ಲಾಕ್​ಡೌನ್ ಸಮಯದಲ್ಲಿ ಹುಟ್ಟಿದ ಶಿಶುಗಳು ಇತರೆ ಶಿಶುಗಳಿಗಿಂತ ಭಿನ್ನವೇ? ಅಧ್ಯಯನ ಏನು ಹೇಳುತ್ತೆ ಗೊತ್ತೇ?

ಕೊರೋನ ಅಂದರೇನೇ ಲಾಕ್‌ಡೌನ್‌ ನೆನಪಾಗುವುದು ಸಹಜ. ಇನ್ನೂ ಕೆಲವರಿಗಂತೂ ಹೇಗೆ ಸಮಯ ಕಳೆಯೋದು ಅನ್ನೋ ಚಿಂತೆ. ಅಲ್ಲದೆ ಗರ್ಭಿಣಿಯರು ತುಂಬಾ ಸಮಯ ಮೊಬೈಲ್ ಜೊತೆ ಕಳೆದು ಬಿಟ್ಟರು. ಮನೆಯಲ್ಲಿ ಎಲ್ಲರು ಇದ್ದ ಕಾರಣ ಕೈಗೊಂದು ಕಾಲಿಗೊಂದು ಆಳು ಇದ್ದಂತೆ ಗರ್ಭಿಣಿಯರ ವ್ಯಾಯಾಮ ಕಮ್ಮಿಯಾಗಿತ್ತು. ಇದರಿಂದಾಗಿ ಮಗುವಿನ ಚಲನ ವಲನ ಕಡಿಮೆಯಾಗಿರಬಹುದು. ಅಲ್ಲದೆ ಆರೋಗ್ಯ ಇಲಾಖೆಯ ಪ್ರಕಾರ ಕೊರೋನ ಸಮಯದಲ್ಲಿ ನವಜಾತು ಶಿಶುಗಳ ಜನನ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಿದೆ ಎಂದು ವರದಿ ಆಗಿದೆ.

 

ಕೊರೋನಾ ಸೋಂಕು ಹರಡುತ್ತಿದ್ದ ವರ್ಷವನ್ನು ಯಾರು ಕೂಡಾ ಮರೆಯಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತಿದ್ದ ಕಣ್ಣಿಗೆ ಕಾಣದ ಮಹಾಮಾರಿಯಿಂದ ಜನರು ಸೋತು ಹೋಗಿದ್ದರು. ಅದೆಷ್ಟೋ ಮಂದಿಯಲ್ಲಿ ಆರೋಗ್ಯ ಸಮಸ್ಯೆ ಇನ್ನೂ ಕಡಿಮೆಯಾಗಿಲ್ಲ. ಕೆಲವರ ಭಯ ಇನ್ನೂ ಹೋಗಿಲ್ಲ. ಮರಣಗಳಿಗೆ ಬೆಲೆ ಇರದ ಆ ಕಾಲ ಮೈ ಜುಮ್ ಎನ್ನಿಸುತ್ತೆ.

ಪತ್ಯೇಕ ಅಧ್ಯಯನದಿಂದ ಹೊಸತೊಂದು ವಿಚಾರ ತಿಳಿದುಬಂದಿದೆ. ಅದೇನೆಂದರೆ ಲಾಕ್​ಡೌನ್​ನಲ್ಲಿ ಹುಟ್ಟಿರುವ ಶಿಶುಗಳು ಬೇರೆ ಶಿಶುಗಳಿಗಿಂತ ಭಿನ್ನವಾಗಿವೆ ಎಂದು ಹೇಳಲಾಗಿದೆ.

ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ತಟಸ್ಥ ಮಾಡಿತ್ತು. ಸೋಂಕು ಹರಡಿ ಅದೆಷ್ಟೋ ಮಂದಿ ಮೃತಪಟ್ಟರು, ಇನ್ನದೆಷ್ಟೋ ಮಂದಿ ಆಸ್ಪತ್ರೆಗಳಲ್ಲಿ ನರಳಾಡಿದರು. ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಗಿದ್ದರೂ ಜನರಲ್ಲಿ ಆರೋಗ್ಯ ಸಮಸ್ಯೆಯಿನ್ನೂ ಹಾಗೆಯೇ ಇದೆ. ಅದೆಷ್ಟೋ ಮಂದಿ ದೀರ್ಘಾವಧಿಯ ಕೋವಿಡ್ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಈಗಲೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕರ್ಫ್ಯೂ, ಲಾಕ್‌ಡೌನ್‌ನಿಂದ ಜನರು ಮಾನಸಿಕವಾಗಿ ಅನುಭವಿಸಿದ ತೊಂದರೆಗಳು ಒಂದಾ ಎರಡ ಇದೆ. ಒಂಟಿತನದಿಂದ ಅದೆಷ್ಟೋ ಮಂದಿ ಒತ್ತಡ, ಖಿನ್ನತೆ, ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗದೆ ಸಮಸ್ಯೆಯನ್ನು ಎದುರಿಸಿದರು. ಆದರೆ ಇವೆಲ್ಲಾ ಅಲ್ಲದೆಯೂ ಲಾಕ್‌ಡೌನ್‌ನಲ್ಲಿರುವ ಶಿಶುಗಳು ಸಹ ಭಿನ್ನವಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಹಾಗೆಯೇ ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಹುಟ್ಟಿದ ಶಿಶುಗಳು ಇತರೆ ಶಿಶುಗಳಿಗಿಂತ ಭಿನ್ನವಾಗಿದೆ ಎಂದು ಅಧ್ಯಯನ ಹೇಳಿದೆ. ಲಾಕ್‌ಡೌನ್ ಆದ ಕಾರಣ ಯಾರೊಂದಿಗೂ ಬೆರೆಯಲು ಸಾಧ್ಯವಾಗಲ್ಲಿಲ್ಲ. ತಂದೆ-ತಾಯಿ ಜೊತೆಗಾದರೂ ಮಗು ಎಷ್ಟು ಹೊತ್ತು ಮಾತನಾಡಲು ಸಾಧ್ಯ. ಹೀಗಾಗಿ ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಹುಟ್ಟಿದ ಶಿಶುಗಳು ಇತರೆ ಶಿಶುಗಳಿಗಿಂತ ಭಿನ್ನವಾಗಿದೆ ಎಂದು ಅಧ್ಯಯನ ಹೇಳಿದೆ.

ಕೊರೋನಾ ಕಾಲಘಟ್ಟದಲ್ಲಿ ಜನರಿಗೆ ಅತ್ಯಂತ ಹೆಚ್ಚು ಹಿಂಸೆ ನೀಡಿದ ವಿಚಾರವೆಂದರೆ ಲಾಕ್‌ಡೌನ್‌. ಯಾವಾಗಲೂ ಮಾಲ್‌, ಶಾಪಿಂಗ್‌, ಹೊಟೇಲ್‌, ರೆಸ್ಟೋರೆಂಟ್, ಪಾರ್ಟಿ, ಪಬ್‌, ಮೋಜು ಮಸ್ತಿ ಎಂದು ತಿರುಗಾಡುತ್ತಿದ್ದ ಮಂದಿ ಲಾಕ್‌ಡೌನ್‌ನಿಂದ ಸಂಪೂರ್ಣವಾಗಿ ಮೌನವಾದರು . ಲಾಕ್‌ಡೌನ್‌ ಗೊಂದಲದಿಂದ ಯಾವುದೇ ಮನೋರಂಜನೆಯಿಲ್ಲದೆ ಜನರು ಸಾಮಾಜಿಕವಾಗಿ ಬೆರೆಯಲಾಗದೆ ಒದ್ದಾಡುವಂತಾಯಿತು. ಈ ಸಂದರ್ಭದಲ್ಲಿ ಎಲ್ಲರೂ ಖಿನ್ನತೆ,ಮಾನಸಿಕ ದುರ್ಬಲತೆ ಮೊದಲಾದ ಸಮಸ್ಯೆಗಳನ್ನು ಎದುರಿಸಿದರು.

ವರದಿ ಪ್ರಕಾರ ಕೊರೋನಾ ಸಮಯದಲ್ಲಿ ಹುಟ್ಟಿದ ಮಕ್ಕಳಲ್ಲಿ ಸಂವಹನವು ತೀರಾ ಕಳಪೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ಮನೆಗೊಂದು ಶಿಶು ಬಂದಿದೆ.

ಮಕ್ಕಳ ಬೆಳವಣಿಗೆ ಬಗ್ಗೆ ಹೇಳುವುದಾದರೆ ಮಗು ವರ್ಷ ಕಳೆದರೂ ಪೋಷಕರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಿಲ್ಲ. ಮಾತನಾಡುವುದು ಕೂಡ ತಡವಾಗಿದೆ ಎಂದು ಸಂಶೋಧನೆ ಹೇಳಿದೆ. ಮಾರ್ಚ್ ಮತ್ತು ಮೇ 2020 ರ ನಡುವೆ ಮೂರು ತಿಂಗಳ ಅವಧಿಯಲ್ಲಿ ಜನಿಸಿದ 309 ಮಕ್ಕಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.

ಕೊರೋನಾ ಸಮಯದಲ್ಲಿ ಹುಟ್ಟಿದ ಮಕ್ಕಳಲ್ಲಿ ಚಟುವಟಿಕೆ ಭಿನ್ನವಾಗಿದೆ . ಹೆಜ್ಜೆ ಹಾಕುವುದು, ತಾವೇ ಎದ್ದು ನಿಲ್ಲುವುದು, ವಸ್ತುಗಳನ್ನು ಹಿಡಿದುಕೊಳ್ಳುವುದು, ಆಹಾರ ಸೇವನೆ, ತಮ್ಮದೇ ಹೆಸರನ್ನು ತಿಳಿದುಕೊಳ್ಳುವುದು, ವಸ್ತುಗಳನ್ನು ಗುರುತಿಸುವುದು ಎಲ್ಲವನ್ನೂ ಮಕ್ಕಳು ತುಂಬಾ ತಡವಾಗಿ ಕಲಿತುಕೊಂಡಿದ್ದಾರೆ.

2020 ರಲ್ಲಿ ಕೊರೋನ ಸಮಯದಲ್ಲಿ ಬ್ರಿಟನ್‌ನಲ್ಲಿ ಸುಮಾರು 600,000 ಶಿಶುಗಳು ಮತ್ತು ಐರ್ಲೆಂಡ್‌ನಲ್ಲಿ ಇನ್ನೂ 60,000 ಶಿಶುಗಳು ಜನಿಸಿದವು. ಕೋವಿಡ್ ನಿರ್ಬಂಧಗಳು ಮತ್ತು ಮುಖವಾಡಗಳನ್ನು ಧರಿಸುವುದರಿಂದ ಅಂಬೆಗಾಲಿಡುವ ಸಮಯಗಳು, ಪ್ರಸವಪೂರ್ವ ಗುಂಪು ವಿಹಾರಗಳು ಮತ್ತು ಅಜ್ಜಿಯರೊಂದಿಗೆ ಮುದ್ದಾಡುವುದು ಸೇರಿದಂತೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಿಲ್ಲಿಸಿದಾಗ. ಅಂದಿನಿಂದ, ಶಿಶುಗಳ ಸಾಮಾಜಿಕ ಬೆಳವಣಿಗೆಯ ಮೇಲೆ ಅಂತಹ ಬಲವಂತದ ಪ್ರತ್ಯೇಕತೆಯ ಪರಿಣಾಮವನ್ನು ಪೋಷಕರು ಮತ್ತು ಮನಶ್ಶಾಸ್ತ್ರಜ್ಞರು ಕಂಡು ಹಿಡಿದಿದ್ದಾರೆ.

ಮಾಸ್ಕ್​ ಧರಿಸುವುದು, ಮಕ್ಕಳಿಂದ ಅಂತರ ಕಾಯ್ದುಕೊಳ್ಳುವುದು ಮಕ್ಕಳ ಮಾನಸಿಕತೆ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳು ಜನರನ್ನು ಬಹುಬೇಗ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಲಾಕ್​ಡೌನ್​ ಸಮಯದಲ್ಲಿ ಜನಿಸಿರುವ ಶಿಶುಗಳು ತುಂಬಾ ಜನರು ಸೇರಿರುವ ಶುಭ ಕಾರ್ಯಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಗುಂಪನ್ನು ನೋಡಿದಾಗ ದಂಗಾಗಿ ಬೀಳುತ್ತಾರೆ.

ಒಟ್ಟಿನಲ್ಲಿ ಕೊರೋನ ಸಮಯದಲ್ಲಿನ ಮೇಲಿನ ಈ ಎಲ್ಲಾ ಬದಲಾವಣೆಗಳಿಂದ ಮಕ್ಕಳ ಚುರುಕುತನ ನಿಧಾನವಾಗಿ ಬಿಟ್ಟಿದೆ.

­

Leave A Reply

Your email address will not be published.