Ashwagandha Benefits : ಅಶ್ವಗಂಧ ಸೇವನೆಯಿಂದ ಏನು ಉಪಯೋಗ?
ಆಯುರ್ವೇದದಲ್ಲಿ ಕೆಲವೊಂದು ಗಿಡಮೂಲಿಕೆಗಳು ನಮ್ಮಲ್ಲಿರುವ ಎಷ್ಟೋ ವಾಸಿಯಾಗದ ಖಾಯಿಲೆಗಳಿಗೆ ರಾಮಭಾನ ಇದ್ದಂತೆ. ಅಂದರೆ ಸೂಕ್ತ ಔಷದಿ ಇದ್ದಂತೆ ಆದರೆ ನಾವು ಅದನ್ನು ತಿಳಿದುಕೊಂಡು ಇರುವುದಿಲ್ಲ ಅಷ್ಟೇ. ಅದೇ ರೀತಿ ಆಯುರ್ವೇದದ ಪ್ರಮುಖ ಗಿಡಮೂಲಿಕೆಯಾದ ಅಶ್ವಗಂಧವನ್ನು ಪರಿಚಯಿಸಿಕೊಳ್ಳಲೇ ಬೇಕು.
ಅಶ್ವಗಂಧ ಎಂಬ ಹೆಸರು ಸಂಸ್ಕೃತ ಪದದಿಂದ ಬಂದಿದೆ. ಆಯುರ್ವೇದದಲ್ಲಿ ಅಶ್ವಗಂಧಕ್ಕೆ ಅದರದ್ದೇ ಪ್ರಾಮುಖ್ಯತೆಯಿದೆ. ಅಶ್ವಗಂಧವನ್ನು ಹಳದಿ ಹೂವುಗಳನ್ನು ಹೊಂದಿರುವ ಸಣ್ಣ ಸಸ್ಯದಿಂದ ಪಡೆಯಲಾಗುತ್ತದೆ. ಇದು ಅನೇಕ ಆರೋಗ್ಯ (Health) ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ಅಶ್ವಗಂಧ (Ashwagandha) ವನ್ನು ಪ್ರಮುಖ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ.
ಈ ಸಸ್ಯವು ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಸಸ್ಯದ ಬೇರು, ಎಲೆಗಳ ಸಾರ ಮತ್ತು ಪುಡಿಯನ್ನು ಬಳಸಲಾಗುತ್ತದೆ. ಅಶ್ವಗಂಧವನ್ನು ಪುಡಿ ರೂಪದಲ್ಲಿ ಅಥವಾ ಮಾತ್ರೆ ರೂಪದಲ್ಲಿ ತೆಗೆದುಕೊಳ್ಳಬಹುದು. ಅಲ್ಲದೆ ಇದನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳು ವುದು ಉತ್ತಮ. ಏಕೆಂದರೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದು ವ್ಯಕ್ತಿಯ ದೇಹವನ್ನು ಅವಲಂಬಿಸಿರುತ್ತದೆ.
ಅಶ್ವಗಂಧದ ಉಪಯೋಗಗಳು:
ಇದರ ಪ್ರಯೋಜನಗಳು ಹಲವಾರು ಸರಿಯಾಗಿ ಬಳಸಿಕೊಳ್ಳುವುದು ನಮ್ಮ ಜಾಣ್ಮೆಯಲ್ಲಿದೆ. ಎಷ್ಟೋ ರೀತಿಯ ಮನೆಮದ್ದುಗಳಾಗಿ ಈ ಅಶ್ವಗಂಧವನ್ನು ಬಳಸುವರು. ಉದಾಹರಣೆಗೆ
ಒತ್ತಡವನ್ನು ಕಡಿಮೆ ಮಾಡುತ್ತದೆ: ಅಶ್ವಗಂಧವನ್ನು ಅಡಾಪ್ಟೋಜೆನ್ ಎಂದು ಪರಿಗಣಿಸಲಾಗುತ್ತದೆ. ಇದು ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮನುಷ್ಯನಲ್ಲಿ ಉಂಟಾಗುವ ಆತಂಕವನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆಯಿಂದ ಸಮಸ್ಯೆ ಮುಕ್ತರಾಗಬಹುದು.
ಲೈಂಗಿಕ ಸಾಮರ್ಥ್ಯ: ಅಶ್ವಗಂಧವನ್ನು ಆಯುರ್ವೇದ ತಜ್ಞರು ಕಡಿಮೆ ಲೈಂಗಿಕ ಕಾರ್ಯಕ್ಷಮತೆ ಹೊಂದಿರುವವರಿಗೆ ನೀಡಲಾಗುತ್ತದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಊತ ತಡೆಗಟ್ಟುವಿಕೆ: ನೀವು ಉರಿಯೂತದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಶ್ವಗಂಧವು ನಿಮಗೆ ಉತ್ತಮ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಸಕ್ಕರೆ ಮಟ್ಟ ನಿಯಂತ್ರಣ: ಅಶ್ವಗಂಧ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಶ್ವಗಂಧವು ಇನ್ಸುಲಿನ್ ಸ್ರವಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಒಳ್ಳೆಯ ನಿದ್ರೆ: ಮನುಷ್ಯನಿಗೆ ನೆಮ್ಮದಿಯ ನಿದ್ರೆ ಅವಶ್ಯಕ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆಯಿಂದ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅಶ್ವಗಂಧವು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಆಳವಾದ ಮತ್ತು ಶಾಂತಿಯುತ ನಿದ್ರೆಗೆ ಸಹಕಾರಿಯಾಗಿದೆ. ಮಾನಸಿಕ ನೆಮ್ಮದಿ ನೀಡುತ್ತದೆ.
ಹೀಗೆ ಹಲವಾರು ರೀತಿಯಾಗಿ ಅಶ್ವಗಂಧ ಗಿಡಮೂಲಿಕೆಯನ್ನು ಮನೆಮದ್ದುಗಳಾಗಿ ಬಳಸಿಕೊಳ್ಳಲಾಗುತ್ತದೆ.