ಬೆಚ್ಚಿ ಬೀಳಿಸಿದ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಗಳಿಕೆ | ಆತನ ಒಂದು ಇಂಸ್ಟಾ ಪೋಸ್ಟಿನ ದರ ಎಷ್ಟು ಕೋಟಿ ಗೊತ್ತಾ ?

ಕ್ರಿಕೆಟ್ ಜಗತ್ತಿನ ದೊರೆ, ಶ್ರೀಮಂತ ಆಟಗಾರ, ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲದೆ, ಕೇವಲ ಸೋಶಿಯಲ್ ಮೀಡಿಯಾದಿಂದ ಕೋಟಿ ಹಲವು ಶತಕೋಟಿ ಗಳನ್ನು ಗಳಿಸುತ್ತಿದ್ದಾರೆ ಎನ್ನುವುದು ಬಹುದೊಡ್ಡ ಅಚ್ಚರಿ, ಅದೂ ಕೇವಲ ಇನ್ಸ್ಟ ಗ್ರಾಂ ಒಂದರಿಂದಲೇ ಅವರು 300 ಕೋಟಿಗೂ ಅಧಿಕ ಹಣ ಗಳಿಸಿದ್ದಾರೆ !!

ಹೌದು, ವಿರಾಟ್ ಕೊಹ್ಲಿ ಗೆ ಕ್ರಿಕೆಟ್ ನಿಂದ ಬರುವುದಕ್ಕಿಂತ ಜಾಸ್ತಿ ದುಡ್ಡು ಇತರ ಮೂಲಗಳಿಂದ ಬರುತ್ತಿದೆ. ಅವರಿಗೆ ಯುವ ಸೋಶಿಯಲ್ ಮೀಡಿಯಾ ಆದ ಕೇವಲ ಇನ್ಸ್ಟಾ  ಒಂದರಿಂದಲೇ ಅತಿ ಹೆಚ್ಚು ಹಣ ಸುರಿದು ಬಂದು ಅಕೌಂಟಿಗೆ ಬಿದ್ದಿದೆ. ಅವರು ಕೇವಲ ಇನ್ಸ್ಟಾದಿಂದ ಬರೋಬ್ಬರಿ 300 ಕೋಟಿಗೂ ಅಧಿಕ ಹಣ ಗಳಿಸಿದ್ದಾರೆ. ಅಂದರೆ ದಿನಕ್ಕೆ 82 ಲಕ್ಷ ಹಣ ಗಳಿಸುತ್ತಿದ್ದಾರೆ. ಇವರ ಒಂದು ಸ್ಪೋನ್ಸರ್ ಪೋಸ್ಟ್ ನ ಬೆಲೆ 8.69 ಕೋಟಿ ಎಂದರೆ ನೀವೇ ಲೆಕ್ಕ ಹಾಕಿ : ಕೇವಲ ಇನ್ಸ್ಟಾಗ್ರಾಮ್ ನಿಂದ ಎಷ್ಟೆಲ್ಲ ಸಾವಿರ ಕೋಟಿ ಹಣ ಅವರು ಗಳಿಸುತ್ತಿದ್ದಾರೆಂದು !

ಇಷ್ಟೆಲ್ಲಾ ಹಣ ಗಳಿಸಲು ಕಾರಣ ಅವರಿಗೆ ಇರುವ ಫ್ಯಾನ್ ಬೇಸ್ ಮತ್ತು ಫಾಲೋವರ್ಸ್. ಇವರಿಗಿರುವಷ್ಟು ಫ್ಯಾನ್ಸ್ ಬೇರೆ ಯಾವ ಕ್ರಿಕೆಟಿಗರಿಗೆ ಕೂಡಾ ಇಲ್ಲ. ನಾವು 300 ಕೋಟಿಯ ಗಳಿಕೆ ಬಗ್ಗೆ ಹೇಳಿದ್ದು ಕೇವಲ ಇನ್ಸ್ಟಾ ಒಂದರಿಂದಲೇ ಬರ್ತಿದೆ. ಇಂತಹ ವಿರಾಟ್ ಕೊಹ್ಲಿ ಕೇವಲ ಇನ್ಸ್ಟಾಗ್ರಾಮ್ ಅಲ್ಲದೆ ಟ್ವಿಟ್ಟರ್, ಫೇಸ್ಬುಕ್ ಅಲ್ಲೂ ಕೊಹ್ಲಿ ಅವರದೇ ಹವಾ ! ಅವರೇ ಅಲ್ಲೆಲ್ಲೂ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಏಕೈಕ ಕ್ರಿಕೆಟಿಗ. ಟ್ವಿಟ್ಟರ್ ನಲ್ಲಿ ಇವರ ಒಂದು ಸ್ಪಾನ್ಸರ್ ಪೋಸ್ಟ್ ನ ಬೆಲೆ 3.5 ಕೋಟಿ ರೂಪಾಯಿಗಳು !!

ಟೀಮ್ ಇಂಡಿಯಾ ದ ಮಾಜಿ ನಾಯಕ ಕೊಹ್ಲಿಯು BCCI ನ A+ ಸೆಂಟ್ರಲ್ ಕಾಂಟ್ರ್ಯಾಕ್ಟ್ ಆಟಗಾರನಾಗಿದ್ದು, ವರ್ಷಕ್ಕೆ 7 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಐಪಿಎಲ್ ನಲ್ಲಿ RCB ತಂಡ 17 ಕೋಟಿ ವೇತನವನ್ನು ಆತನಿಗೆ ನೀಡುತ್ತಿದ್ದಾರೆ. ಇದಲ್ಲದೆ ಕೊಹ್ಲಿಯು ಹಲವಾರು ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೂ ಬ್ರ್ಯಾಂಡ್ ಅಂಬಾಸಿಡರ್ ಹಾಗೂ ಜಾಹೀರಾತುಗಳ ಮೂಲಕ ನೂರಾರು ಕೋಟಿ ಹಣ ಗಳಿಸಿದ್ದಾರೆ. ಇದೀಗ ಹತ್ತತ್ತಿರ ಆತ ಕೋಟಿ ಸಾವಿರ ಕೋಟಿಗಳ ಅಧಿಪತಿ. ಸರಿಯಾಗಿ ಹೇಳಬೇಕೆಂದರೆ, ಆತ 940 ಕೋಟಿ ಖಜಾನೆಯ ಕುಬೇರ !!

ಇಷ್ಟು ಹಣಗಳಿಕೆಯ ಹಿಂದೆ ಆತನ ಪ್ರತಿಭೆ ಮತ್ತು ಪರಿಶ್ರಮ ಕೂಡಾ ಇದೆ. ಪ್ರತಿಭೆ ಪರಿಶ್ರಮ ಇದ್ದರೂ, ಜೀವನ ಪರ್ಯಂತ ಶ್ರಮಿಸುತ್ತಾ ಹಣಕಾಸಿನ ಮುಗ್ಗಟ್ಟಿನ ಮಧ್ಯೆಯೇ ಬದುಕುವ ಜನರ ಮಧ್ಯೆ ಇಂತಹಾ ಕೆಲವೇ ಆಟಗಾರರು ಮತ್ತು ಸಿನಿಮಾ ನಟರುಗಳಂತವರ ಪಾಲಿಗೆ ಅದೃಷ್ಟ ಕೂಡಾ ಸಹಾಯ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave A Reply

Your email address will not be published.