BSNL ; ಬಿಎಸ್ ಎನ್ ಎಲ್ ಪರಿಚಯ ಮಾಡಿಸಿದೆ ಎರಡು ಹೊಸ ಬಂಪರ್ ಪ್ಲ್ಯಾನ್ | ಬೇಸ್ತುಬಿದ್ದ ಜಿಯೋ – ಏರ್ಟೆಲ್

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ 4G ಸೇವೆಯಿಂದ 5G ಸೇವೆ ನೀಡಲು ಅಣಿಯಾಗುತ್ತಿದ್ದು, ಹೊಸ ರೀಚಾರ್ಜ್ ಪ್ಲಾನ್ ತಂದಿದ್ದು ಕೂಡಾ ತಿಳಿದಿರುವ ಸಂಗತಿಯಾಗಿದೆ. ಈ ನಡುವೆ ಬಿಎಸ್​ಎನ್​ಎಲ್ ಕೂಡ ತನ್ನ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದೆ.

 

ಬಿಎಸ್​ಎನ್​ಎಲ್​ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ್ದು, ಅನಿಯಮಿತ ಕರೆಗಳ ಉಪಯೋಗ ಬಯಸುವವರಿಗೆ ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ.


ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳಾದ ರಿಲಯನ್ಸ್ ಜಿಯೋ (Reliance Jio), ಏರ್ಟೆಲ್ (Airtel) ಹಾಗೂ ವೋಡಾಫೋನ್ ಐಡಿಯಾ (Vodafone Idea) ಇತ್ತೀಚೆಗೆ ಜಿದ್ದಿಗೆ ಬಿದ್ದಂತೆ ಯೋಜನೆಗಳನ್ನು ದುಬಾರಿಗೊಳಿಸಿರುವುದಲ್ಲದೆ,ಜೊತೆಗೆ 5ಜಿ ಸೇವೆಯನ್ನು ಕೂಡ ಪರಿಚಯಿಸುತ್ತಿರುವುದರಿಂದ ಬಿಎಸ್​ಎನ್​ಎಲ್ ಸದ್ದಿಲ್ಲದೆ ಎರಡು ಹೊಸ ಧಮಾಕ ಯೋಜನೆಗಳನ್ನು ಅನಾವರಣ ಮಾಡಿದೆ.


ಕೆಲವು ವರ್ಷಗಳ ಹಿಂದೆ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿ ನಂಬರ್ ಒನ್ ಸ್ಥಾನದಲ್ಲಿದ್ದ ಸರ್ಕಾರಿ ಒಡೆತನದ ಭಾರತೀಯ ಸಂಚಾರ್‌ ನಿಗಮ ಲಿಮಿಟೆಡ್ ಬಿಎಸ್​ಎನ್​ಎಲ್ (BSNL)​ ಇದೀಗ ಪಾತಾಳಕ್ಕೆ ಕುಸಿದ ಬಳಿಕ ಮೇಲೇಳಲು ಹರಸಾಹಸ ಪಡುತ್ತಿದೆ.


ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್​ಎನ್​ಎಲ್ ದೊಡ್ದ ಮಟ್ಟದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದರೂ ಕೂಡ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಯಾಕೇಜ್ ನೀಡಲು ಮುಂದಾಗಿದೆ.

ಬಿಎಸ್​ಎನ್​ಎಲ್​ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ್ದು, ಅನಿಯಮಿತ ಕರೆ, ಇಂಟರ್ನೆಟ್ ಬಳಕೆ ಮಾಡುವವರಿಗೆ ಈ ಯೋಜನೆ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ.


269 ರೂ. ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಪ್ರಯೋಜನದ ಜೊತೆಗೆ ಅನಿಯಮಿತ ಕರೆ ಸೌಲಭ್ಯವಿದ್ದು, ಪ್ರತಿದಿನ 100 ಎಸ್​ಎಮ್​ಎಸ್ ಉಚಿತ ಪಡೆಯಬಹುದಾಗಿದೆ. ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


ಬಿಎಸ್​ಎನ್​ಎಲ್ ಫ್ರೀ ಟ್ಯೂನ್ ಲಭ್ಯವಿದ್ದು ಇದರ ಮೂಲಕ ಗ್ರಾಹಕರು ಬೇಕಾದ ಹಾಡುಗಳನ್ನು ಉಚಿತವಾಗಿ ಪಡೆಯುವ ಜೊತೆಗೆ ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡುವ ಅವಕಾಶ ಕೂಡ ಕಲ್ಪಿಸಲಾಗಿದೆ. ಇದರ ಜೊತೆಗೆ ಎರಾಸ್ ನೌ, ಚಾಲೆಂಜೆಸ್ ಡರೇನಾ ಗೇಮ್ಸ್ ಸೇರಿದಂತೆ ಅನೇಕ ಸೌಲಭ್ಯವನ್ನು ಪಡೆಯಬಹುದು.


ಬಿಎಸ್​ಎನ್​ಎಲ್​ನ 485 ರೂ. ಗಳ ಯೋಜನೆ ಕೂಡ ಹೆಚ್ಚಿನವರು ಉಪಯೋಗಿಸುತ್ತಿದ್ದು, ಇದು 90 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ರಿಚಾರ್ಜ್​ ಪ್ಲಾನ್​ ಮೂಲಕ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 1.5GB ಉಚಿತ ಡೇಟಾ ಹಾಗೂ 100 SMS ಸಿಗಲಿದೆ.

ಅಂತೆಯೆ 249 ರೂ. ಪ್ಲಾನ್​28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇದರಲ್ಲಿ ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 ಎಸ್​ಎಮ್​ಎಸ್ ಉಚಿತವಿದೆ.

769 ರೂ. ಪ್ರಿಪೇಯ್ಡ್ ಯೋಜನೆಯಲ್ಲಿಯು ಕೂಡ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ , 100 ಎಸ್​ಎಮ್​ಎಸ್ ಸೌಲಭ್ಯ ಕಲ್ಪಿಸಲಾಗಿದೆ. 269 ರೂ. ಪ್ಲಾನ್​ನಲ್ಲಿರುವ ಎಲ್ಲ ಪ್ರಯೋಜನ ಇದರಲ್ಲಿದ್ದು, ವ್ಯಾಲಿಡಿಯಲ್ಲಿ ವ್ಯತ್ಯಾಸವಿದ್ದು ಇದು 90 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಎರಡು ಹೊಸ ಪ್ಲಾನ್ ಈಗಾಗಲೇ ಲೈವ್ ಆಗಿದ್ದು ಆಸಕ್ತ ಬಿಎಸ್​ಎನ್​ಎಲ್ ಬಳಕೆದಾರರು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಬಿಎಸ್‌ಎನ್‌ಎಲ್‌ ಟೆಲಿಕಾಂನ ದೀರ್ಘಾವಧಿ ಪ್ಲಾನ್‌ಗಳನ್ನು ಪರಿಗಣಿಸುವುದಾದರೆ 1499 ರೂ. ಬೆಲೆಯ ವಾರ್ಷಿಕ ಪ್ಲಾನ್‌ ಗಮನ ಸೆಳೆದಿದ್ದು, ಈ ಪ್ರಿಪೇಯ್ಡ್‌ ಪ್ಲಾನ್‌ 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನ ನೀಡಲಿದೆ.

ಇದಲ್ಲದೆ ಬಿಎಸ್‌ಎನ್‌ಎಲ್‌ 1999ರೂ. ಬೆಲೆಯ ವಾರ್ಷಿಕ ಪ್ಲಾನ್‌ ಹೊಂದಿದೆ. ಈ ಪ್ಲಾನ್‌ನಲ್ಲಿ 100GB ಹೆಚ್ಚುವರಿ ಡೇಟಾದೊಂದಿಗೆ 500GB ನಿಯಮಿತ ಡೇಟಾವನ್ನು ನೀಡುತ್ತದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಇದು 365 ದಿನಗಳವರೆಗೆ Eros Now ಮನರಂಜನಾ ಸೇವೆಗಳನ್ನೂ ಪಡೆಯಬಹುದಾಗಿದೆ.

ಗ್ರಾಹಕರಿಗೆ ನೆರವಾಗುವ ಉದ್ದೇಶದಿಂದ ಬಿಎಸ್‌ಎನ್‌ಎಲ್‌ ಕೂಡ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು, ಜನರಿಗೆ ದಿನಕ್ಕೆ 100 ಎಸ್ .ಎಂ.ಎಸ್ ಮಾಡುವ ಅನಿಯಮಿತ ಕರೆ ಜೊತೆಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗಿದೆ.

Leave A Reply

Your email address will not be published.