Maruti S-Presso CNG : ಹೆಚ್ಚು ಮೈಲೇಜ್ ಕೊಡುವ ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಸಿಎನ್ ಜಿ ಬಂದೇ ಬಿಡ್ತು!!!

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಮಾರಾಟದಲ್ಲಿಯು ಪಾರುಪತ್ಯ ಮುಂದುವರೆಸಿದೆ.

 

ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುವಲ್ಲಿ ಯಶ್ವಸಿಯಾಗಿದೆ.

ಸಿಎನ್ ಜಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಬಹುನೀರಿಕ್ಷಿತ ಎಸ್-ಪ್ರೆಸ್ಸೊ ಸಿಎನ್ ಜಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಕಾರುಗಳಲ್ಲಿ ಇದೂ ಸಹ ಒಂದಾಗಿದೆ.

ಹೊಸ ಸಿಎನ್ ಜಿ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆ ರೂ. 5.90 ಲಕ್ಷ ವಾಗಿದೆ. ನೈಸರ್ಗಿಕ ಅನಿಲವು ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಪೆಟ್ರೋಲ್ ಮಾದರಿಗಳಿಂದಲೂ ಸಾಕಷ್ಟು ಕಡಿಮೆಯಾಗಿ, ಇದು ಇಂಧನ ಮಿತವ್ಯಯವೆನಿಸಿಕೊಂಡಿದೆ.

ಆದರೆ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್‌ ಜಿ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಸ್ವಲ್ಪ ಕಡಿಮೆಯಾಗಿರಲಿದ್ದು, ಆದರೆ ಇಂಧನ ದಕ್ಷತೆ ಹೆಚ್ಚಿರುತ್ತದೆ. ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಸಿಎನ್ ಜಿ ಕಾರು ಮಾದರಿಯು ಎಲ್‌ಎಕ್ಸ್‌ಐ ಮತ್ತು ವಿಎಕ್ಸ್‌ಐ ಎನ್ನುವ ಎರಡು ವೆರಿಯೆಂಟ್ ಗಳನ್ನು ಹೊಂದಿದ್ದು, ಎಲ್‌ಎಕ್ಸ್‌ಐ ವೆರಿಯೆಂಟ್ ರೂ. 5.90 ಲಕ್ಷ ಬೆಲೆ ಹೊಂದಿದ್ದರೆ ವಿಎಕ್ಸ್‌ಐ ಮಾದರಿಯು ರೂ. 6.10 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿ ಸಿಎನ್ ಜಿ ತಂತ್ರಜ್ಞಾನ ಜೋಡಣೆ ಹೊರತುಪಡಿಸಿ ಸಾಮಾನ್ಯ ಮಾದರಿಯಲ್ಲಿರುವಂತೆ ಫೀಚರ್ಸ್ ಹೊಂದಿರಲಿದ್ದು, ಹೆಚ್ಚಿನ ಮೈಲೇಜ್ ಕಾರುಗಳನ್ನು ಖರೀದಿ ಬಯಸುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಲಿದೆ.

ದುಬಾರಿ ಇಂಧನಗಳ ಪರಿಣಾಮ ಹೊಸ ಕಾರು ಖರೀದಿದಾರರು ಹೆಚ್ಚು ಮೈಲೇಜ್ ಪ್ರೇರಿತ ಸಿಎನ್‌ ಜಿ ಕಾರುಗಳತ್ತ ಮುಖ ಮಾಡುತ್ತಿದ್ದು, ಸಿಎನ್‌ಜಿ ಕಾರಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮಾರುತಿ ಎಸ್-ಪ್ರೆಸ್ಸೊ ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗನ್ನು ನೀಡುತ್ತದೆ.

ಇನ್ನು ಮಾರುತಿ ಎಸ್-ಪ್ರೆಸ್ಸೊ ಕಾರಿನ ಇಂಟಿರಿಯರ್ ನಲ್ಲಿ ಹಲವು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಕೊ ಮೀಟರ್, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ ಮತ್ತು ಆರೇಂಜ್ ಕಲರ್ ಆಕ್ಸೆಂಟ್ ಅನ್ನು ಒಳಗೊಂಡಿದೆ.

ಎಸ್-ಪ್ರೆಸ್ಸೊ ಸಿಎನ್ ಜಿ ಕಾರು ಮಾದರಿಯು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಿಂತಲೂ ರೂ. 95 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಅತ್ಯುತ್ತಮ ಇಂಧನ ದಕ್ಷತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ.

ಹೊಸ ಸಿಎನ್ ಜಿ ಕಾರಿನಲ್ಲಿ ಕಂಪನಿಯು 1.0 ಲೀಟರ್ ಡ್ಯುಯಲ್ ಜೆಟ್ ಜೊತೆ ಡ್ಯುಯಲ್ ವಿವಿಟಿ ಕೆ10ಸಿ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಸಿಎನ್ ಜಿ ತಂತ್ರಜ್ಞಾದೊಂದಿಗೆ ಹೊಸ ಕಾರು ಪ್ರತಿ ಕೆಜಿಗೆ ಗರಿಷ್ಠ 32.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇತರ ಎಸ್-ಸಿಎನ್‌ಜಿ ಮಾದರಿಗಳಂತೆ, ಇದು ಡ್ಯುಯಲ್-ಇಂಟರ್-ಅವಲಂಬಿತ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ ಗಳೊಂದಿಗೆ (ECU), ಇಂಟಿಲಿಜೆಂಟ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ, ಸ್ಟೇನ್‌ಲೆಸ್ ಸ್ಟೀಲ್ ಪೈಪ್‌ಗಳು ಜೊತೆಗೆ CNG ಸಿಸ್ಟಮ್‌ಗಾಗಿ ಸಂಯೋಜಿತ ವೈರಿಂಗ್ ಅಳವಡಿಸಲಾಗಿದೆ.

ಹೀಗಾಗಿ ಮಾರುತಿ ಸುಜುಕಿಯು ಸಿಎನ್ ಜಿ ಮಾದರಿಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 24.90 ಕಿ.ಮೀ ಮೈಲೇಜ್ ನೀಡಿದರೆ ಸಿಎನ್ ಜಿ ಮಾದರಿಯು ಪ್ರತಿ ಕೆಜಿಗೆ ಗರಿಷ್ಠ 32.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಎಸ್-ಸಿಎನ್‌ಜಿಯು ದೇಶದ ಅತಿದೊಡ್ಡ ಕಾರು ಉತ್ಪಾದಕರ ಭಾಗವಾಗಿದ್ದು, ಅದರ ಸಿಎನ್‌ಜಿ ಕೊಡುಗೆಗಳನ್ನು ಹತ್ತು ಮಾಡೆಲ್‌ಗಳಿಗೆ ವಿಸ್ತರಿಸುತ್ತಿದೆ ಏಕೆಂದರೆ ಇದು ಎಲ್ಲಾ ಮುಖ್ಯವಾಹಿನಿಯ ಬ್ರ್ಯಾಂಡ್‌ಗಳಲ್ಲಿ ವಿಶಾಲವಾದ ಪೋರ್ಟ್‌ಫೋಲಿಯೊವನ್ನು ಹೊಂದಿದೆ.

Leave A Reply

Your email address will not be published.