Red Banana Health Tip : ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ಗೊತ್ತೇ?
ಬಾಳೆಹಣ್ಣಿನಲ್ಲಿ ಹಲವಾರು ವಿಧಗಳಿವೆ. ಆದರೆ ನಾವು ಸರಿಯಾಗಿ ಬಳಸಿ ಕೊಳ್ಳುವಲ್ಲಿ ಹಿಂಜರಿಯುತ್ತೇವೆ. ಕೆಂಪು ಬಾಳೆಹಣ್ಣು ಹೆಚ್ಚು ಪ್ರಸಿದ್ಧಿ ಹೊಂದಿಲ್ಲ. ಆದರೆ ಇತರೆ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ಊಟದ ಕೊನೆಯಲ್ಲಿ ಒಂದು ಬಾಳೆಹಣ್ಣು ತಿಂದರೆ ತೃಪ್ತಿಯಾಗುತ್ತೆ. ದೇಹ ಹಗರುವಾಗುವ ಜೊತೆಗೆ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಬಾಳೆಹಣ್ಣು ಖನಿಜಾಂಶ, ವಿಟಮಿನ್, ಫೈಬರ್ ಅಂಶಗಳನ್ನು ಹೊಂದಿದೆ. ಅದಲ್ಲದೆ ವಿಶ್ವದಾದ್ಯಂತ 15 ರಿಂದ 16 ತರಹದ ಬಾಳೆಹಣ್ಣುಗಳು ಇವೆ. ಈ ಪೈಕಿ ಕೆಂಪು ಬಾಳೆಹಣ್ಣು ಕೂಡಾ ಒಂದು. ಆದರೆ ಇದರಿಂದ ಆಗುವ ಉಪಯೋಗ ಮಾತ್ರ ಅನೇಕ. ಪಚನ ಶಕ್ತಿಗೆ ಕೆಂಪು ಬಾಳೆಹಣ್ಣಿಗಿಂತ ಬೇರೆ ಮದ್ದು ಸಾಟಿಯಿಲ್ಲ.
ವಿಟಮಿನ್ ಸಿ ಮತ್ತು ಫೈಬರ್ ಅಂಶ ಅರೋಗ್ಯ ಸುಧಾರಿಸುತ್ತೆ :
ಕೆಂಪು ಬಾಳೆಹಣ್ಣಿನಲ್ಲಿ ನಾರಿನ ಅಂಶ, ವಿಟಮಿನ್ ಸಿ ಅಂಶ ಹೇರಳವಾಗಿದೆ. ವಿಟಮಿನ್ ಸಿ ಕೊರತೆ ಇರುವವರು ಈ ಬಾಳೆಹಣ್ಣು ಸೇವಿಸಿದಾಗ ಹೆಚ್ಚಿನ ಆರೋಗ್ಯ ಸುಧಾರಿಕೆ ಗೊಳ್ಳಲು ಸಾಧ್ಯವಿದೆ.
ಮಲಬದ್ಧತೆ ನಿವಾರಣೆ ಮಾಡುತ್ತೆ :
ಹಿರಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚಾಗಿ ಮಲಬದ್ಧತೆ ತೊಂದರೆ ಇರುತ್ತದೆ. ಇವರು ಈ ಬಾಳೆಹಣ್ಣು ಸೇವಿಸುವುದು ಉತ್ತಮ. ಮಾಂಸಾಹಾರ ಸೇವಿಸಿದ ನಂತರ ಈ ಬಾಳೆಹಣ್ಣು ತಿಂದರೆ ಹೊಟ್ಟೆ ರಿಲೀಫ್ ಆಗುತ್ತೆ.
ಹಾರ್ಮೋನ್ ಗಳ ಉತ್ಪತ್ತಿ ಆಗುತ್ತದೆ :
ಹೆಣ್ಣು ಮಕ್ಕಳ ಬೆಳವಣಿಗೆ ಬೇಗ ಆಗುವಲ್ಲಿ ಅಂದರೆ ಹೆಣ್ಣು ಮಕ್ಕಳಲ್ಲಿ ಪ್ರೌಢವಸ್ಥೆಯ ಹಾರ್ಮೋನ್ ಬೆಳವಣಿಗೆ ಹೆಚ್ಚಿಸುವ ಕೆಲಸ ಮಾಡುತ್ತದೆ.
ಹೆಚ್ಚಿನ ಬೊಜ್ಜು ಕರಗಿಸುತ್ತೆ:
ತೂಕ ಕಡಿಮೆ ಮಾಡಲು ಸಿಕ್ಕ ಸಿಕ್ಕ ಮದ್ದು ಮಾಡುವ ಬದಲು ಈ ಬಾಳೆಹಣ್ಣು ತಿಂದು ನೋಡಿ ಯಾಕೆಂದರೆ ಹೆಚ್ಚಿನ ಬೊಜ್ಜು ತುಂಬಿದವರಿಗೆ ತೂಕ ಕಡಿಮೆ ಮಾಡಲು ಸಹಾಯಕ ಆಗಿದೆ.ಇದರಲ್ಲಿ ಇರುವ ನಾರಿನಂಶ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ.
ರಕ್ತ ಹೀನತೆಯನ್ನು ಕಡಿಮೆ ಮಾಡುತ್ತೆ :
ಅನಿಮಿಯಾ ಅಥವಾ ರಕ್ತ ಹೀನತೆ ದೂರ ಮಾಡಲು ರಕ್ತ ಕಣಗಳು, ಹಿಮೋಗ್ಲೋಬಿನ್ ಕಡಿಮೆ ಇದ್ದವರಿಗೆ ಕೆಂಪು ಬಾಳೆಹಣ್ಣು ರಾಮಬಾಣ ಆಗಿದೆ.
ಎದೆ ಉರಿತ ನಿವಾರಣೆ :
ಜೊತೆಗೆ ಎದೆಯುರಿ ಮುಂತಾದ ಸಮಸ್ಯೆಗಳಿದ್ದವರು ಕೆಂಪು ಬಾಳೆಹಣ್ಣಿನ ಸೇವನೆ ಮಾಡುವುದು ಉತ್ತಮ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮುಖದ ಖಾಂತಿ ಹೆಚ್ಚಿಸುತ್ತದೆ:
ಕೆಂಪು ಬಾಳೆಹಣ್ಣಿನಿಂದ ಮುಖದ ಕಾಂತಿಯನ್ನೂ ಹೆಚ್ಚಿಸಬಹುದು. ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಮೂರ್ನಾಲ್ಕು ಜೇನುತುಪ್ಪ ಹನಿಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಮೂಲಕ ಮುಖದ ಕಾಂತಿ ಹೆಚ್ಚಾಗುತ್ತದೆ.
ಕೂದಲು ಉದುರುವಿಕೆಯ ನಿಯಂತ್ರಣ :
ಕೂದಲು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಗೆ ಕಿವುಚಿದ ಕೆಂಪು ಬಾಳೆಹಣ್ಣು ಮಿಶ್ರಣ ಮಾಡಿ. ನಂತರ ತಲೆ ಬುಡಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ.
ಹೀಗೆ ಕೆಂಪು ಬಾಳೆಹಣ್ಣಿನ ಸೇವನೆ ನಮ್ಮ ಹಲವಾರು ಆರೋಗ್ಯ ಸುಧಾರಣೆಗೆ ಮನೆಮದ್ದು ಆಗಿದೆ.