Liquoy Rate : ಮದ್ಯಪ್ರಿಯರೇ ಗಮನಿಸಿ | ದುಬಾರಿಯಾಯ್ತು ಬಿಯರ್ ಬೆಲೆ
ಪ್ರಸ್ತುತ ಮಧ್ಯ ಪ್ರಿಯರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಬಿಯರ್ ನ್ನು ಹೆಚ್ಚಾಗಿ ಜನರು ಇಷ್ಟ ಪಡುವರು. ಕೆಲವರಿಗಂತೂ ದಿನಾ ಒಂದೊಂದು ಬಿಯರ್ ಬೇಕೇ ಬೇಕು ಮುಖ್ಯವಾಗಿ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಗೋವಾದಲ್ಲಿ ಬಿಯರ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಗೋವಾದಲ್ಲಿ ಮಧ್ಯ ಸೇವಿಸದವರು ಇಲ್ಲ. ಅಲ್ಲದೆ ಗೋವಾದಲ್ಲಿ ಹಾಲಿಗಿಂತ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಎಂದರೆ ತಪ್ಪಾಗಲಾರದು. ಉದಾಹರಣೆ ಗೆ ಶೇಕಡಾ 100 ರಲ್ಲಿ 97ಶೇಕಡಾ ಗೋವಾದ ಜನರು ಮಧ್ಯ ಸೇವಿಸುತ್ತಾರೆ. ಹೀಗಿರುವಾಗ ಮದ್ಯಪ್ರಿಯರಿಗೆ ಮಧ್ಯ ಬೆಲೆ ಏರಿಕೆ ಬೇಸರ ತರಿಸಿದೆ.
ಗೋವಾ ಸರ್ಕಾರ ಪ್ರಕಾರ ಅಬಕಾರಿ ಸುಂಕ ಹೆಚ್ಚಳ ಮಾಡಿರುವುದರಿಂದ ಲೀಟರ್ ಬಿಯರ್ ಬಾಟಲ್ ತೆರಿಗೆ ಪ್ರಮಾಣ 30 ರಿಂದ 42 ರೂ.ಗೆ ಏರಿಕೆಯಾಗಿದೆ ಎನ್ನಲಾಗಿದೆ. ಬಿಯರ್ ದರ 160 ರೂ.ಗೆ ಹೆಚ್ಚಳವಾಗಲಿದೆ. ಇತರೆ ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡದೇ ಎಂದಿನಂತೆ ಬೆಲೆ ಕಾಯ್ದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗೋವಾ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡಿದ್ದು, ಒಂದು ಲೀಟರ್ ಬಿಯರ್ ಮೇಲಿನ ಅಬಕಾರಿ ಸುಂಕ 12 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದೆ.