ನಮ್ ಮಕ್ಳು ಹಿಜಾಬ್ ಹಾಕ್ತಾರೆ ನೀವು ಬಿಕಿನಿ ಹಾಕ್ಕೊಳ್ಳಿ : ಬಿಜೆಪಿ ವಿರುದ್ಧ ಓವೈಸಿ ವಾಗ್ದಾಳಿ!
ಹಿಜಾಬ್ ನಿಷೇಧದ ಕುರಿತು ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ಓವೈಸಿ ಮುಖ್ಯಸ್ಥ ಅಸಾಸುದ್ದೀನ್ ಅವರು ಈ ಕುರಿತು ವಾಗ್ದಾಳಿ ನಡೆಸಿದ್ದಾರೆ. ”ಮುಸ್ಲಿಂ ಹುಡುಗಿಯರ ಹಿಜಾಬ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ವಿಭಜಿತ ತೀರ್ಪಿಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
”ಮುಸ್ಲಿಂ ಮಹಿಳೆಯರು ತಮ್ಮ ತಲೆಯನ್ನು ಮುಚ್ಚಲು ಬಯಸಿದರೆ, ಅವರು ತಮ್ಮ ಬುದ್ಧಿಯನ್ನು ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಅರ್ಥವಲ್ಲ’ ಎಂದು ಹೇಳಿದ್ದಾರೆ. ಹಿಜಾಬ್ ಮುಸ್ಲಿಮರು ಹಿಂದುಳಿದಿರುವುದನ್ನು ತೋರಿಸುತ್ತದೆಯೇ ? ಮುಸ್ಲಿಂ ಮಹಿಳೆಯರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲವೇ ಎಂದು ಪ್ರಶ್ನಿಸಿದರು.
“ಮುಸ್ಲಿಮರು ಚಿಕ್ಕ ಮಕ್ಕಳಿಗೆ ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ನಾವು ನಿಜವಾಗಿಯೂ ನಮ್ಮ ಹುಡುಗಿಯರನ್ನು ಒತ್ತಾಯಿಸುತ್ತಿದ್ದೇವೆಯೇ? ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಬಿಡಿ, ನೀವು ಬಯಸಿದರೆ ನಿಮ್ಮ ಬಿಕಿನಿಯನ್ನು ಧರಿಸಿ…” ಎಂದು ಎಐಎಂಐಎಂ ನಾಯಕ ಹೇಳಿದ್ದಾರೆ.