MBBS Books In Hindi : ಇನ್ನು ಮುಂದೆ ಎಂಬಿಬಿಎಸ್ ಕೋರ್ಸನ್ನು ಹಿಂದಿಯಲ್ಲಿ ಕಲಿಯ ಬಹುದು | ಯಾವ ಕಾಲೇಜು ಹಿಂದಿಯಲ್ಲಿ ಬೋಧಿಸಲು ರೆಡಿಯಾಗಿದೆ ಗೊತ್ತೇ?

ವೈದ್ಯಕೀಯ ಕಾಲೇಜುಗಳು ಅಲ್ಲಲ್ಲಿ ತೆರೆಯುತ್ತಿದೆ. ಅಲ್ಲದೆ ವೈದ್ಯಕೀಯ ಕೋರ್ಸುಗಳಿಗೆ ಉತ್ತಮ ಬೇಡಿಕೆ ಇದೆ. ಜನಸಂಖ್ಯೆ ಹೆಚ್ಚಾಗಿ ಇದ್ದು ವೈದ್ಯಕೀಯ ಸೇವೆಯ ಅಗತ್ಯ ಸಹ ಹೆಚ್ಚಾಗುತ್ತಿದೆ. ಅಲ್ಲದೆ ಹೆಚ್ಚಿನ ಆವಿಷ್ಕಾರ ತಂತ್ರಜ್ಞಾನ ಬೆಳವಣಿಗೆ ಹೊಂದಲು ವೈದ್ಯಕೀಯ ಭಾಗದ ಕೊಡುಗೆ ಅಪಾರವಾಗಿದೆ.

ಪ್ರಸ್ತುತ ಮಧ್ಯಪ್ರದೇಶದ ಎಲ್ಲ 13 ಸರಕಾರಿ ವೈದ್ಯಕೀಯ ಕಾಲೇಜುಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್‌ನ 3 ವಿಷಯಗಳಾದ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಹಾಗೂ ಜೀವರಸಾಯನಶಾಸ್ತ್ರವನ್ನು ಹಿಂದಿಯಲ್ಲಿ ಬೋಧಿಸಲಿವೆ ಎಂದು ಮಧ್ಯ ಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಂಬಿಬಿಎಸ್‌ನ ಪ್ರಥಮ ವರ್ಷದ ಪುಸ್ತಕಗಳ ಅನುವಾದವನ್ನು ಭೋಪಾಲದಲ್ಲಿ ಅಕ್ಟೋಬರ್ 16ರಂದು ಬಿಡುಗಡೆ ಮಾಡುವ ಮೂಲಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಆರಂಭಿಸಲಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರಕಾರ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕೋರ್ಸ್ ಗಳನ್ನು ಹಿಂದಿಯಲ್ಲಿ ಕಲಿಯಲು ಹಾಗೂ ಬೋಧಿಸಲು ಸಾಧ್ಯವಿಲ್ಲ ಎಂಬ ಚಿಂತನೆಯನ್ನು ಇದು ಬದಲಿಸಲಿದೆ ಎಂದು ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಪ್ರಕಾರ ಇಂಗ್ಲೀಷ್ ಪುಸ್ತಕದೊಂದಿಗೆ ಹಿಂದಿ ಪುಸ್ತಕ ಕೂಡ ಲಭ್ಯವಿರಲಿದೆ. ಆದರೆ, ಕೆಲವು ತಾಂತ್ರಿಕ ಶಬ್ದಗಳು ಇಂಗ್ಲೀಷ್‌ನಲ್ಲೇ ಇರಲಿದೆ ಎಂದು ಹೇಳಿದ್ದಾರೆ.ಇದರಿಂದಾಗಿ ವೈದ್ಯಕೀಯ ರಂಗದಲ್ಲಿ ಒಂದು ಮಹತ್ತರ ಬೆಳವಣಿಗೆ ಆಗಬಹುದು ಎಂಬ ಆಶ್ವಾಸನೆ ನೀಡಿರುತ್ತಾರೆ.

Leave A Reply

Your email address will not be published.