BYD Atto 3 : 521 ಕಿ.ಮೀ. ಮೈಲೇಜ್ ನೀಡುವ ಬಿವೈಡಿ ಅಟ್ಟೊ ಕಾರು |

ಕಾರ್…ಕಾರ್… ಕಾರ್.. ಎಲ್ಲೇ ಹೋದರೂ ಬಂದರೂ ಕಾರಿನದ್ದೆ ಕಾರುಬಾರು.. ರಸ್ತೆಗೆ ಇಳಿಯುತ್ತಿದ್ದಂತೆ ಕಾಲಿಗೆ ಪೂರ್ಣ ರೆಸ್ಟ್ ಕೊಟ್ಟು, ವಾಹನಗಳಲ್ಲಿ ಓಡಾಡುವ ಪ್ರಕ್ರಿಯೆ ಸಾಮಾನ್ಯವಾಗಿದೆ.
ಮೊದಲಿನಂತೆ ಬಸ್ ಇಲ್ಲವೇ ಯಾವುದೋ ಗಾಡಿಗಾಗಿ ಕಾದು ಕೂರುವ ಪ್ರಮೇಯ ಈಗಿಲ್ಲ.

 

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಸ್ಕೂಟರ್, ಬೈಕ್, ಜೀಪು, ಕಾರ್ ಹೀಗೆ ಯಾವುದಾದರೂ ಒಂದು ವಾಹನ ಖಂಡಿತ ಇದ್ದೆ ಇರುತ್ತದೆ. ಮನೆಯವರು ಓಡಾಡಲು ಮಾತ್ರವಲ್ಲದೇ ಕೆಲಸ ನಿರ್ವಹಿಸುವ ಜಾಗ ಮನೆಗಿಂತ ದೂರವಿದ್ದಾಗ ಸ್ವಂತ ವಾಹನಗಳ ಅವಶ್ಯಕತೆ ತಲೆದೋರುತ್ತದೆ.

ಕಾರ್ ಪ್ರಿಯರಿಗೆ ಒಂದು ಗುಡ್ ನ್ಯೂಸ್ ಇದ್ದು, ಬಿವೈಡಿ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಮಾದರಿಯು ಭಾರತದಲ್ಲಿ ಅನಾವರಣಗೊಂಡಿದ್ದು, ಸದ್ಯದಲ್ಲೇ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.
ಬಿವೈಡಿ (BYD) ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಅಟ್ಟೊ 3 ಎಲೆಕ್ಟ್ರಿಕ್(Atto 3) ಎಸ್ ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಈ ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಯಲ್ಲಿ ಜಾಗ ಪಡೆಯಲು ಅಣಿಯಾಗುತ್ತಿದೆ.

ಭಾರತದಲ್ಲಿ ಇ6 ಎಲೆಕ್ಟ್ರಿಕ್ ಎಂಪಿವಿ ನಂತರ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆಗೆ ಬಿವೈಡಿ ಕಂಪನಿಯು ಸಿದ್ದವಾಗಿದ್ದು, ಹೊಸ ಇವಿ ಕಾರನ್ನು ಕಂಪನಿಯು ಮುಂದಿನ ತಿಂಗಳು ನವೆಂಬರ್ ಮಧ್ಯಂತರದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಹೊಸ ಕಾರು ಅನಾವರಣಗೊಳಿಸುವ ಜೊತೆಗೆ ಬಿವೈಡಿ ಕಂಪನಿಯು ರೂ. 50 ಸಾವಿರ ಮುಂಗಡದೊಂದಿಗೆ ಬುಕಿಂಗ್ ಕೂಡಾ ಆರಂಭಿಸಿದ್ದು, ಪ್ರೀಮಿಯಂ ಫೀಚರ್ಸ್, ಅತ್ಯುತ್ತಮ ಬ್ಯಾಟರಿ ಪ್ಯಾಕ್ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಅಟ್ಟೊ 3 ಇವಿ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕೊನಾ ಇವಿ, ಎಂಜಿ ಜೆಡ್ ಎಸ್ ಇವಿ ಮತ್ತು ಟಾಟಾ ನೆಕ್ಸಾನ್ ಮ್ಯಾಕ್ಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಕಾಲಿಡಲು ತಯಾರಾಗಿದ್ದು ಎಕ್ಸ್ ಶೋರೂಂ ಪ್ರಕಾರ ರೂ. 22 ಲಕ್ಷದಿಂದ ರೂ. 25 ಲಕ್ಷ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.


ಕಾರಿನ ವೈಶಿಷ್ಟ್ಯದ ಬಗ್ಗೆ ಗಮನಿಸುವುದಾದರೆ, ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಮೈಲೇಜ್ ನಲ್ಲಿ ಮಾತ್ರವಲ್ಲದೆ ಐಷಾರಾಮಿ ಫೀಚರ್ಸ್ ಹೊಂದಿರಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಎಲ್‌ಇಡಿ ಹೆಡ್ ಲ್ಯಾಂಪ್, ಎಸ್ ಯುವಿ ಬಲಾಡ್ಯತೆಗಾಗಿ ಮಸ್ ಕ್ಯೂಲರ್ ಲೈನ್ ಗಳನ್ನ ಮತ್ತು ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಪುಲ್ ಎಲ್‌ಇಡಿ ಹೆಡ್ ಲೈಟ್ಸ್ ಪಡೆದುಕೊಂಡಿದೆ.

ಪ್ರೀಮಿಯಂ ಫೀಚರ್ಸ್ ಜೊತೆಗೆ ಹೊಸ ಕಾರು ವಿಶಾಲವಾದ ಕ್ಯಾಬಿನ್ ಸೌಲಭ್ಯವನ್ನು ಹೊಂದಿದ್ದು, 4,455 ಎಂಎಂ ಉದ್ದ, 1,875 ಎಂಎಂ ಅಗಲ, 1,615 ಎಂಎಂ ಎತ್ತರ ಮತ್ತು 2,720 ಎಂಎಂ ವೀಲ್ಹ್ ಬೆಸ್ ನೊಂದಿಗೆ ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಿದೆ.

ಬಿವೈಡಿ ಕಂಪನಿಯು ಹೊಸ ಅಟ್ಟೊ 3 ಕಾರಿನಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆ ನೀಡಬಹುದಾಗಿದ್ದು, ಆರಂಭಿಕ ಮಾದರಿಯು 49.92 kWh ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದ್ದರೆ ಹೈ ಎಂಡ್ ಮಾದರಿಯು 60.48 kWh ಬ್ಯಾಟರಿ ಪ್ಯಾಕ್ ಹೊಂದಿರಲಿದೆ.


ಶಕ್ತಿಶಾಲಿಯಾಗಿರುವ ಸಿಂಗಲ್ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟಾರ್ ಮೂಲಕ 201 ಬಿಎಚ್ ಪಿ ಮತ್ತು 310 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು ಕೇವಲ 7.3 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.


49.92 kWh ಬ್ಯಾಟರಿ ಪ್ಯಾಕ್ ಮಾದರಿಯು ಪ್ರತಿ ಚಾರ್ಜ್ ಗೆ 430 ಕಿ.ಮೀ ಮೈಲೇಜ್ ನೀಡಲಿದ್ದರೆ ಹೈ ಎಂಡ್ ಮಾದರಿಯು 60.48 kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್ ಗೆ ಗರಿಷ್ಠ 521 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

ಇದರೊಂದಿಗೆ ಮುಖ್ಯವಾಗಿ ಹೊಸ ಕಾರಿನಲ್ಲಿ ಬಿವೈಡಿ ಕಂಪನಿಯು ಲೆವಲ್ 2 ಅಡ್ವಾನ್ಸ್ ಡ್ರೈವರ್ಸ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಜೋಡಿಸಬಹುದಾಗಿದ್ದು, ಇದರಲ್ಲಿ ಅಡಾಪ್ಟಿವ್ ಕ್ರೂಸರ್ ಕಂಟ್ರೊಲ್, ಫಾರ್ವಡ್ ಕೂಲಿಷನ್ ಅಲರ್ಟ್, ಲೇನ್ ಕಿಪಿಂಗ್ ಅಸಿಸ್ಟ್, ಡೋರ್ ಓಪನ್ ವಾರ್ನಿಂಗ್, ಬ್ಲೈಂಡ್ ಮಾನಿಟರಿಂಗ್ ಸಿಸ್ಟಂ, ಆಟೋ ಎನರ್ಜೆನ್ಸಿ ಬ್ರೇಕಿಂಗ್ ಮತ್ತು ರಿಯರ್ ಕ್ರಾಸ್ ಟ್ರಾಫಿಕ್ ಸೌಲಭ್ಯಗಳನ್ನು ಹೊಂದಿರಲಿದೆ.

ಹೊಸ ಕಾರಿನಲ್ಲಿರುವ ಇಂಟಿರಿಯರ್ ಫೀಚರ್ಸ್ ಬಗೆಗೆ ಹೇಳುವುದಾದರೆ ಹೊಸ ಕಾರಿನಲ್ಲಿ ಬಿವೈಡಿ ಕಂಪನಿಯು ಪ್ಲೊಟರಿಂಗ್ ವೈಶಿಷ್ಟ್ಯತೆಯ 12.8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಸಿಸ್ಟಂ ಜೋಡಿಸಿದೆ.

ಜೊತೆಗೆ ವೈರ್ ಲೆಸ್ ಆಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿ ಮತ್ತು ವೈರ್ ಲೆಸ್ ಚಾರ್ಜಿಂಗ್ ಸೌಲಭ್ಯಗಳನ್ನು ಹೊಂದಿದೆ.
ತನ್ನದೆ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿರುವ ಈ ಕಾರನ್ನು ಗ್ರಾಹಕರು ಎಷ್ಟರಮಟ್ಟಿಗೆ ನೆಚ್ಚಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.