Salary Hike : ಸರಕಾರಿ ನೌಕರರ ವೇತನ ಶೇ.12 ರಷ್ಟು ಹೆಚ್ಚು| 5 ವರ್ಷದ ಬಾಕಿ ಸ್ಯಾಲರಿ ಕೂಡಾ ಖಾತೆಗೆ ಜಮಾ|

ದೀಪಾವಳಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈಗಾಗಲೇ ಕೇಂದ್ರ ನೌಕರರಿಗೆ ಬೋನಸ್ ಘೋಷಣೆ ಮಾಡಿದ ಬೆನ್ನಲ್ಲೇ ಸಾಮಾನ್ಯ ವಿಮಾ ಕಂಪನಿಗಳ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯನ್ನ ನೀಡಲು ಮುಂದಾಗಿದೆ.

ಹಣಕಾಸು ಸಚಿವಾಲಯದ ಪ್ರಕಾರ, ಈ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನ ಸರಾಸರಿ ಶೇಕಡಾ 12ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ.ಹಣಕಾಸು ಸಚಿವಾಲಯವು ಸದ್ಯ ಅಕ್ಟೋಬರ್ 15ರಂದು ತನ್ನ ಅಧಿಸೂಚನೆಯನ್ನು ಹೊರಡಿಸಿದ್ದು, ಈ ವೇತನ ಹೆಚ್ಚಳವೂ ಆಗಸ್ಟ್ 2017ರಿಂದ ಜಾರಿಗೆ ಬರುವಂತೆ ಪರಿಗಣಿಸಲಾಗುತ್ತದೆ.

ಹಾಗಾಗಿ, ಸರ್ಕಾರಿ ವಿಮಾ ಕಂಪನಿಗಳ ಈ ಉದ್ಯೋಗಿಗಳು 5 ವರ್ಷಗಳ ಬಾಕಿಯನ್ನು ಕೂಡ ಪಡೆದುಕೊಳ್ಳಬಹುದು.

ನ್ಯೂ ಇಂಡಿಯಾ ಅಶ್ಯೂರೆನ್ಸ್, ನ್ಯಾಷನಲ್ ಇನ್ಶೂರೆನ್ಸ್, ಓರಿಯಂಟಲ್ ಇನ್ಶೂರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ನ ಐದು ವರ್ಷಗಳ ಬಾಕಿಯೊಂದಿಗೆ ಉದ್ಯೋಗಿಗಳ ವೇತನದಲ್ಲಿ ಶೇಕಡಾ 12ರಷ್ಟು ಹೆಚ್ಚಳವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಕಂಪನಿಗಳ ವೇತನದ ಬಿಲ್ ಅನ್ನು ಸುಮಾರು 8,000 ಕೋಟಿಗಳಷ್ಟು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ.

ಈ ಯೋಜನೆಯನ್ನು ಸಾಮಾನ್ಯ ವಿಮೆ (ವೇತನ ಶ್ರೇಣಿಗಳ ತರ್ಕಬದ್ಧಗೊಳಿಸುವಿಕೆ ಮತ್ತು ಅಧಿಕಾರಿಗಳ ಸೇವೆಯ ಇತರ ಷರತ್ತುಗಳು) ತಿದ್ದುಪಡಿ ಯೋಜನೆ 2022 ಎಂದು ಪರಿಗಣಿಸಲಾಗುತ್ತದೆ.

ಈ ವಿಮಾ ಕಂಪನಿಗಳ ಉದ್ಯೋಗಿಗಳ ವೇತನದ ಮೊತ್ತವನ್ನು ಮುಂದಿನ ಬಾರಿ ಆಗಸ್ಟ್ 2022 ರಿಂದ ಪರಿಷ್ಕರಿಸಲಾಗುವ ಕುರಿತು ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಮುಂದಿನ ಬಾರಿ ಉದ್ಯೋಗಿಗಳ ವೇತನ ಪರಿಷ್ಕರಣೆಯು ಕಂಪನಿ ಮತ್ತು ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಕೂಡ ಆಧರಿಸಿರುತ್ತದೆ .

ಈ ವೇತನ ಪರಿಷ್ಕರಣೆಯು ಆಗಸ್ಟ್ 1, 2017 ರಿಂದ ಜಾರಿಗೆ ಬರುವುದಲ್ಲದೆ, ಈ ಸಮಯದಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುವವರು 5 ವರ್ಷಗಳ ಬಾಕಿಯನ್ನು ಸಹ ಪಡೆಯಬಹುದಾಗಿದ್ದು, ಇದರೊಂದಿಗೆ ಈ ತಿದ್ದುಪಡಿಯು ಆ ಸಮಯದಲ್ಲಿ ಸೇವೆಯಲ್ಲಿದ್ದ ಹಾಗೂ ಈಗ ನಿವೃತ್ತರಾದ ನೌಕರರಿಗೂ ಪ್ರಯೋಜನವನ್ನು ಒದಗಿಸುತ್ತದೆ.

ಈ ತಿದ್ದುಪಡಿಯಿಂದ ಉಂಟಾದ ವೇತನ ಹೆಚ್ಚಳದ ಅನುಷ್ಠಾನದಿಂದ ನೌಕರರ ಸಂಘಗಳಿಗೆ ಹೆಚ್ಚಿನ ಮಟ್ಟದ ಸಂತೋಷ ತರಿಸಿಲ್ಲ ಎಂದು ತಿಳಿದು ಬಂದಿದೆ.

ಜನರಲ್ ಇನ್ಶೂರೆನ್ಸ್ ಎಂಪ್ಲಾಯೀಸ್ ಆಲ್ ಇಂಡಿಯಾ ಅಸೋಸಿಯೇಷನ್ (GIEAIA) ಪ್ರಧಾನ ಕಾರ್ಯದರ್ಶಿ ತ್ರಿಲೋಕ್ ಸಿಂಗ್, ’64 ತಿಂಗಳ ಕಾಯುವಿಕೆಯ ನಂತರ ವೇತನ ಪರಿಷ್ಕರಣೆಯನ್ನು ಮಾಡಿದ ಪ್ರಕ್ರಿಯೆಯ ವಿರುದ್ಧ ನಾವು ಬಲವಾದ ಪ್ರತಿಭಟನೆಯನ್ನು ಹೊಂದಿದ್ದು, ನೌಕರರ ಕಾರ್ಯಕ್ಷಮತೆಯೊಂದಿಗೆ ವೇತನವನ್ನು ಲಿಂಕ್ ಮಾಡುವುದು ಅತರ್ಕಿಕವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ವೇತನ ಪರಿಷ್ಕರಣೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಅಕ್ಟೋಬರ್ 14, 2022 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ವಿಮಾ ಕಂಪನಿಗಳ ಉದ್ಯೋಗಿಗಳ ವೇತನದಲ್ಲಿ ಮುಂದಿನ ಪರಿಷ್ಕರಣೆಯನ್ನು ಆಗಸ್ಟ್ 2022 ರಿಂದ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರವು 2021ರಲ್ಲಿ ಸಾಮಾನ್ಯ ವಿಮಾ ತಿದ್ದುಪಡಿ ಕಾಯ್ದೆಯನ್ನು ಅಧಿಸೂಚನೆ ಹೊರಡಿಸಿತ್ತು. ಈ ಕಾಯ್ದೆಯು ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳಲ್ಲಿ ತನ್ನ ಪಾಲನ್ನು ಶೇಕಡಾ 51 ಕ್ಕಿಂತ ಕಡಿಮೆ ಮಾಡಲು ಸರ್ಕಾರಕ್ಕೆ ಅನುಮತಿಸುತ್ತದೆ.

ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪ್ಯಾಕೇಜ್ ಮೂಲಕ ವಿಮಾ ಕಂಪನಿಗಳ ಉದ್ಯೋಗಿಗಳಿಗೆ ನೆರವಾಗಲು ಮುಂದಾಗಿದ್ದು, ಎಷ್ಟರಮಟ್ಟಿಗೆ ಈ ಗಿಫ್ಟ್ ನೌಕರರಿಗೆ ಪ್ರಯೋಜನಕಾರಿಯಾಗಲಿದೆ ಎಂಬುದನ್ನೂ ಕಾದು ನೋಡಬೇಕಾಗಿದೆ.

Leave A Reply

Your email address will not be published.