ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೊಂದು ರೇಪ್ ಕೇಸ್ | ಅಪ್ರಾಪ್ತ ಬಾಲಕಿ ಮೇಲೆರಗಿದ 65ರ ವೃದ್ಧ!!!

ಮೊನ್ನೆಯಷ್ಟೇ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ‌ ಪ್ರಕರಣ ನಡೆದಿದ್ದು ಈ ಘಟನೆ ಮಾಸುವ ಮೊದಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಮೇಲೆ 65 ವರ್ಷದ ವೃದ್ಧನೋರ್ವ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಬಾಲಕಿಯ ಸಹೋದರಿ ಹಲಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

ಮಳವಳ್ಳಿ ತಾಲೂಕಿನ ಬ್ಯಾಡರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಲಕಿಗೆ ತಿಂಡಿ ಊಟ ಕೊಡಿಸುವುದಾಗಿ ಬಣ್ಣದ ಮಾತಾಡಿ ಬಸವನಹಳ್ಳಿ ಬೆಟ್ಟಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸಂತ್ರಸ್ತೆ ಬಾಲಕಿಯ ಸಹೋದರಿ ದೂರಿನ ಮೇರೆಗೆ ಆರೋಪಿ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹಲಗೂರು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಮಂಡ್ಯದ ಮಳವಳ್ಳಿಯಲ್ಲಿ ಟ್ಯೂಷನ್ ಸೆಂಟರ್‌ನಲ್ಲಿ ಮೇಲ್ವಿಚಾರಕನಾಗಿದ್ದ ಆರೋಪಿ 52 ವರ್ಷದ ಕಾಂತರಾಜು ಎಂಬಾತ, ಫೋನ್ ಮಾಡಿ ಬರಹೇಳಿ ಆ ಪುಟ್ಟ ಬಾಲೆಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಘಟನೆ ಮಾಸುವ ಮೊದಲೇ ಈ ಘಟನೆ ನಡೆದಿದ್ದು ಜನ ಮತ್ತೊಮ್ಮೆ ಆಕ್ರೋಶ ಗೊಳ್ಳಲು ಕಾರಣವಾಗಿದೆ ಎಂದೇ ಹೇಳಬಹುದು‌.

Leave A Reply

Your email address will not be published.