ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೇ ನಿಮಗಿಲ್ಲ ಸರ್ಕಾರಿ ಸೌಲಭ್ಯ!

ಇನ್ಮುಂದೆ ಒಂದು ಕುಟಂಬ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೇ, ಆ ಕುಟುಂಬದ ಯಾವುದೇ ಸದಸ್ಯರಿಗೆ ಸರ್ಕಾರಿ ಸೌಲಭ್ಯ ಹಾಗೂ ಪ್ರಯೋಜನಗಳು ಲಭ್ಯವಿರುವಿದಿಲ್ಲ. ಹೌದು. ಈಗಂತ ಸರ್ಕಾರವೆ ಮಾಹಿತಿ ನೀಡಿದೆ.

 

ಜನಸಂಖ್ಯೆ ನಿಯಂತ್ರಣ ವಾಗದ ಹಿನ್ನೆಲೆಯಲ್ಲಿ ಸುಗ್ರಿವಾಜ್ಞೆ ಮೂಲಕ ಅನುಮೋದನೆ ನೀಡಲಾಗಿದೆ. ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದು ಮಣಿಪುರ ಸರ್ಕಾರ.ಮಣಿಪುರ ರಾಜ್ಯ ಜನಸಂಖ್ಯಾ ಆಯೋಗ ನೀಡಿರುವ ವರದಿ ಆಧರಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ ರಾಜ್ಯ ಕ್ಯಾಬಿನೆಟ್ ಸುಗ್ರಿವಾಜ್ಞೆ ಮೂಲಕ ಈ ಕಾಯ್ದೆಗೆ ಅನುಮೋದನೆ ನೀಡಿದೆ. ಈ ನೀತಿ ಜಾರಿಗೆ ಬಂದ ಬಳಿಕ ಯಾವುದೇ ದಂಪತಿ ನಾಲ್ಕು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಆ ಕುಟುಂಬದ ಯಾವುದೇ ಸದಸ್ಯರಿಗೆ ಸರ್ಕಾರಿ ಸೌಲಭ್ಯಗಳು ಇರುವುದಿಲ್ಲ ಎಂದು ಹೇಳಿದೆ.

1971 ರಿಂದ 2001ರ ವರೆಗೆ ಮಣಿಪುರದಲ್ಲಿ ಜನಸಂಖ್ಯಾ ಬೆಳವಣಿಗೆ ಶೇಕಡಾ 153.3. ಇನ್ನು 2001 ರಿಂದ 2011ರವರೆಗಿನ 10 ವರ್ಷಗಳ ಅವಧಿಯಲ್ಲಿನ ಮಣಿಪುರ ಜನಸಂಖ್ಯಾ ಬೆಳವಣಿಗೆ ಶೇಕಡಾ 250. ಹೀಗಾಗಿ, ಇನ್ನು ಜನಸಂಖ್ಯಾ ಅಸಮತೋಲನವನ್ನು ಹೋಗಲಾಡಿಸಲು ಹಾಗೂ ಭವಿಷ್ಯದಲ್ಲಿ ಎದುರಾಗುವ ಅಪಾಯ ತಪ್ಪಿಸಲು ಜನಸಂಖ್ಯಾ ನಿಯಂತ್ರಣ ಕಾನೂನು ಅತ್ಯವಶ್ಯಕ ಎಂದು ಮಣಿಪುರ ಸರ್ಕಾರ ಹೇಳಿದೆ.

Leave A Reply

Your email address will not be published.