ಹೆಲ್ಮೆಟ್ ಇಲ್ಲದೆ ರೀಲ್ಸ್ ಮಾಡೋ ಯುವಕರ ಹೊಸ ಉಪಾಯ | ಚುರುಕುಗೊಂಡ ಟ್ರಾಫಿಕ್ ಪೊಲೀಸ್!!!

ಇತ್ತೀಚಿನ ಕಾಲದಲ್ಲಿ ರೀಲ್ಸ್ ಅನ್ನೋ ಹುಚ್ಚು ಕೆಲವರಲ್ಲಿ ಮಿತಿಮೀರಿದೆ. ತಮ್ಮ ಅಸಂಬದ್ಧ ಪ್ರದರ್ಶನಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ವ್ಯಾಮೋಹವು ತಾನು ಏನು ಮಾಡ ಹೊರಟಿರುವೆ ಅನ್ನುವ ಮೂಲವನ್ನು ಒಂದು ಕ್ಷಣ ಮರೆತು ಹೋಗುತ್ತಾರೆ. ಅಲ್ಲದೆ ಎಷ್ಟೋ ಜನ ಈ ರೀಲ್ಸ್ ಎಂಬ ಗೊಂಗಿನಲ್ಲಿ ಬಿದ್ದು ಮರಣ ಹೊಂದಿದವರನ್ನು ಈಗಾಗಲೇ ನೋಡಿರಬಹುದು, ಕೇಳಿರಬಹುದು. ಆದ್ದರಿಂದ ಸಮಾಜದ ಹಿತರಕ್ಷಣೆಗಾಗಿ ಟ್ರಾಫಿಕ್ ಪೊಲೀಸರು ಬೈಕ್​ ಮೇಲೆ ಸ್ಟಂಟ್ ಮಾಡಿ ರೀಲ್ಸ್​ ಮಾಡುತ್ತಿದ್ದ ಹುಡುಗರನ್ನು ಹುಡುಕಿ ದಂಡ ಹಾಕಲು ಶುರು ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಹೆಲ್ಮೆಟ್ ಧರಿಸದೇ ಬೇಕು ಬೇಕಾದಂತೆ ಸವಾರಿ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ, ವಿಡಿಯೊ ಅಪ್ಲೋಡ್ ಮಾಡುವವರನ್ನು ಪೊಲೀಸರು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ.
ನಂಬರ್​ ಪ್ಲೇಟ್ ಮೂಲಕ ವಾಹನಗಳ ಮಾಲೀಕರನ್ನು ಗುರುತಿಸಿ, ದಂಡದ ನೊಟೀಸ್​ಗಳನ್ನು ಕಳಿಸುತ್ತಿದ್ದಾರೆ. ಸಿಗ್ನಲ್ ಉಲ್ಲಂಘನೆ ಅಥವಾ ಬೇರೊಂದು ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬೀಳುವ ವಾಹನ ಸವಾರರು ಹಳೆಯ ತಪ್ಪುಗಳ ದಂಡವನ್ನೂ ಸೇರಿಸಿ ಕಟ್ಟಬೇಕಾಗುತ್ತದೆ.

ಪೋಲೀಸರ ಈ ದಂಡ ಹಾಕುವ ಪ್ಲಾನಿಗೆ ಹುಡುಗರು ಬ್ಲರ್ ಮಾಡುವ ಆಯ್ಕೆ ಬಳಸುತ್ತಿರುವ ಅಂದರೆ ಬೈಕ್​ಗಳ ನಂಬರ್​ ಪ್ಲೇಟ್ ಕಾಣದಂತೆ ಎಚ್ಚರ ವಹಿಸುತ್ತಿದ್ದಾರೆ. ಪೊಲೀಸರು ಚಾಪೆ ಕೆಳಗೆ ನುಸುಳಿದರೆ, ಪುಂಡರು ರಂಗೋಲಿ ಕೆಳಗೆ ನುಸುಳುವ ಬುದ್ದಿವಂತಿಕೆ ತೋರಿಸುತ್ತಾ ರೀಲ್ಸ್ ಮಾಡುತ್ತಿದ್ದಾರೆ.

ಇತ್ತೀಚಿಗೆ ಪೊಲೀಸರು ‘ದಚ್ಚು ದಿವು’ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ರೀಲ್ಸ್​ ಮಾಡುತ್ತಿದ್ದವರಿಗೆ ಇದೇ ರೀತಿ ದಂಡ ಹಾಕುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದರೆ
ಪೊಲೀಸರ ಕ್ರಮದಿಂದ ತಪ್ಪಿಸಿಕೊಳ್ಳಲು ರೀಲ್ಸ್​ ಹುಡುಗರು ಇದೀಗ ಮತ್ತೊಂದು ಉಪಾಯ ಕಂಡುಕೊಂಡಿದ್ದಾರೆ. ಪ್ರಸ್ತುತ ಅದೇ ‘ದಚ್ಚು ದಿವು’ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಹಲವು ರೀಲ್ಸ್​ಗಳು ಪತ್ತೆಯಾಗಿವೆ.

‘ದಚ್ಚು ದಿವು’ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ರೀಲ್ಸ್​ ಮಾಡುತ್ತಿದ್ದವರು ಈಗಾಗಲೇ ಸಂಚಾರ ಪೊಲೀಸರಿಗೆ ಈ ಹಿಂದೆ ರೂಪಾಯಿ 17,500 ದಂಡವನ್ನು ಪಾವತಿಸಿದ್ದರು. ಆದರೆ ಈಗ ಹೊಸ ಉಪಾಯದಿಂದ ರೀಲ್ಸ್​ ಮಾಡುತ್ತಿದ್ದು, ನಂಬರ್ ಪ್ಲೇಟ್ ಕಾಣಿಸದ ರೀತಿಯಲ್ಲಿ ಎಚ್ಚರ ವಹಿಸಿದ್ದಾರೆ . ಸಮಾಜದ ರಕ್ಷಣೆ ಮಾಡಲು ಈ ರೀತಿ ಕಾನೂನಿನ ಕಣ್ಣು ತಪ್ಪಿಸಿ ರೀಲ್ಸ್ ಮಾಡುವವರಿಗೆ ಸರಿಯಾದ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯು ಈಗಾಗಲೇ ಮುಂಚೂಣಿಯಲ್ಲಿದೆ.

Leave A Reply

Your email address will not be published.