Viral video : ಪ್ರೇಯಸಿ ಜೊತೆ ಗಂಡನ ಶಾಪಿಂಗ್ | ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ!!!

ಲವ್ ಮಿ…. ಆರ್  ಹೇಟ್ ಮೀ….. ಕಿಸ್ ಮೀ… ಆರ್ ಕಿಲ್ ಮೀ…. ಹೇ ಡಾರ್ಲಿಂಗ್… ಡೂ… ಸಂಥಿಂಗ್ ಫಾರ್ ಮೀ….. ಎಂಬ ಜನಪ್ರಿಯ ಹಾಡನ್ನು ಎಲ್ಲರೂ ಕೇಳಿರುತ್ತೀರಾ!!!..  ಈ ಹಾಡಿನ ಪ್ರಸ್ತಾಪ ಏಕೆ ಮಾಡಿದ್ದೇವೆ ಎಂದು ನೀವು ಯೋಚಿಸುತ್ತಿರಬಹುದು..


ಇಲ್ಲೊಬ್ಬ ಕಾದಲ್ ಪ್ರೇಮಿ .. ಲವ್ ಮೀ…ಎಂದು ಗರ್ಲ್ ಫ್ರೆಂಡ್ ನೊಟ್ಟಿಗೆ ಶಾಪಿಂಗ್ ಮಾಡುತ್ತಾ  ಅಡ್ಡಾಡುತ್ತಿದ್ದಾಗ  ರೆಡ್ ಹ್ಯಾಂಡ್ ಆಗಿ ಪತ್ನಿಯ ಕೈಯಲ್ಲಿ ಸಿಕ್ಕಿ ಬಿದ್ದಿರುವ ಪತಿರಾಯನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗಾಜಿಯಾಬಾದ್ ಮಾರುಕಟ್ಟೆಯಲ್ಲಿ ನಡೆದಿದೆ.


ಪತಿಯೊಂದಿಗೆ ಜಗಳವಾದ ನಂತರ ಮಹಿಳೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಕರ್ವಾ ಚೌತ್ ಹಿಂದೂ ಹಬ್ಬವಾಗಿದ್ದು, ಈ ಹಬ್ಬವನ್ನು ದೇಶದಲ್ಲಿ ಹೆಚ್ಚಾಗಿ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಆಚರಿಸಲಾಗುತ್ತದೆ.

ಈ ಹಬ್ಬದ ದಿನ ವಿವಾಹಿತ ಮಹಿಳೆಯರು ಉಪವಾಸ ಮಾಡಿ ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವ ಪದ್ದತಿಯಿದೆ. ಹಾಗಾಗಿ,ಕರ್ವಾ ಚೌತನ ಸಲುವಾಗಿ ಶಾಪಿಂಗ್ ಮಾಡಲು ತನ್ನ ತಾಯಿಯೊಂದಿಗೆ ಬಂದಿದ್ದ ಮಹಿಳೆ ತನ್ನ ಪತಿ ಮತ್ತೊಬ್ಬಳೊಂದಿಗೆ ಓಡಾಡುತ್ತಿರುವುದನ್ನು ನೋಡಿದ್ದು, ಈ ಸಂಬಂಧ ಮಹಿಳೆ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ.

ಮಹಿಳೆ ತನ್ನ ಕೆಲವು ಸ್ನೇಹಿತೆಯರ ಜೊತೆ ಸೇರಿ ಗಂಡನ ಕಾಲರ್ ಹಿಡಿದು ಸಾರ್ವಜನಿಕವಾಗಿ ಥಳಿಸಿದ್ದು, ಈ ವೇಳೆ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸಿದ ಗರ್ಲ್ ಫ್ರೆಂಡ್ ಮೇಲೂ ಮಹಿಳೆ ಹಲ್ಲೆ ನಡೆಸಿದ್ದಾಳೆ.

ಸದ್ಯ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವೇಳೆ ಅಂಗಡಿಯ ಮಾಲೀಕರೊಬ್ಬರು ಈ ವಿಚಾರವನ್ನು ಹೊರಗಡೆ ಇಟ್ಟುಕೊಳ್ಳಿ, ಹೊರಗೆ ಹೋಗಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.

ಮಹಿಳೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.