Eye wrinkle :ಕಣ್ಣಿನ ಸುಕ್ಕು ತೆಗೆಯಲು ಇಲ್ಲಿವೆ ಕೆಲವೊಂದು ಮನೆಮದ್ದು!!!

ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ನಾವು ಪ್ರಪಂಚದಲ್ಲಿ ಎಲ್ಲಾ ಖುಷಿಗಳನ್ನು ಅನುಭವಿಸಲು ಕಣ್ಣು ಬೇಕೇ ಬೇಕು ತಾನೆ. ಹಾಗೆಯೇ ಕಣ್ಣು ನಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕಣ್ಣಿನ ಅಂದವನ್ನು ಹೆಚ್ಚಿಸುವ ಜಾಣ್ಮೆ ನಮ್ಮಲ್ಲಿ ಇರಬೇಕು ಅಷ್ಟೆ.

ನಮ್ಮ ಕಣ್ಣಿನ ಕೆಳಗೆ ವಿವಿಧ ಕಾರಣಗಳಿಂದ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಈ ಸುಕ್ಕು ನಮ್ಮ ಸೌಂದರ್ಯವನ್ನು ಕಡಿಮೆ ಮಾಡುವುದರೊಂದಿಗೆ ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ ಇದರಿಂದಾಗಿ ಸ್ವಲ್ಪ ಮುಜುಗರ ಎನ್ನಿಸುವುದು ಸಹಜ. ಆದರೆ ಈ ರೀತಿ ಲಕ್ಷಣವನ್ನು ನಿರ್ಲಕ್ಷಿಸಬೇಡಿ. ಯಾಕೆಂದರೆ ಕಣ್ಣುಗಳು ನಮ್ಮ ದೇಹದ ಬಹುಮುಖ್ಯ ಅಂಗ. ಇಡೀ ದೇಹಕ್ಕೆ ಸುಸ್ತು ಆದಾಗ ನಮ್ಮ ಮುಖ ಮತ್ತು ಕಣ್ಣುಗಳು ಚಿಕ್ಕದಾಗುವುದನ್ನು ನೀವು ಗಮನಿಸಿರಬಹುದು. ದೇಹದಲ್ಲಿನ ಕೆಲವು ದೌರ್ಬಲ್ಯದಿಂದಾಗಿ ಇದು ಸಂಭವಿಸುತ್ತದೆ.

ಸಾಕಷ್ಟು ನಿದ್ದೆಯ ಕೊರತೆ, ಆಹಾರ ಪದ್ಧತಿ, ಒತ್ತಡ, ಮೊಬೈಲ್ ಫೋನ್​ ಉಪಯೋಗಿಸುವುದು, ಕಂಪ್ಯೂಟರ್ ಉಪಯೋಗಿಸುವುದು, ಅತಿಯಾದ ಟಿವಿ ವೀಕ್ಷಣೆ,ಸರಿಯಾಗಿ ಊಟ ಮಾಡದಿರುವುದು, ಪೌಷ್ಟಿಕ ಆಹಾರ ಸೇವಿಸದಿರುವುದು, ನಿರ್ಜಲೀಕರಣಕ್ಕೆ ಒಳಗಾಗುವುದು, ಲ್ಯಾಪ್ ಟಾಪ್ ಬಳಕೆ ಇವೆಲ್ಲ ಚಟುವಟಿಕೆಗಳು ಕಣ್ಣುಗಳಿಗೆ ನೇರ ಪ್ರಭಾವ ಬೀರುತ್ತವೆ. ಇದರಿಂದ ಕಣ್ಣುಗಳು ಚಿಕ್ಕದಾಗಿ ಕಾಣುವುದರೊಂದಿಗೆ ಕಣ್ಣಿನ ಕೆಳಗೆ ಕಪ್ಪು ವೃತ್ತಾಕಾರ ಉಂಟಾಗುತ್ತದೆ. ವಿವಿಧ ಕಾರಣಗಳಿಂದ ಕಣ್ಣಿನ ಕೆಳಗೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಈ ಸುಕ್ಕುಗಳು ಸೌಂದರ್ಯವನ್ನು ಕಡಿಮೆ ಮಾಡುತ್ತದೆ ಮತ್ತು ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ. ಅದಕ್ಕಾಗಿಯೇ ಈ ಸುಕ್ಕುಗಳನ್ನು ತಡೆಯಲು ದುಬಾರಿ ಕ್ರೀಮ್ ಮತ್ತು ಲೋಷನ್ಗಳನ್ನು ಖರೀದಿಸಿ ಬಳಸುತ್ತಾರೆ.

ಕಣ್ಣಿನ ಅಂದ ಮತ್ತು ಆರೋಗ್ಯ ಕಾಪಾಡಲು ಮನೆಯಲ್ಲಿಯೇ ನೈಸರ್ಗಿಕವಾಗಿ ಕೆಲವೊಂದು ಟಿಪ್ಸ್ ಇವೆ.

ತರಕಾರಿಗಳು:
ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ಎಲೆಗಳ ತರಕಾರಿಗಳು ದೇಹಕ್ಕೆ ಬಹಳ ಮುಖ್ಯ. ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ತರಕಾರಿಗಳು ಕಣ್ಣಿಗೆ ತುಂಬಾ ಒಳ್ಳೆಯದು. ವಿಟಮಿನ್​ಗಳು ಚರ್ಮಕ್ಕೆ ಹೊಳಪನ್ನು ತರಲು ಕೆಲಸ ಮಾಡುತ್ತವೆ. ಸುಕ್ಕು ಬರದಂತೆ ಚರ್ಮವನ್ನು ಕಾಪಾಡುತ್ತವೆ

ನೀರು:
ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹೈಡ್ರೇಟೆಡ್ ಆಗಿರುವುದು ಬಹಳ ಮುಖ್ಯ. ಇದರಿಂದ ನಮ್ಮ ದೇಹವು ಆರೋಗ್ಯಕರವಾಗಿರುತ್ತದೆ. ನೀರು ನಮಗೆ ಬಹಳ ಮುಖ್ಯ. ನೀರಿನ ಕೊರತೆಯಿಂದ ಅನೇಕ ರೋಗಗಳು ಹೆಚ್ಚಾಗುತ್ತವೆ. ದೇಹದಲ್ಲಿ ನೀರಿನ ಕೊರತೆಯಿಂದ ನಮ್ಮ ಕಣ್ಣುಗಳು ಒಣಗುತ್ತವೆ. ಅಲ್ಲದೆ ಕಣ್ಣುಗಳಲ್ಲಿ ಊತ ಮತ್ತು ಕಣ್ಣುಗಳು ಒಣಗುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ನೀರು ಬಹಳ ಮುಖ್ಯ. ದೇಹದಲ್ಲಿ ನೀರಿನ ಅಂಶ ಇದ್ದಷ್ಟು ಚರ್ಮ ಹೊಳಪನ್ನು ಪಡೆಯುತ್ತದೆ.

ಕ್ಯಾರೆಟ್:
ಕ್ಯಾರೆಟ್ನಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು.
ಕ್ಯಾರೆಟ್ ತುಂಬಾ ಪೌಷ್ಟಿಕ ಆಹಾರವಾಗಿದೆ. ಅವುಗಳು ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿವೆ. ಆಳವಾದ ಕಣ್ಣುಗಳನ್ನು ಗುಣಪಡಿಸಲು ವಿಟಮಿನ್ಗಳು ಪರಿಣಾಮಕಾರಿ. ಇದರ ಬಳಕೆಯಿಂದ ಕಣ್ಣುಗಳಲ್ಲಿ ಬೆಳಕು ಕೂಡ ಹೆಚ್ಚುತ್ತದೆ.

ತಂಪು ಪದಾರ್ಥಗಳ ಸೇವನೆ:
ದೇಹಕ್ಕೆ ತಂಪು ನೀಡುವ ಹಣ್ಣು ಹಂಪಲು ಸೇವಿಸುವುದರಿಂದ ವಿಟಮಿನ್ ದೊರೆಯುತ್ತದೆ.
ಎಳ್ಳು, ಮೆಂತೆ ಕಾಳು, ಹೆಸರು ಕಾಳು ಮುಂತಾದವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಉತ್ತಮ ಆರೋಗ್ಯ ಜೊತೆಗೆ ಚರ್ಮವು ಹೊಳಪು ಪಡೆಯುತ್ತದೆ.

ಈ ಮೂಲಕ ಕಣ್ಣಿನ ಅಂದ ಮತ್ತು ಆರೋಗ್ಯ ಕಾಪಾಡಿಕೊಳ್ಳಬಹುದು.

Leave A Reply

Your email address will not be published.