ಮೆಣಸಿನ ಕಾಯಿ ತೂಕವನ್ನೂ ಇಳಿಸಲು ಸಹಾಯಕಾರಿ
ಮೆಣಸಿನ ಕಾಯಿ ಅಂದ ಕೂಡಲೇ ಅಬ್ಭಾ ಖಾರ ಅಂತ ನೆನಪು ಆಗುತ್ತೆ. ಅದ್ರಲ್ಲೂ ಸಣ್ಣ ಮಕ್ಕಳಿಗೆ ಮೆಣಸು ಅಂದ್ರೆ ಮಾರುದ್ದ ದೂರ ಓಡ್ತಾರೆ. ಯಾಕೆಂದ್ರೆ ಇದರ ಖಾರ ಅಷ್ಟು. ಚೋಟುದ್ದ ಇದ್ರು ಮೆಣಸಿನ ಕಾಯಿ ಹಾಗೆ ಮಾತು ಅಂತ ಡೈಲಾಗ್ ಕೇಳಿರಬಹುದು. ಅಂದ್ರೆ ಮೆಣಸು ಸಣ್ಣ ಇದ್ರು ಅದರ ಖಾರ ಮಾತ್ರ ಸಖತ್.
ಬಿಪಿ ಲೋ ಇದ್ದೋರು ಮೆಣಸು ಹದವಾಗಿ ತಿನ್ನಬೇಕು. ಆರೋಗ್ಯಕ್ಕೆ ಒಳ್ಳೆಯದು. ಇದು ಜಾಸ್ತಿ ಆದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಉಂಟಾಗುತ್ತದೆ. ಆದ್ರೆ ಇದು ಸಣ್ಣ ಆಗಲು ಕೂಡ ತುಂಬಾ ಉಪಕಾರಿ ಆಗಿದೆ. ಇದರ ಬಗ್ಗೆ ತಿಳಿಯೋಣ ಬನ್ನಿ.
ಹೌದು. ಮೆಣಸು ಸ್ಲಿಮ್ ಮಾಡುತ್ತೆ ಅಂತೆ. ಬಹುತೇಕ ಭಾರತೀಯ ಅಡುಗೆಗಳಲ್ಲಿ ಹಸಿಮೆಣಸಿನಕಾಯಿಯನ್ನು ಬಳಕೆ ಮಾಡಲಾಗುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಈ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಸಿಮೆಣಸಿನಕಾಯಿ ಬೆರೆಸಿ ಅಡುಗೆ ತಯಾರಿಸಿದ್ದಲ್ಲಿ ಅದು ದೀರ್ಘಕಾಲದವರೆಗೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಕ್ಯಾಲೋರಿ ಸೇವನೆಯಾಗುತ್ತದೆ. ಕ್ಯಾಲರಿ ಕಮ್ಮಿ ಆದಷ್ಟು ಸಣ್ಣ ಆಗುತ್ತೀರ.ಇನ್ನು ತರಕಾರಿ ಪದಾರ್ಥಗಳನ್ನು ಮಾಡುವಾಗ ಕೆಂಪು ಮೆಣಸಿನ ಪುಡಿಗೆ ಬದಲಾಗಿ ಹಸಿ ಮೆಣಸಿನಕಾಯಿಯನ್ನು ಬಳಸಿ.
ಜಾಸ್ತಿ ಒಮ್ಮೆಗೇ ತಂದು ಪ್ರಿಡ್ಜ್ ನಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಡಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಗೊತ್ತಾಯ್ತಲ್ಲ ಮೆಣಸು ಮಿತಿಯಲ್ಲಿ ಬಳಸಿದರೆ ಆರೋಗ್ಯಕ್ಕೆ ಯಾವ ರೀತಿಯಾಗಿ ಲಾಭದಾಯಕ ಎಂದು. ನೀವು ಒಮ್ಮೆ ಟ್ರೈ ಮಾಡಿ.