ಶಾಕಿಂಗ್ ಸುದ್ದಿ | ಅತೀ ಹೆಚ್ಚು ಹ್ಯಾಕಿಂಗ್ ಗೆ ಒಳಗಾಗುತ್ತಿರುವುದು ಆಂಡ್ರಾಯ್ಡ್ ಸ್ಮಾರ್ಟ್ ಮೊಬೈಲ್ ಗಳು
ಈ ಆಧುನಿಕ ಜಗತ್ತಿನಲ್ಲಿ ಹ್ಯಾಕಿಂಗ್ ದಂಧೆ ಅನ್ನುವಂತದ್ದು ವ್ಯಾಪಕವಾಗಿರುವ ಒಂದು ಬಗೆಯ ದಾಳಿ. ಎಂತಹದ್ದೇ ಸ್ವರೂಪದ ತಂತ್ರಜ್ಞಾನವಿದ್ದರೂ ಹ್ಯಾಕರ್ಸ್ ಗಳು ವಿಭಿನ್ನ ರೂಪದಲ್ಲಿ ಅದನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ.
ಒಂದು ಬಲ್ಲ ಮಾಹಿತಿಗಳ ಪ್ರಕಾರ ಹೆಚ್ಚಾಗಿ ಹ್ಯಾಕ್‌ಗೆ ಒಳಗಾಗುತ್ತಿರುವುದು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಾಗಿವೆ. ಇವುಗಳ ಹ್ಯಾಕ್ ಮಾಡಲೆಂದೇ ಕೆಲವು ಆ್ಯಪ್‌ಗಳನ್ನು ಸೃಷ್ಟಿಸಲಾಗುತ್ತದೆ.
ಆಂಡ್ರಾಯ್ಡ್ ಅಥವಾ ಐಫೋನ್ ಬಳಸುತ್ತಿದ್ದರೆ ಈಗಿನ ಟೆಕ್ನಾಲಜಿಯಲ್ಲಿ ನಿಮ್ಮನ್ನು ಟ್ರ್ಯಾಕ್ ಮಾಡಿ, ನೀವು ಆನ್‌ಲೈನ್‌ನಲ್ಲಿ ಏನು ಮಾಡುತ್ತಿದ್ದೀರಿ, ನಿಮ್ಮ ಕಾರ್ಯ ಚಟುವಟಿಕೆಗಳೇನು ಎಂಬುವ ಹಲವು ಸಂಗತಿಗಳನ್ನು ಅರಿಯುವುದು ಬಲೂ ಈಝಿಯಾಗಿ ಬಿಟ್ಟಿದೆ.
ಗ್ರಾಫೆನ್ ಒ ಎಸ್ ಸ್ಮಾರ್ಟ್‌ಫೋನ್ ಬಳಸಿ ಐಒಎಸ್ ಮತ್ತು ಆಂಡ್ರಾಯ್ಡ್ ಎರಡು ಕೂಡ ದುರ್ಬಲವಾಗಿದ್ದು, ಪ್ರತಿ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುವ ಐಒಎಸ್ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂಗಳು ಅಸಂಖ್ಯಾತ ಪ್ರೋಗ್ರಾಮಿಂಗ್ ನ್ಯೂನತೆಗಳನ್ನು ಹೊಂದಿದೆ. ಅಂದರೆ ಐಮೆಸೇಜ್ ಅಥವಾ ವೆಬ್ ಬ್ರೌಸರ್‌ಗಳಂತಹ ಸಾಮಾನ್ಯ ಆ್ಯಪ್‌ಗಳು ಅಪಾಯಕಾರಿಯಾಗಿದ್ದು, ನಿಮ್ಮನ್ನು ಹ್ಯಾಕ್ ಮಾಡುವುದು ತುಂಬಾನೆ ಸುಲಭ ಎಂದರ್ಥ.
ವ್ಯಾಪಕವಾಗಿ ಹ್ಯಾಕ್‌ಗೆ ಒಳಗಾಗುತ್ತಿರುವುದು ಇದೇ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳು. ಇಲ್ಲಿ ಕೆಲವು ಶಂಕಿತ URL ಗಳೂ ಇದ್ದು, ಇವುಗಳ ಮೇಲೆ ಅಪ್ಪಿತಪ್ಪಿ ಒಂದು ಕ್ಲಿಕ್ ಮಾಡಿದರೆ ಸಾಕು, ಮೊಬೈಲ್‌ನಲ್ಲಿನ ಸಂಪೂರ್ಣ ಮಾಹಿತಿ ಹ್ಯಾಕರ್‌ಗಳ ಪಾಲಿಗೆ ಸೇರಿರುತ್ತದೆ ಎಂಬ ಕಟುಸತ್ಯವೊಂದಿದೆ.
ಇಲ್ಲಿ ಕೆಲವೊಂದು ಕ್ರಮಗಳು ನಮ್ಮನ್ನು ಹ್ಯಾಕಿಂಗ್ ನಿಂದ ರಕ್ಷಿಸಬಹುದು. ಅವುಗಳು, ಅಗತ್ಯ ಬಂದರೆ ಮಾತ್ರ ಮೈಕ್ರೊಫೋನ್, ಬ್ಲೂಟೂತ್ ಬಳಸಬೇಕು. ರಹಸ್ಯ ಆ್ಯಪ್ ಮೂಲಕ ನಿಮ್ಮ ಸಂಭಾಷಣೆಗಳನ್ನು ಯಾರಾದರೂ ರಹಸ್ಯವಾಗಿ ಕೇಳುವುದನ್ನು ತಪ್ಪಿಸಲು ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೊಫೋನ್ ಬಳಸುವುದನ್ನು ಕಡಿಮೆ ಮಾಡಬೇಕು. ಮನೆಯಲ್ಲಿ ವೈ-ಫೈ ಬಳಸದೇ ಇರುವುದು ಉತ್ತಮಗೌಪ್ಯತೆ ಕಾಪಾಡುವ ಸಲುವಾಗಿ ಆ್ಯಡ್ ಬ್ಲಾಕರ್ ಮತ್ತು ಪಾಸ್‌ವರ್ಡ್ ಮ್ಯಾನೇಜರ್ ಬಳಸುವುದು ಉತ್ತಮ. ಇಂತಹ ಹಲವು ಮುಂಜಾಗ್ರತಾ ಕ್ರಮವನ್ನು ಕಾರ್ಯಗತಗೊಳಿಸುವ ಮೂಲಕ ಆಂಡ್ರಾಯ್ಡ್ ಹ್ಯಾಕಿಂಗ್ ನಿಂದ ತಪ್ಪಿಸಿಕೊಳ್ಳಬಹುದು.