BIGG NEWS : ರಾಜ್ಯದಲ್ಲಿ ಮತ್ತೆ ಭೂಕಂಪ | 3.5 ರಷ್ಟು ತೀವ್ರತೆ ದಾಖಲು, ಆತಂಕಗೊಂಡ ಜನ!!!
ರಾಜ್ಯದಲ್ಲಿ ಕೆಲ ದಿನಗಳಿಂದ ಮಳೆಯ (Rain) ಆರ್ಭಟ ಕಡಿಮೆಯಾಗಿ ನಿಟ್ಟುಸಿರ ಬಿಡುತ್ತಿರುವಾಗ, ಇದೀಗ ಮತ್ತೆ ಮಳೆರಾಯ ಅಬ್ಬರಿಸಲು ಆರಂಭಿಸಿದೆ.
ರಾಜ್ಯದ ಎಲ್ಲೆಡೆ ಮೊನ್ನೆಯಿಂದ ಭಾರೀ ಮಳೆಯಾಗುತ್ತಿರುವ ನಡುವೆ ಬೀದರ್ ನಲ್ಲಿಯೂ ಕೂಡ ವರುಣನ ಅಬ್ಬರ ಜೋರಾಗಿದೆ. ಗುಡುಗು ಸಹಿತ ಮಳೆಯ ಜೊತೆಗೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಗ್ರಾಮಗಳಲ್ಲಿ ಭೂಕಂಪವಾಗಿದ್ದು, ಇದ್ದಕ್ಕಿಂದ್ದಂತೆ ಕಾಣಿಸಿಕೊಂಡ ಭೂಕಂಪಕ್ಕೆ ಗ್ರಾಮದ ಜನರು ಆತಂಕಕ್ಕೀಡಾಗಿದ್ದಾರೆ.
ಹುಮ್ನಾಬಾದ್ ತಾಲೂಕಿನ ಹಿಲಾಲಪುರ, ವಡ್ಡನಕೇರ, ಸಕ್ಕರಗಂಜ್, ನಿಂಬೂರ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಮಳೆಯಿಂದ ಹೊಸ ಹೊಸ ಅವಾಂತರಗಳು ಸೃಷ್ಟಿಯಾಗುತ್ತಿದೆ. ಬರೆ ಕುಸಿತ, ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ರಸ್ತೆಗಳು ಬ್ಲಾಕ್ ಆಗುತ್ತಿರುವುದಲ್ಲದೆ ಭೂಕಂಪನ ಜನರನ್ನೂ ಬೆಚ್ಚಿ ಬೀಳಿಸುತ್ತಿದೆ.
ಬೀದರ್ ನಲ್ಲಿ ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪವಾಗಿದ್ದು, ಭೂಕಂಪ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಗ್ರಾಮಸ್ಥರಲ್ಲಿ ಅಭಯ ನೀಡಿ ಪರಿಶೀಲನೆ ನಡೆಸಿದ್ದಾರೆ.