ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸಿ, ಬಲವಂತವಾಗಿ ಎಳೆದೊಯ್ದ ರಿಕ್ಷಾಚಾಲಕ | ಆಘಾತಕಾರಿ ದೃಶ್ಯದ ವೀಡಿಯೋ ಸೆರೆ

ಆಟೋ ಚಾಲಕರ ಗೌರವಕ್ಕೆ ಕುಂದು ಬರುವಂತೆ ಇಲ್ಲೊಂದು ಘಟನೆ ನಡೆದಿದೆ. ಇದು ಒಂದು ಭೀಕರ ಘಟನೆ ಆಗಿದ್ದು ಸಮಾಜದಲ್ಲಿ ಇಂತಹ ಹೀನಾಯ ಕೃತ್ಯಗಳು ಹೆಚ್ಚಾಗುತ್ತಲೇ ಇವೆ. ತಪ್ಪು ಇದ್ದಲ್ಲಿ ಪ್ರಶ್ನೆ ಮಾಡಲು ಹೋದರೆ ಕಿಡಿಗೇಡಿಗಳು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಮಹಾರಾಷ್ಟ್ರದ ಥಾಣೆ ನಗರದಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಒಬ್ಬಳಿಗೆ ಆಟೊ ಚಾಲಕನೊಬ್ಬ ಕಿರುಕುಳ ನೀಡಿದ್ದು, ರಸ್ತೆಯಲ್ಲಿ ಎಳೆದೊಯ್ದಿರುವ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ 6.45ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

 

ಪೋಲೀಸರ ಮಾಹಿತಿಯ ಪ್ರಕಾರ ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಆಟೊ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಮಾತಲ್ಲೇ ಸುಮ್ಮನಾಗದ ಚಾಲಕ ವಿದ್ಯಾರ್ಥಿನಿಯ ಕೈ ಹಿಡಿದು ಎಳೆದಾಡಿದ್ದಾನೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿಯನ್ನು ನಿಂದಿಸಿ ಎಸ್ಕೇಪ್​ ಆಗಲು ಮುಂದಾದ ಚಾಲಕನನ್ನ ವಿದ್ಯಾರ್ಥಿನಿ ತಡೆದಿದ್ದಾಳೆ. ಈ ವೇಳೆ ಆಕೆಯನ್ನೇ ಆಟೊದೊಂದಿಗೆ ಸುಮಾರು 500 ಮೀಟರ್ ಚಾಲಕ ಎಳೆದೊಯ್ದಿದ್ದಾನೆ. ಆಕೆ ನೆಲಕ್ಕೆ ಬಿದ್ದ ಬಳಿಕ ಚಾಲಕ ಪರಾರಿಯಾಗಿರುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ.

ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಆಟೋ ಚಾಲಕನಿಗೆ ಶಾಪ ಹಾಕುತ್ತಿದ್ದಾರೆ. ಆಟೋ ಚಾಲಕನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.