Internet : ಇಂಟರ್ನೆಟ್ ಸಮಸ್ಯೆಗೆ ಸುಲಭ ಪರಿಹಾರ | ಈ ಟಿಪ್ಸ್ ಫಾಲೋ ಮಾಡಿದರೆ ಖಂಡಿತ ಲಾಭದಾಯಕ
ಮೊಬೈಲ್ ಎಂಬ ಸಾಧನದ ಅನ್ವೇಷಣೆಯ ಬಳಿಕ ತಂತ್ರಜ್ಞಾನ ಬೆಳೆದಂತೆ ಎಲ್ಲದರಲ್ಲೂ ಮಾರ್ಪಾಡು ಆಗಿ, ತಂತ್ರಜ್ಞಾನಗಳನ್ನು ಬಳಸಲೂ ಇಂಟರ್ನೆಟ್ ಅತ್ಯಗತ್ಯವಾಗಿದೆ.
ಇಂಟರ್ನೆಟ್ ಪಿಸಿ ಫ್ರೇಮ್ವರ್ಕ್ಗಳನ್ನು ಇಂಟರ್ಫೇಸ್ ಮಾಡುವ ಅಂತರ್ಜಾಲವು ವಿಶ್ವಾದ್ಯಂತ ವ್ಯಾಪಕ ವಲಯವಾಗಿದೆ. ಇದು ಇಂಟರ್ನೆಟ್ನ “ಸ್ಪೈನ್” ಎಂದು ಕರೆಯಲ್ಪಡುವ ಕೆಲವು ಹೆಚ್ಚಿನ ವರ್ಗಾವಣೆ ವೇಗದ ಮಾಹಿತಿ ಸಾಲುಗಳನ್ನು ಹೊಂದಿದೆ.
ಈ ಸಾಲುಗಳು ಗಮನಾರ್ಹವಾದ ಇಂಟರ್ನೆಟ್ ಸೆಂಟರ್ ಪಾಯಿಂಟ್ಗಳೊಂದಿಗೆ ಸಂಬಂಧ ಹೊಂದಿದ್ದು, ಮಾಹಿತಿಯನ್ನು ವಿವಿಧ ಪ್ರದೇಶಗಳಿಗೆ ತಲುಪಿಸುತ್ತದೆ. ಉದಾಹರಣೆಗೆ, ವೆಬ್ ಸರ್ವರ್ಗಳು ಮತ್ತು ISP ಗಳು.
ಸಾಮಾನ್ಯವಾಗಿ ಇಂಟರ್ನೆಟ್ನೊಂದಿಗೆ ಸಂಪರ್ಕ ಹೊಂದಲು ಬಯಸಿದಾಗ ಇಂಟರ್ನೆಟ್ ಸೇವೆ ಒದಗಿಸುವವರಿಗೆ (ಐಎಸ್ಪಿ) ಪ್ರವೇಶ ಹೊಂದಿರಬೇಕಾಗಿದ್ದು, ಅದು ನಿಮ್ಮ ಮತ್ತು ಇಂಟರ್ನೆಟ್ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ಹೆಚ್ಚಿನ ISP ಗಳು ಕೇಬಲ್, DSL, ಅಥವಾ ಫೈಬರ್ ಸಂಪರ್ಕದ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತವೆ.
ಸ್ಮಾರ್ಟ್ ಪೋನ್ ಗಳಲ್ಲಿ 3G ಮತ್ತು 4G ನೆಟ್ವರ್ಕ್ (Network) ಉಪಯೋಗಿಸುವಾಗ ಇಂಟರ್ನೆಟ್ ವೇಗವನ್ನು ಪಡೆಯಲೂ ಸಾಧ್ಯವಾಗಿದೆ. ಇಂಟರ್ನೆಟ್ ಸ್ಪೀಡ್ ಅನ್ನು ಹೆಚ್ಚಿಸಲು ಹಲವಾರು ಅಪ್ಲಿಕೇಶನ್ಗಳಿವೆ. ಮೊಬೈಲ್ ಬಳಕೆಯಲ್ಲಿ ಕೊಂಚ ಬದಲಾವಣೆ ಮಾಡಿ, ಕೆಲ ವಿಧಾನಗಳನ್ನು ಅನುಸರಿಸಿದರೆ ಹೆಚ್ಚಿನ ಇಂಟರ್ನೆಟ್ ಬಳಕೆ ಮಾಡಬಹುದು.
ಇಂಟರ್ನೆಟ್ ಸ್ಪೀಡ್ ಮಾಡುವ ಟಿಪ್ಸ್ಗಳು
ಸ್ಮಾರ್ಟ್ಫೋನ್ ಎಷ್ಟೇ ಸ್ಟೋರೇಜ್ ಹೊಂದಿದ್ದರೂ ಕೂಡ ಆದಷ್ಟು ಸ್ಟೋರೇಜ್ ಉಳಿಸುವಲ್ಲಿ ಪ್ರಯತ್ನಿಸಬೇಕು. ಕೆಲವೊಮ್ಮೆ ಅನಗತ್ಯ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿದ್ದರೆ ಅಂತಹ ಅಪ್ಲಿಕೇಶನ್ಗಳನ್ನು ಡಿಲಿಟ್ ಮಾಡಬೇಕು. ಇದರ ಜೊತೆಗೆ ಸೆಟ್ಟಿಂಗ್ಸ್ ನಲ್ಲಿ ಇನ್ಸ್ಟಾಲ್ಡ್ ಆ್ಯಪ್ ನ ಅಯ್ಕೆ ನೋಡಿಕೊಂಡು ಅನಗತ್ಯ ಗೇಮ್ಸ್, ಇಲ್ಲವೇ ಆ್ಯಪ್ ಅನ್ನು ಅನ್ ಇನ್ಸ್ಟಾಲ್ ಮಾಡಬಹುದು. ಈ ರೀತಿ ಮಾಡುವುದರಿಂದ ಇಂಟರ್ನೆಟ್ ಸ್ಪೀಡ್ ಮಾಡಬಹುದು.
ಹೆಚ್ಚಾಗಿ Androidನಲ್ಲಿ ನೆಟ್ವರ್ಕ್ ಆಯ್ಕೆಯಲ್ಲಿ LTE ಹೆಚ್ಚು ವೇಗವಾಗಿದೆ. ಆದ್ದರಿಂದ ಸ್ಮಾರ್ಟ್ಫೋನ್ಗಳಲ್ಲಿ ನೆಟ್ವರ್ಕ್ ಆಯ್ಕೆ ಮಾಡುವಾಗ LTEಗೆ ಬದಲಾಯಿಸಬೇಕು. ಇದನ್ನು ನಿಮ್ಮ ಸೆಟ್ಟಿಂಗ್ಸ್ ನಲ್ಲಿ ಆಯ್ಕೆ ಮಾಡಬಹುದಾಗಿದೆ. ಇಂಟರ್ನೆಟ್ ಬಳಸುವಾಗ ಈ ಅಂಶವನ್ನು ಗಮನಿಸಬೇಕಾಗುತ್ತದೆ.
ಮೊಬೈಲಿನ Android ನಲ್ಲಿ Cache memory ಪೂರ್ಣವಾದಾಗ ಸ್ಮಾರ್ಟ್ಫೋನ್ ಸರಿಯಾಗಿ ಕೆಲಸ ಮಾಡುವುದಿಲ್ಲ ಹಾಗೂ ಇಂಟರ್ನೆಟ್ ಸ್ಪೀಡ್ ಕೂಡಾ ಕಡಿಮೆಯಾಗುತ್ತದೆ. ಅದಕ್ಕಾಗಿ ಮೊದಲಿಗೆ Cache ಕ್ಲಿಯರ್ ಮಾಡಬೇಕು.
ಈ Cache ಯನ್ನು ಬಳಕೆದಾರರು ಸ್ಮಾರ್ಟ ಫೋನ್ನಲ್ಲಿ ಕ್ಲಿಯರ್ ಮಾಡಬಹುದು ಅಥವಾ Speed booster ಮತ್ತು Optimizer ಎಂಬ ಆಯ್ಕೆಗಳಿದ್ದು, ಇದು ತನ್ನಷ್ಟಕ್ಕೆ ನಿಮ್ಮ Android ಅನ್ನು Optimize ಮಾಡುತ್ತದೆ. ಇದು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ವೇಗವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.
ತಂತ್ರಜ್ಞಾನಗಳು ಬದಲಾದಂತೆ ಎಲ್ಲ ಅಪ್ಲಿಕೇಷನ್ ಗಳು ಜೊತೆಗೆ ವೆಬ್ ಬ್ರೌಸರ್ ಗಳು ಅಪ್ಡೇಟ್ ಆಗುತ್ತಿರುತ್ತವೆ. ಹಾಗಾಗಿ, ಹಳೆಯ ಬ್ರೌಸರ್ ಬಳಸುತ್ತಿದ್ದರೆ ತಕ್ಷಣ ಹೊಸ ಬ್ರೌಸರ್ ಡೌನ್ಲೋಡ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಇಂಟರ್ನೆಟ್ ವೇಗದ ಜೊತೆಗೆ ಮೊಬೈಲ್ ನಲ್ಲಿ ಬೇಕಾದ ವಿಷಯವನ್ನು ಸುಲಭವಾಗಿ ಡೌನ್ಲೋಡ್ ಮಾಡಲು ನೆರವಾಗಲಿದೆ.
ಕೆಲವೊಂದು ಬ್ರೌಸರ್ ಗಳಲ್ಲಿ ಫೋಟೋಗಳು ಇಂಟರ್ನೆಟ್ ವೇಗದಿಂದ ಡೌನ್ಲೋಡ್ ಆಗದೆ ಇದ್ದಾಗ ಬ್ರೌಸರ್ನಲ್ಲಿ ಟೆಕ್ಸ್ಟ್ ಮೋಡ್ ಗೆ ಬದಲಾಯಿಸಬೇಕು. ಆಗ ಬ್ರೌಸರ್ ನಲ್ಲಿ ಇಂಟರ್ನೆಟ್ ಸ್ಪೀಡ್ ಆಗಿ ಬಳಸಬಹುದು.
ಮೇಲೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಿದರೆ ಸ್ಮಾರ್ಟ್ ಪೋನ್ ನಲ್ಲಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ಇದನ್ನು ಸರಿಯಾಗಿ ಬಳಸಿದರೆ ಬೇರೆ ಅಪ್ಲಿಕೇಶನ್ಗಳನ್ನು ಬಳಸುವ ಅಗತ್ಯವಿರುವುದಿಲ್ಲ ಜೊತೆಗೆ ಸ್ಮಾರ್ಟ್ಪೋನ್ನಲ್ಲಿ ಇಂಟರ್ನೆಟ್ ವೇಗವನ್ನು ಪರೀಕ್ಷಿಸುವ ಆಯ್ಕೆಯೂ ಇದ್ದು, ದಿನದಲ್ಲಿ ಎಷ್ಟು GB ಇಂಟರ್ನೆಟ್ ಬಳಕೆಯಾಗಿದೆ ಎಂಬುದು ಕೂಡ ತಿಳಿಯಬಹುದಾಗಿದೆ.