Lady Kohli : ಈ ಬಾಲಕಿಯ ಬ್ಯಾಟಿಂಗ್ ಸಖತ್ ಸೂಪರ್ | ನೆಟ್ಟಿಗರಿಂದ ಭರಪೂರ ಶ್ಲಾಘನೆ!!!

ಕ್ರಿಕೆಟ್ ಎಂಬ ಕ್ರೀಡೆ ಜಾಗತಿಕ ಮಟ್ಟದಲ್ಲಿಯೂ ಸುಪ್ರಸಿದ್ಧವಾಗಿದ್ದು, ಕಲಿಯುವ ಉತ್ಸಾಹ ಸಾಧಿಸಬೇಕೆಂಬ ಛಲ ಇದ್ದರೆ, ಸಾಧನೆಗೆ ಯಾವುದೇ ಅಡ್ಡಿಯಾಗದು ಎಂಬುದನ್ನು ನಿರೂಪಿಸುವ ಪ್ರಸಂಗವೊಂದು ನಡೆದಿದೆ.

 

ಕ್ರಿಕೆಟ್ ಲೋಕದಲ್ಲಿ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ ಸಚಿನ್ ತೆಂಡೂಲ್ಕರ್, ಸುನೀಲ್ ಗವಾಸ್ಕರ್, ಧೋನಿ, ಇತ್ತೀಚಿನ ದಿನಗಳಲ್ಲಿ ವಿರಾಟ ರೂಪದಲ್ಲಿ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿರುತ್ತಿರುವ ಕೊಹ್ಲಿ, ರಾಹುಲ್ ಇವರ ಆಟದ ಪ್ರದರ್ಶನ ಎಂತಹವರನ್ನೂ ಕೂಡ ಮೋಡಿ ಮಾಡುವುದರಲ್ಲಿ ಸಂಶಯವಿಲ್ಲ.

ಒಂದಾನೊಂದು ಕಾಲದಲ್ಲಿ ಕ್ರೀಡೆ ಎಂದರೆ ಪುರುಷರಿಗಷ್ಟೆ ಸೀಮಿತ ಎಂಬತ್ತಿದ್ದ ಮಾತನ್ನು ಅಲ್ಲಗೆಳೆಯುವಂತೆ ಇಂದಿನ ದಿನದಲ್ಲಿ ಮಹಿಳಾ ಕ್ರಿಕೆಟ್ ಲೋಕದಲ್ಲಿ ತನ್ನದೆ ವೈಶಿಷ್ಟ್ಯದ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗುತ್ತಿದೆ.

ಅಂತೆಯೇ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿಯರ ಸಂಖ್ಯೆ ಕೂಡ ದೊಡ್ಡದಿದ್ದು, ಭಾರತದ ಬಲಿಷ್ಠ ಮಹಿಳಾ ಕ್ರಿಕೆಟ್ ತಂಡವೇ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಲಡಾಖ್ ನಲ್ಲಿ ಶಾಲಾ ಬಾಲಕಿಯೊಬ್ಬಳು ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಆಕೆಯ ಬ್ಯಾಟಿಂಗ್ ಕೌಶಲ್ಯ ನೋಡುಗರನ್ನು ಬೆರಗು ಮೂಡಿಸಿದೆ.

ಭಾರತ ತಂಡದಲ್ಲಿ ರನ್ ಗಳ ಸುರಿಮಳೆ ಗೈದು ಎದುರಾಳಿಯ ಬೆವರಿಳಿಸುವಷ್ಟು ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಯ ಅಭಿಮಾನಿಯಾಗಿರುವ ಲಡಾಖ್ ನ ಬಾಲಕಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಲಡಾಖ್ನಲ್ಲಿ ಬಾಲಕಿಯ ಕ್ರಿಕೆಟ್ ಆಡುವ ವೈಖರಿಯ ವೀಡಿಯೊವನ್ನು ಸೆರೆಹಿಡಿಯಲಾಗಿದ್ದು, ಅಲ್ಲಿ ಈ ಬಾಲ ಪ್ರತಿಭೆ ತನ್ನ ಬ್ಯಾಟ್ನಿಂದ ಉತ್ತಮ ಹೊಡೆತಗಳನ್ನು ಹೊಡೆಯುತ್ತಿದ್ದು, ಹಲವು ಶಾಟ್ಗಳು ಹೆಲಿಕಾಪ್ಟರ್ ಶಾಟ್ಗಳೊಂದಿಗೆ ಹೊಂದಾಣಿಕೆಯಾಗುತ್ತಿವೆ

ಈ ಪುಟ್ಟ ಹುಡುಗಿಯ ಸಾಮರ್ಥ್ಯ ಮತ್ತು ಕೌಶಲ್ಯವು ಕ್ರಿಕೆಟ್ ಅಭಿಮಾನಿಗಳನ್ನು ಸಹ ವಿಸ್ಮಯಗೊಳಿಸಿದೆ. 6 ನೇ ತರಗತಿಯ ವಿದ್ಯಾರ್ಥಿನಿ ಮಕ್ಸೂಮಾ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯಂತೆ ಆಗಬೇಕೆಂದು ಕನಸು ಹೊತ್ತು ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿದ್ದು, ಬ್ಯಾಟಿಂಗ್ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುತ್ತಾ ನೋಡುಗರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಾಳೆ.

ಆರನೇ ತರಗತಿಯ ಭವಿಷ್ಯದ ಕ್ರಿಕೆಟ್ ಕ್ಷೇತ್ರದಲ್ಲಿ ಉಜ್ವಲ ಪ್ರತಿಭೆಯಾಗಿ ಹೊರಹೊಮ್ಮುವ ಆಕಾಂಕ್ಷೆ ಹೊತ್ತಿರುವ ‘ಹೆಲಿಕಾಪ್ಟರ್’ ಶಾಟ್ ಕಲಿಯಲು ಬಯಸುತ್ತಿದ್ದು, ಬಾಲ್ಯದಿಂದಲೂ ಕ್ರಿಕೆಟ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾಳೆ.

ವಿಶೇಷವಾಗಿ ‘ಹೆಲಿಕಾಪ್ಟರ್ ಶಾಟ್’ ಆಡುವುದನ್ನು ಕಲಿಯುತ್ತಿರುವ ತನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಂತೆ ಆಗಲು ಬಯಸುತ್ತೇನೆ ಎಂದು ಮಕ್ಸೂಮಾ ಡಿಎಸ್ಇ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ತಂದೆ ಹಾಗೂ ಶಾಲೆಯಲ್ಲಿ ಶಿಕ್ಷಕರ ಪ್ರೋತ್ಸಾಹ ದೊರೆಯುತ್ತಿರುವುದರಿಂದ ಇನ್ನೂ ಉತ್ತಮವಾಗಿ ಆಡಲು ಪ್ರಯತ್ನಿಸುವ ಇಂಗಿತವನ್ನೂ ಬಾಲಕಿ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.