ರಶ್ಮಿಕಾ ಜತೆ ವಿಜಯ್ ದೇವರಕೊಂಡ ಸೀಕ್ರೆಟ್ ಡೇಟಿಂಗ್ ? ಡೇಟಿಂಗ್ ಅಂದ್ರೆ ಏನ್ ಕಣಣ್ಣೋ…..?!!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತೆಲುಗಿನ ಗೀತ ಗೋವಿಂದ ಚಿತ್ರದಲ್ಲಿ ನಟಿಸಿದ ನಂತರ ಪರಸ್ಪರ ಬಹಳಷ್ಟು ಹತ್ತಿರವಾಗಿದ್ದಾರೆ. ಅವರು ನಡುವೆ ಹೃದಯ ಗೀತೆ ನುಡಿಯುತ್ತಿದೆ ಎಂಬುದಾಗಿ ದೊಡ್ಡದಾಗಿ ಚರ್ಚೆ ಅವತ್ತಿನಿಂದಲೇ ನಡೆದಿದೆ. ಅದು ಇವತ್ತಿಗೂ ನಿಂತಿಲ್ಲ. ಅದಕ್ಕೆ ಪೂರಕವೆಂಬದ್ದೇ ಆ ಜೋಡಿ ಆಗಾಗ ಅಲ್ಲಿಲ್ಲಿ ಜೊತೆಯಾಗಿ ಕಾಣಿಸಿಕೊಂಡು ಜನರ ಊಹೆಗಳಿಗೆ ರೆಕ್ಕೆ ಅಂಟಿಸಿ, ಪುಕ್ಕ ಬಳಿದು ಆ ಸುದ್ದಿಗಳನ್ನು ಪೋಷಿಸುತ್ತಾ ಬಂದಿದ್ದಾರೆ.

ಈಗ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದರು. ಅವರ ಜೊತೆ ವಿಜಯ್ ದೇವರಕೊಂಡ ಕೂಡ ಹೋಗಿದ್ದರು ಎಂಬುದು ಹಲವರ ಗುಮಾನಿ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿಲ್ಲ. ಆದರೆ ಅವರಿಬ್ಬರು ಒಟ್ಟಿಗೆ ಪ್ರವಾಸ ಮಾಡಿದ್ದಾರೆ ಎಂಬುದು ಗಾಸಿಪ್ ಮಂದಿಯ ವಾದ. ಆ ವಾದಕ್ಕೆ ಪೂರಕವಾಗಿ ತನಿಖಾ ಮಾದರಿಯಲ್ಲಿ ಸಾಂದರ್ಭಿಕ ಸಾಕ್ಷಿಗಳನ್ನು ಎದುರುಗಿಟ್ಟು ಅವರು ವಾದಿಸುತ್ತಿದ್ದಾರೆ. ಯಾವುದು ಆ ಸಾಕ್ಷಿಗಳು ಹಾಗಾದರೆ ಬನ್ನಿ ನೋಡೋಣ.

  1. ಅಕ್ಟೋಬರ್ 7ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣ ಪ್ರವೇಶ ಮಾಡಿದ್ದರು.
  2. ಮಾಲ್ಡೀವ್ಸ್ ನಲ್ಲಿ ಯಾಕೆ ಕಪ್ಪು ಕನ್ನಡಕ ಧರಿಸಿ ಫೋಟೋಶೂಟ್ ಮಾಡಿದ್ದಳು. ವಿಜಯ್ ದೇವರಕೊಂಡ ಕೂಡ ವಾಪಸ್ ಬರುವಾಗ ಅಂತದ್ದೇ ಮಾದರಿಯ ಕನ್ನಡಕದಲ್ಲಿ ಕಾಣಿಸಿಕೊಂಡಿದ್ದ.

3.ಅ.11ರ ರಾತ್ರಿ ರಶ್ಮಿಕಾ ಮಂದಣ್ಣ ಅವರು ಮಾಲ್ಡೀವ್ಸ್ನಿಂದ ವಾಪಸ್ ಬಂದಿದ್ದಾರೆ.

4.ಅದೇ ಸಮಯದ ಆಸುಪಾಸಿನಲ್ಲಿ ವಿಜಯ್ ದೇವರಕೊಂಡ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

  1. ಮೇಲಿನ ಎಲ್ಲಾ ಸಾಂದರ್ಭಿಕ ಸಾಕ್ಷಿಗಳನ್ನು ಕಲೆ ಹಾಕಿದ ಗಾಸಿಪ್ ಮಂದಿ, ಇಬ್ಬರೂ ಒಂದೇ ದಿನ ಹೋಗಿ, ಒಂದೇ ದಿನ ವಾಪಸ್ ಬಂದಿರುವುದು ಬರೀ ಕಾಕತಾಳೀಯ ಅಲ್ಲ, ಹಾಗಾಗಿ ರಶ್ಮಿಕಾ ಜತೆ ವಿಜಯ್ ದೇವರಕೊಂಡ ಕೂಡ ಸೀಕ್ರೆಟ್ ಆಗಿ ಮಾಲ್ಡೀವ್ಸ್ ಪ್ರವಾಸ ಮಾಡಿದ್ದಾರೆ ಅಂತಿದ್ದಾರೆ. ಅವರು ಹಾಲಿಡೇ ಎಂಜಾಯ್ ಮಾಡೋಕೆ ಅಂತಾನೇ ಅಲ್ಲಿ ಹೋಗಿದ್ದಾರೆ. ಹಾಗೆ ಹೋಗಿ ವಾಪಸ್ ಬರುವಾಗ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಈ ಇಬ್ಬರು ಮುಂಬೈಗೆ ಬಂದಿಳಿದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಾಗಾದ್ರೆ ಅವರಿಬ್ಬರೂ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವುದು ಸೋಶಿಯಲ್ ಮೀಡಿಯಾದ ಸದ್ಯದ ನಂಬಿಕೆ.

  2. ಈ ಮಧ್ಯೆ ಡೇಟಿಂಗ್ ಸುದ್ದಿ ಓದಿದ ಸಂಗಮೇಶನಿಗೆ ಅದೊಂದು ಪದಕ್ಕೆ ಅರ್ಥ ಸಿಕ್ಕೇ ಇಲ್ಲ. ಆತ ಹಲವು ವರ್ಷಗಳಿಂದ ಆ ಪದದ ಅರ್ಥಕ್ಕಾಗಿ ಹುಡುಕಾಟ ನಡೆಸಿದ್ದಾನೆ. ಈಗ ಗೆಳೆಯನ ಬಳಿ ಕೇಳೆ ಬಿಟ್ಟ. ” ಈ ಡೇಟಿಂಗ್ ಅಂದ್ರೆ ಏನಣ್ಣೋ ? ” ಎಂದು ಅಮಾಯಕನಾಗಿ ಕೇಳಿದ್ದಾನೆ ಆತ. ಅನುಭವಸ್ತ ಅನಂತು ಇಳಿ ಬಿದ್ದ ಮೀಸೆಯ ಕೆಳಗೆ ಸಣ್ಣಗೆ ಮುಗುಳು ನಗೆ ಎಬ್ಬಿಸಿದ್ದಾನೆ. ಗೆಳೆಯನಿಗೆ ಬೇಜಾರು ಮಾಡಲು ಇಷ್ಟ ಇಲ್ಲದೆ, ” ನೋಡ್ಲಾ, ಡೇಟಿಂಗು ಅಂದ್ರೆ ಇಬ್ರೆ ಹುಡುಗ ಹುಡುಗಿ ಜತ್ಯಾಗೆ ಓಗೋದು; ದೂರ ಎಲ್ಲಾರ ಓಗಿ ತಿರ್ಗಾಡ್ಕೊಂಡಿ ಮೂರ್ ನಾಲ್ಕ್ ದಿನ ಬಿಟ್ ಬರೋದ್, ಅಷ್ಟೇಯಾ. ಇಕಾ ನಿನ್ ರಂಗಿ ಜತೆ ನೀ ಓದೆ ಅಂತಿಟ್ಕ, ಆಗ ಎನ್ ನೋಡ್ಕೊಂಡ್ ಮಾಡ್ಕೊಂಡ್ ಬರ್ತೀಯಾ ಹೇಳ್ಲಾ ?” ರಂಗಿಯ ಸುದ್ದಿ ತೆಗೆದ ಕೂಡಲೇ ಸಂಗಮೇಶನ ಮುಖದ ಬಣ್ಣ ಬದ್ಲಾಗಿ, ” ಓಹೋ…. ಅದಾ…ಮದ್ವೆಗೆ ಮುಂಚೆನೇ…” ಮುಂದಕ್ಕೆ ಮಾತಾಡಲು ಬಿಡದ ಅನಂತು, ಸಂಗಮೇಶನಿಗೆ ಗದರಿ,” ಎದ್ದೆಲ್, ನಡಿ ಟೇಮಾಯ್ತ್ ” ಎಂದು ಮುಂದಿನ ಉತ್ತರ ಕೊಡುವ ಕಷ್ಟದಿಂದ ತಪ್ಪಿಸಿಕೊಂಡು ಜಾಗ ಖಾಲಿ ಮಾಡಿದ. ಹಾಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮಧ್ಯದ ಡೇಟಿಂಗ್ ವಿಷಯ ಜೋರಾಗಿ ಹವಾ ಎಬ್ಬಿಸುತ್ತಿದೆ.

Leave A Reply

Your email address will not be published.