ್ಯೂ ಆಯ್ಕೆಯನ್ನು ಒತ್ತಿ.
ನಂತರ ನಿಮ್ಮನ್ನು ಪಾವತಿ ವಿಭಾಗಕ್ಕೆ ಕೊಂಡೊಯ್ಯುತ್ತದೆ.
ಇಲ್ಲಿ ಪಾವತಿ ಮೋಡ್ ಅನ್ನು ಇಎಂಐ ಎಂದು ಆಯ್ಕೆ ಮಾಡಬೇಕು.
ನಂತರ ಅಲ್ಲಿ ಕಂಟಿನ್ಯೂ ಬಟನ್ ಅನ್ನು ಒತ್ತಿ.
ನಿಮ್ಮ ಕ್ರೆಡಿಟ್ ಕಾರ್ಡ್ ನ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
ಇಎಂಐ ನ ಟೈಮ್ ಪಿರೇಡ್ ಆಯ್ಕೆ ಮಾಡಿ (ಸಾಮಾನ್ಯವಾಗಿ 3 ತಿಂಗಳಿನಿಂದ 24 ತಿಂಗಳವರೆಗಿನ ಆಯ್ಕೆಗಳಿರುತ್ತದೆ).
ಅಲ್ಲಿ ಕಾರ್ಡಿನ ವಿವರಗಳನ್ನು ಬರೆಯಿರಿ ಮತ್ತು ಮುಂದುವರಿಯಲು ಕ್ಲಿಕ್ಕಿಸಿ.
ಈಗ ನಿಮಗೊಂದು ಒಟಿಪಿ ಬರಲಿದೆ ಅದು ನೀವು ಬ್ಯಾಂಕ್ ನಲ್ಲಿ ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರಿಗೆ ಅದನ್ನು ಕಳುಹಿಸಿಕೊಡಲಾಗುತ್ತದೆ.
ಮೊಬೈಲ್ ಫೋನಿಗೆ ಕಳಿಸಲಾದ ಸರಿಯಾದ ಓಟಿಪಿಯನ್ನು ಬರೆದು ಪಾವತಿಯನ್ನು ಪೂರ್ಣಗೊಳಿಸಿ.
ಇಎಂಐ ಮೂಲಕ ಆಫ್ ಲೈನ್ ಖರೀದಿ ಮಾಡುವ ಕ್ರಮ :
ನಿಮ್ಮ ಇಷ್ಟವಾದ ಆಫ್ ಲೈನ್ ರೀಟೈಲರ್ ಶಾಪ್ ಗೆ ತೆರಳಿ ಮತ್ತು ಯಾವ ಫೋನ್ ಖರೀದಿಸಬೇಕು ಎಂಬುದನ್ನು ಆಯ್ಕೆ ಮಾಡಿ.ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿ ಮತ್ತು ನಂತರ ಅದನ್ನು ಇಎಂಐ ಯಾಗಿ ಕನ್ವರ್ಟ್ ಮಾಡುವ ಅವಕಾಶವಿರುತ್ತದೆ. ಅದನ್ನು ಬ್ಯಾಂಕಿನ ಕಸ್ಟಮರ್ ಕೇರ್ ಗೆ ಕರೆ ಮಾಡಬಹುದು ಇಲ್ಲವೇ ಬ್ಯಾಂಕಿನ ಮೊಬೈಲ್ ಆಪ್ ಬಳಸಿ ಕೂಡ ಮಾಡಬಹುದು. ಈಗ ಹೆಚ್ಚಿನ ಪ್ರಸಿದ್ಧ ಮೊಬೈಲ್ ಶಾಪ್ಗಳಲ್ಲಿ ಇಎಂಐಗೆಂದೇ ಓರ್ವ ವ್ಯಕ್ತಿಯನ್ನು ನಿಗದಿ ಮಾಡಿರುತ್ತಾರೆ ಅವರ ಸಲಹೆಯನ್ನು ಸಹ ಪಡೆದುಕೊಳ್ಳಬಹುದು.
ಈ ಮೇಲಿನ 2ವಿಧಾನದ ಮೂಲಕ ಇಎಂಐ ಕಂತುಗಳನ್ನು ಪಾವತಿಸಿ ಸ್ಮಾರ್ಟ್ಫೋನ್ ಗಳನ್ನು ಅತೀ ಸುಲಭದಲ್ಲಿ ಕೊಂಡು ಕೊಳ್ಳಬಹುದಾಗಿದೆ.