5G : ನವೆಂಬರ್ ನಲ್ಲಿ ಈ ಫೋನ್ ಗಳಲ್ಲಿ 5 G ಸೇವೆ ಖಂಡಿತಾ ಇರಲಿದೆ | ಯಾವ ಫೋನ್ ? ಲಿಸ್ಟ್ ಇಲ್ಲಿದೆ!!!

Share the Article

ಸ್ಮಾರ್ಟ್‌ಫೋನ್‌ ಇರುವವರು ಇಲ್ಲಿ ಸ್ವಲ್ಪ ಗಮನಿಸಲೇ ಬೇಕು ಯಾಕೆಂದರೆ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ಜೊತೆಗೆ ಕಂಪನಿಗಳು ನೆಟ್ ವರ್ಕ್ ನ್ನು 5G ಗೆ ಅಪಡೇಟ್ ಮಾಡುತ್ತಿದೆ. ಅಂದರೆ ಕಂಪನಿ ಭಾರತದಲ್ಲಿ ಮುಂದಿನ ತಿಂಗಳು ತನ್ನ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ನವೆಂಬರ್ ತಿಂಗಳ ಮಧ್ಯದಲ್ಲಿ 5G ಅಪ್‌ಡೇಟ್‌ ನೀಡುವುದಾಗಿ ದೃಢಪಡಿಸಿದೆ.

5G ಸ್ಯಾಮ್‌ಸಂಗ್ ಫೋನ್ ಹೊಂದಿರುವ ಬಳಕೆದಾರರು ಹಾಗೂ 5G ಲಭ್ಯತೆ ಪಡೆದ ನಗರದ ಬಳಕೆದಾರರು ಕೆಲವೇ ವಾರಗಳಲ್ಲಿ ನಿಮ್ಮ ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ 5G ಸೇವೆ ಪಡೆಯಬಹುದು.

ಕೆಲವು ಸ್ಯಾಮ್‌ಸಂಗ್ ಬಳಕೆದಾರರಿಗೆ 5G ನೆಟ್‌ವರ್ಕ್ ಅನ್ನು ಆಕ್ಸಸ್‌ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಸ್ಮಾರ್ಟ್‌ಫೋನ್‌ಗೆ 5G ತರಂಗಾಂತರ ಸಪೋರ್ಟ್‌ ಅತ್ಯುತ್ತಮವಾಗಿಸಲು ಸಂಸ್ಥೆಯಿಂದ ಅಪ್‌ಡೇಟ್‌ನ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸ್ಯಾಮ್‌ಸಂಗ್‌ ಸಂಸ್ಥೆಯು ನವೆಂಬರ್‌ನಲ್ಲಿ ತನ್ನ ಕೆಲವು 5G ಸ್ಮಾರ್ಟ್‌ಫೋನ್‌ಗಳಿಗೆ 5G ಸಪೋರ್ಟ್‌ ಅಪ್‌ಡೇಟ್‌ ಅನ್ನು ಮಾಡಲಿದೆ. ಅಪ್‌ಡೇಟ್‌ ಬಳಿಕ 5G ಬೆಂಬಲಿತ ನಗರದ ಸ್ಯಾಮ್‌ಸಂಗ್ ಫೋನ್ ಬಳಕೆದಾರರು 5G ನೆಟ್‌ವರ್ಕ್‌ ಪಡೆಯಲು ಸಾಧ್ಯವಾಗುತ್ತದೆ.

ಇತ್ತೀಚಿಗೆ ಏರ್‌ಟೆಲ್ ಟೆಲಿಕಾಂ ಇನ್ನೂ 5G ಗೆ ಬೆಂಬಲವನ್ನು ಪಡೆಯದ ಫೋನ್‌ಗಳ ಲಿಸ್ಟ್‌ ಪ್ರಕಟಿಸಿದೆ.ಆ ಲಿಸ್ಟ್‌ನಲ್ಲಿ ಇರುವ ಕೆಲವು ಸ್ಯಾಮ್‌ಸಂಗ್‌ ಫೋನ್‌ಗಳು:
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE,
ಸ್ಯಾಮ್‌ಸಂಗ್ ಗ್ಯಾಲಕ್ಸಿ A53,
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿ ಫೋನ್‌ಗಳು, ಸ್ಯಾಮ್‌ಸಂಗ್ ಗ್ಯಾಲಕ್ಸಿ A33,
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4,
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 ಫೋನ್‌ ಹೊಂದಿರುವ ಬಳಕೆದಾರರು 5G ನೆಟ್‌ವರ್ಕ್‌ ಅನ್ನು (5G ಸೇವೆ ಲಭ್ಯವಿರುವ ನಗರದಲ್ಲಿ) ಪ್ರವೇಶಿಸಬಹುದು.

5G ಬೆಂಬಲವನ್ನು ಪಡೆಯದ ಕೆಲವು ಸ್ಯಾಮ್‌ಸಂಗ್ ಫೋನ್‌ಗಳು :
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ,
ಸ್ಯಾಮ್‌ಸಂಗ್ ಗ್ಯಾಲಕ್ಸಿ S21,
ಸ್ಯಾಮ್‌ಸಂಗ್ ಗ್ಯಾಲಕ್ಸಿ S21+,
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ,
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 2,
ಸ್ಯಾಮ್‌ಸಂಗ್ ಗ್ಯಾಲಕ್ಸಿ F42,
ಸ್ಯಾಮ್‌ಸಂಗ್ ಗ್ಯಾಲಕ್ಸಿ A52s,
ಸ್ಯಾಮ್‌ಸಂಗ್ ಗ್ಯಾಲಕ್ಸಿ M52,
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ 3,
ಸ್ಯಾಮ್‌ಸಂಗ್ ಗ್ಯಾಲಕ್ಸಿ A22 5G,
ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G,
ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G,
ಸ್ಯಾಮ್‌ಸಂಗ್ ಗ್ಯಾಲಕ್ಸಿ F23,
ಸ್ಯಾಮ್‌ಸಂಗ್ ಗ್ಯಾಲಕ್ಸಿ A73,
ಸ್ಯಾಮ್‌ಸಂಗ್ ಗ್ಯಾಲಕ್ಸಿ M42,
ಸ್ಯಾಮ್‌ಸಂಗ್ ಗ್ಯಾಲಕ್ಸಿ M53 ಮತ್ತು
ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಆಗಿವೆ.

ಏರ್ಟೆಲ್ 5G ಲಭ್ಯವಿರುವ ನಗರಗಳು
ಅಂದರೆ ಮೊದಲ ಹಂತದಲ್ಲಿ, ಏರ್ಟೆಲ್ 5G ಸೇವೆಯು,
ದೆಹಲಿ
ಮುಂಬೈ
ವಾರಣಾಸಿ
ಬೆಂಗಳೂರು
ಚೆನ್ನೈ
ಹೈದರಾಬಾದ್
ನಾಗ್ಪುರ ಮತ್ತು
ಸಿಲಿಗುರಿ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್ ಬಳಕೆದಾರರು 5G ಅನ್ನು ಸೇವೆ ಪಡೆಯಲು ಇನ್ನು ಕೆಲವು ವಾರಗಳು ಕಾಯಬೇಕಿದೆ. ಹಾಗೆಯೇ ಕಂಪನಿ ವರದಿ ಪ್ರಕಾರ ಆಪಲ್‌ ಮತ್ತು ಇತರ ಬ್ರ್ಯಾಂಡ್‌ಗಳು ಈ ವರ್ಷದ ಡಿಸೆಂಬರ್‌ನಲ್ಲಿ ಸಾಫ್ಟ್‌ವೇರ್ ನವೀಕರಣವನ್ನು ಬಿಡುಗಡೆ ಮಾಡುತ್ತವೆ ಮಾಹಿತಿ ನೀಡಿದೆ.

ಜಿಯೋ ಮತ್ತು ವಿ ಟೆಲಿಕಾಂ ನ ಅಂದರೆ ದೀಪಾವಳಿ ವೇಳಗೆ 5G ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹಾಗೆಯೇ 5G ಸೇವೆಗಳು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಿದೆ. ಇನ್ನು ವೊಡಾಫೋನ್ ಐಡಿಯಾ ಟೆಲಿಕಾಂ (ವಿ ಟೆಲಿಕಾಂ) 5G ಅನ್ನು ಯಾವಾಗ ಪ್ರಾರಂಭಿಸಲಿದೆ ಎನ್ನುವ ಬಗ್ಗೆ ಅಧಿಕೃತ ದಿನಾಂಕ ತಿಳಿಸಿಲ್ಲ.

ಆದರೆ ಐಫೋನ್ ಬಳಕೆದಾರರು 5G ಲಭ್ಯತೆಗೆ ಸುಮಾರು ಎರಡು ತಿಂಗಳು ಕಾಯಬೇಕಾಗುತ್ತದೆ. ಇನ್ನು ಗೂಗಲ್‌ ಸಂಸ್ಥೆಯು ತನ್ನ ಪಿಕ್ಸಲ್‌ 6a ಬಳಕೆದಾರರಿಗೆ ಅಪ್‌ಡೇಟ್‌ ಹೊರತರಲು ಯೋಜಿಸುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

Leave A Reply