BBK season 9 : ದೊಡ್ಮನೆಯಿಂದ ದರ್ಶ್ ಔಟ್ | ಉದ್ಯಮಿಯ ಆಟ ಜನಕ್ಕೆ ಇಷ್ಟವಾಗಲಿಲ್ಲವೇ?

ಬಿಗ್ ಬಾಸ್ ಸೀಸನ್ 9 ರಲ್ಲಿ ಮೂರನೇ ವಾರದಲ್ಲಿ ಕಿಚ್ಚ ಸುದೀಪ್ ಅವರು ತುಂಬಾ ಗರಂ ಆಗಿ ಬಿಟ್ಟರು. ಈ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹಲವಾರು ಸ್ಪರ್ಧಿಗಳಿಗೆ ಕೊಂಚ ವಾರ್ನಿಂಗ್ ನೀಡಿದ್ದಾರೆ. ಇನ್ನೊಬ್ಬರನ್ನು ಹೇಳುವ ಮುನ್ನ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ ಎಂದು ಖಡಕ್ ಆಗಿ ಕಿಚ್ಚ ಹೇಳಿದ್ದಾರೆ. ಇದರಿಂದಾಗಿ ಸ್ಪರ್ಧಿಗಳು ಗಪ್ ಚುಪ್ ಆಗಿದ್ದಾರೆ.

 

ದರ್ಶ್ ಚಂದ್ರಪ್ಪ ಅವರು ಬಿಗ್ ಬಾಸ್ ಸೀಸನ್ 9 ರ ಮೂರನೇ ವ್ಯಕ್ತಿ ಎಂದು ಹೇಳಲಾಗ್ತಿದೆ. ನೋಡಲು ತುಂಬಾ ಫೇರ್ ಆಗಿದ್ದು , ಫಿಸಿಕಲ್ ಸ್ಟ್ರಾಂಗ್ ಕೂಡ ಇದ್ದರು. ಆದರೆ ಇವರಿಗೆ ಜನರ ವಿಶ್ವಾಸ ಗೆಲ್ಲಲು ಸಾಧ್ಯವಾಗಲಿಲ್ಲ.

ಲುಕ್, ಸ್ಟ್ರಾಂಗ್ ಯಾವುದೂ ವರ್ಕ್ ಆಗಲಿಲ್ಲ ಅನಿಸುತ್ತಿದೆ. ಅಲ್ಲದೆ ದುರ್ಗಾ, ಸೀತಾ ವಲ್ಲಭ, ಸೀರಿಯಲ್ ಮೂಲಕ ಜನರ ಮನಸ್ಸು ಗೆದ್ದಿದ್ದ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗ್ತಿದೆ.

ಆಟದಲ್ಲೂ ಯಾವಾಗಲೂ ಮುಂದೆ ಇರುತ್ತಿದ್ದರು. ಆದ್ರೆ ಇನ್ನು ಸ್ವಲ್ಪ ಗೇಮ್ ಚೆನ್ನಾಗಿ ಆಡಬೇಕಿತ್ತು ಎಂದು ಜನರ ಅಭಿಪ್ರಾಯ. ಪ್ರಶಾಂತ್ ಸಂಬರ್ಗಿ ಕಳೆದ ಬಾರಿ ಮನೆಯಿಂದ ಹೊರ ಹೋದ ಮೇಲೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ್ರು ಎಂದು ಮಾತಿನ ಜಗಳವಾಗಿತ್ತು. ಪ್ರಶಾಂತ್ ಸಂಬರ್ಗಿ ಅದು ನನ್ನ ಇಷ್ಟ ಎಂದಿದ್ದರು ಹಾಗಾಗಿ ಮೊದಲ ವಾರ ದರ್ಶ್ ಚಂದ್ರಪ್ಪ ಸಂಬರ್ಗಿ ಜೊತೆ ಜಗಳ ಮಾಡಿ ಎಡವಿದರು ಎಂಬ ಗುಸು ಗುಸು ಕೇಳುತ್ತಿದೆ.

ದರ್ಶ್ ಅವರು ಒಮ್ಮೆ ರೂಲ್ಸ್ ಬ್ರೇಕ್ ಮಾಡಿ ಚಿನ್ನ ತೆಗೆದುಕೊಂಡು ಬಂದು, ದಂಡವಾಗಿ ಸಂಪಾದಿಸಿದ ಚಿನ್ನವನ್ನೆಲ್ಲಾ ಬಿಗ್ ಬಾಸ್​ಗೆ ಕೊಟ್ಟಿದ್ದರು. ಈ ವಾರದ ಕ್ಯಾಪ್ಟನ್ ಆಗಲು ಬಿಗ್ ಬಾಸ್ ಗೋಲ್ಡ್ ಮೈನ್ ಆಟವನ್ನೂ ದರ್ಶ್ ಚೆನ್ನಾಗಿ ಆಡಿದ್ರೂ ಆದ್ರೆ ಕ್ಯಾಪ್ಟನ್ ಆಗಲಾಗಲಿಲ್ಲ

ನಾನು ತುಂಬಾ ಕಷ್ಟ ಪಟ್ಟು ನಟನೆಗೆ ಬಂದೆ. ಅಲ್ಲೂ ಅವಕಾಶ ಅಷ್ಟು ಸಿಕ್ಕಿಲ್ಲ. ಈಗ ಉದ್ಯಮ ಶುರು ಮಾಡಿ ಅದರಲ್ಲಿ ಯಶಸ್ವಿ ಆಗುತ್ತಿದ್ದೇನೆ ಎಂದು ಹೇಳಿ ತಮ್ಮ ದುಃಖ ಮತ್ತು ಖುಷಿಯನ್ನು ಹಂಚಿಕೊಂಡರು.

ಜನಕ್ಕೆ ಯಾಕೋ ದರ್ಶ್ ಚಂದ್ರಪ್ಪ ಇಷ್ಟ ಆಗಿಲ್ಲ. ಆದರೆ ಬಿಗ್ ಬಾಸ್ ಮನೆ ಮಂದಿ ಜೊತೆ ದರ್ಶ್ ಚೆನ್ನಾಗಿ ಹೊಂದಿಕೊಳ್ತಾ ಇದ್ರು. ಇನ್ನೂ ಚೆನ್ನಾಗಿ ಆಡಬೇಕಿತ್ತು ಎಂದು ಜನರ ಅಭಿಪ್ರಾಯ ಆಗಿದೆ.
ಒಟ್ಟಾರೆಯಾಗಿ ದರ್ಶ್ ಚಂದ್ರಪ್ಪ ಔಟ್ ಆಗಿ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ.

Leave A Reply

Your email address will not be published.