Bank Time : ಬ್ಯಾಂಕ್ ಅವಧಿ ಹೆಚ್ಚಳ – 30 ನಿಮಿಷ ವಿಸ್ತರಿಸಲು ಯೂನಿಯನ್ ಹೇಳಲು ಕಾರಣವೇನು?
ಪ್ರತಿ ಗ್ರಾಹಕನ ಹಣಕಾಸು ವಹಿವಾಟಿಗೆ ನೆರವಾಗುವ ಉದ್ದೇಶದಿಂದ ಬ್ಯಾಂಕ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಸಾಲ ಸೌಲಭ್ಯ, ಅದರಲ್ಲೂ ಕೆಲ ಬ್ಯಾಂಕ್ಗಳು ಸಾಮಾಜಿಕ ಕಳಕಳಿ ಹೊಂದಿದ್ದು, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಿ ಗ್ರಾಹಕ ಸ್ನೇಹಿ ಸೇವೆಯ ಮೂಲಕ ಜನ ಮನದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬಹುತೇಕ ಕೆಲಸಗಳು ಡಿಜಿಟಲ್ ಮುಖಾಂತರವಾಗಿಯೇ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ಕೂಡ ತಪ್ಪಿಸಿದೆ.
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಭಾರತದ ಬ್ಯಾಂಕ್ ಅಸೊಸೀಯೇಷನ್‌ಗೆ ಬ್ಯಾಂಕ್ ಸಂಬಂಧಿತ ಕಾರ್ಯಗಳಲ್ಲಿ ಮಾಡಬಹುದಾದ ಬದಲಾವಣೆಗಳ ಸಲಹಾ ಪಟ್ಟಿಯನ್ನು ನೀಡಿದ್ದು, ಈ ಪಟ್ಟಿಯಲ್ಲಿ ಬ್ಯಾಂಕ್‌ನ ಕೆಲಸದ ಅವಧಿಯನ್ನು 30 ನಿಮಿಷಗಳ ಕಾಲ ವಿಸ್ತರಣೆ ಮಾಡುವ ಕುರಿತು ಪ್ರಸ್ತಾಪಿಸಲಾಗಿದೆ.
ಈ ಪ್ರಸ್ತಾವನೆಯ ಪ್ರಕಾರ ಬ್ಯಾಂಕ್ ಯೂನಿಯನ್ ಬ್ಯಾಂಕ್‌ನ ಕೆಲಸದ ಅವಧಿಯನ್ನು ಪ್ರತಿ ದಿನ 30 ನಿಮಿಷಗಳ ಕಾಲ ವಿಸ್ತರಣೆ ಮಾಡಲು ಸಮ್ಮತಿ ಸೂಚಿಸಿದೆ. ಹಾಗಾಗಿ, ಮುಂಜಾನೆಯ ಅವಧಿಯಲ್ಲಿ 30 ನಿಮಿಷ ಬೇಗನೇ ಬ್ಯಾಂಕ್ ಕೆಲಸ ಆರಂಭ ಮಾಡಲು ಅವಕಾಶ ಕಲ್ಪಿಸಲಿದೆ.
ಇದರಿಂದ ಗ್ರಾಹಕರ ಸೇವೆಯ ಅವಧಿಯನ್ನು ಕೂಡಾ 30 ನಿಮಿಷ ವಿಸ್ತರಣೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಪ್ರಮುಖವಾಗಿ ಬ್ಯಾಂಕ್‌ನ ಕೆಲಸದ ದಿನವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಈ ಬದಲಾವಣೆಯನ್ನು ಮಾಡಲು ಬ್ಯಾಂಕ್ ಯೂನಿಯನ್ ಸಲಹೆ ನೀಡುತ್ತಿದ್ದು, ಪ್ರಸ್ತುತ ಬ್ಯಾಂಕ್‌ಗಳು ವಾರದಲ್ಲಿ ಆರು ದಿನಗಳ ಕಾಲ ಕಾರ್ಯ ನಿರ್ವಹಣೆ ಮಾಡುತ್ತದೆ.
ಎರಡನೇ ಹಾಗೂ ನಾಲ್ಕನೇ ಶನಿವಾರ ಬರುವ ವಾರಗಳಲ್ಲಿ ಮಾತ್ರ ಬ್ಯಾಂಕ್ 5 ದಿನ ಕಾರ್ಯ ನಿರ್ವಹಣೆ ಮಾಡುತ್ತದೆ. ಆದರೆ ಬ್ಯಾಂಕ್‌ನ ಕೆಲಸದ ಅವಧಿಯನ್ನು ಪ್ರತಿ ದಿನ 30 ನಿಮಿಷಗಳ ಕಾಲ ವಿಸ್ತರಣೆ ಮಾಡುವ ಮೂಲಕ ಕೆಲಸದ ದಿನವನ್ನು ಆರರಿಂದ 5ಕ್ಕೆ ಇಳಿಕೆ ಮಾಡಬಹುದೆಂಬ ಯೋಜನೆಯನ್ನು ಯೂನಿಯನ್ ಬ್ಯಾಂಕ್ ಹೊಂದಿದೆ.
ಈ ಕೆಲಸದ ಅವಧಿಯನ್ನು ಕಳೆದ ವರ್ಷ ವಿಮಾ ಸಂಸ್ಥೆ ಎಲ್‌ಐಸಿ ಪಾಲಿಸಲು ಆರಂಭ ಮಾಡಿದ್ದು, ಅದೇ ರೀತಿ ಅನುಕರಣೆ ಮಾಡುವ ಯೋಚನೆಯನ್ನೂ ಯೂನಿಯನ್ ಬ್ಯಾಂಕ್ ಹೊಂದಿದೆ.
ಬ್ಯಾಂಕ್ ಯೂನಿಯನ್ ಹೇಳಿರುವ ವಿಸ್ತೃತ ಕೆಲಸದ ಅವಧಿಯು ಬೆಳಗ್ಗೆ 9:15ರಿಂದ 4:45 ಆಗಿದ್ದು, ಪ್ರಸ್ತುತ ಬ್ಯಾಂಕ್ ಕೆಲಸದ ಅವಧಿ 9:45ರಿಂದ 4:45 ಆಗಿದೆ.
ಇನ್ನು ಹಣಕಾಸು ವಹಿವಾಟು ನಡೆಸುವ ಅವಧಿಯನ್ನು 9:30 ರಿಂದ ಮಧ್ಯಾಹ್ನ 1:30 ವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 3:30 ವರೆಗೆ ಬದಲಾವಣೆ ಮಾಡಬಹುದು ಎಂದು ಕೂಡ ಅಂದಾಜಿಸಲಾಗಿದೆ.
ಹಾಗೆಯೇ ಉಳಿದ ಕೆಲಸದ ಅವಧಿಯನ್ನು 3:30 ರಿಂದ 4:45 ರವರೆಗೆ ನಡೆಸಬಹುದು ಎಂದು ಊಹಿಸಲಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ವಾರದಲ್ಲಿ 5 ದಿನ ಮಾತ್ರ ಕೆಲಸದ ಅವಧಿ ಇರಬೇಕು ಎಂದು ಬ್ಯಾಂಕ್ ಯೂನಿಯನ್ ಮನವಿ ಮಾಡಿತ್ತು. ಆದರೆ ಐಬಿಎ ಈ ಮನವಿಯನ್ನು ತಿರಸ್ಕರಿಸಿ ಬದಲಾಗಿ ಉದ್ಯೋಗಿಗಳಿಗೆ ಗರಿಷ್ಠ ಶೇಕಡ 19ರಷ್ಟು ಏರಿಕೆ ಮಾಡಿದೆ.
ಪ್ರಸ್ತುತ ಎಲ್ಲ ಭಾನುವಾರ ಹಾಗೂ ಎರಡನೇ, ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ವಾರದ ರಜೆಯಾಗಿದೆ. ಈ ಮೂಲಕ ತಿಂಗಳ ರಜೆಯ ದಿನದಲ್ಲಿ ಇನ್ನು ಎರಡು ರಜೆ ದಿನವನ್ನು ಸೇರ್ಪಡೆ ಮಾಡಲು ಸಾಧ್ಯವಾಗಲಿದೆ ಎಂಬುವುದು ಯೂನಿಯನ್‌ನ ಮುಂದಾಲೋಚನೆಯ ಪಕ್ಷಿ ನೋಟವಾಗಿದ್ದು, ಆರ್‌ಬಿಐ ಈ ಸಲಹೆಯನ್ನು ಅಂಗಿಕರಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ.