ಗನ್ ಪ್ರೊಟೆಕ್ಷನ್ ನಲ್ಲಿ ಹರೀಶ್ ಪೂಂಜಾ | ತಲ್ವಾರ್ ದಾಳಿ ಹಿನ್ನೆಲೆ ಸರಕಾರದ ವತಿಯಿಂದ ಬಿಗಿ ಭದ್ರತೆ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿದ ಘಟನೆ ನಿನ್ನೆ ತಡರಾತ್ರಿ ಫರಂಗಿಪೇಟೆ ಬಳಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ‘ಗೃಹ ಸಚಿವರು ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಹರೀಶ್ ಪೂಂಜಾ ಪ್ರತಿಕ್ರಿಯಿಸಿದ್ದರು.

 

ಅದರಂತೆಯೇ ಶಾಸಕ ಹರೀಶ್ ಪೂಂಜಾಗೆ ಸರಕಾರದ ವತಿಯಿಂದ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.

‘ಬೆಂಗಳೂರಿನಿಂದ ರಾತ್ರಿ ಮಂಗಳೂರಿಗೆ ಆಗಮಿಸಿ ಬೆಳ್ತಂಗಡಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ಸ್ಕಾರ್ಪಿಯೊ ವಾಹನ ಓವರ್ ಟೇಕ್ ಮಾಡಿ ನಾನು ಇದ್ದ ಕಾರಿಗೆ ಎರಡು ಬಾರಿ ತಲ್ವಾರ್ ದಾಳಿ ಮಾಡಲಾಗಿದೆ. ಗೃಹ ಸಚಿವರು ಬೆಳಗ್ಗೆ 2 ಬಾರಿ ಕರೆ ಮಾಡಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ, ನನಗೆ ಅಂಗರಕ್ಷಕರನ್ನು ನೀಡಲು ಸೂಚನೆ ನೀಡಿದ್ದಾರೆ ಎಂದು ಅವರು ಮಂಗಳೂರಿನಲ್ಲಿ ಹೇಳಿದ್ದರು.

Leave A Reply

Your email address will not be published.