ಭಯೋತ್ಪಾದಕರ ದಾಳಿಯಿಂದ ಗಾಯಗೊಂಡ ಜೂಮ್ ಇನ್ನಿಲ್ಲ!!!

Share the Article

ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ  ಭಾರತೀಯ ಸೇನೆಯ ದಾಳಿಯ ಶ್ವಾನ ‘ಜೂಮ್’ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದೆ.

ಇಂದು (ಗುರುವಾರ) ಮಧ್ಯಾಹ್ನ 12 ಗಂಟೆಯ ಸುಮಾರಿಗೆ ‘ಜೂಮ್’ ನಿಧನವನ್ನು ಸೇನಾ ಅಧಿಕಾರಿಗಳು ಸ್ಪಷ್ಟಪಡಿಸಿದರು. ಬೆಳಿಗ್ಗೆ 11:45 ರವರೆಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಜೂಮ್ ಇದ್ದಕ್ಕಿದ್ದಂತೆ ಉಸಿರುಗಟ್ಟಿ ನೆಲಕ್ಕೆ ಕುಸಿದು ಬಿದ್ದುದಾಗಿ ಸೇನಾಧಿಕಾರಿಗಳು ತಿಳಿಸಿದರು.

ಅಕ್ಟೋಬರ್ 10 ರಂದು ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರಿಂದ ಬಂದ ಎರಡು ಗುಂಡುಗಳು ‘ಜೂಮ್’ ಗೆ ತಗುಲಿವೆ. ಅಂದಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಇಂದು ಜೂಮ್ ಸಾವನ್ನಪ್ಪಿದೆ.

Leave A Reply