Nayanatara Vighnesh shivan : ನಯನತಾರಾ ದಂಪತಿಗೆ ಬಾಡಿಗೆ ತಾಯಿ ತಂದ ಸಂಕಷ್ಟ | ಕೊನೆಗೂ ವಿಘ್ನೇಶ್ ಶಿವನ್ ನಿಂದ ಸ್ಪಷ್ಟನೆ!!!

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ 8 ವರ್ಷಗಳಿಂದ ಪ್ರೀತಿಸಿ ಕಳೆದ ಜೂನ್‌ನಲ್ಲಿ ಪ್ರೇಮ ಪಕ್ಷಿಗಳು ಸಪ್ತಪದಿ ತುಳಿದು, ನಯನತಾರ ಕೊರಳಿಗೆ ವಿಘ್ನೇಶ್ ಕಂಕಣ ಕಟ್ಟಿ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿ ಸತಿ ಪತಿಗಳಾಗಿದ್ದು, ಎಲ್ಲರಿಗೂ ತಿಳಿದಿರುವ ವಿಷಯವೇ!!!.. ಆದರೆ, ಮದುವೆಯಾಗಿ ನಾಲ್ಕು ತಿಂಗಳಾಗುವುದರೊಳಗೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿದ ಜೋಡಿ ಜನತೆಗೆ ಶಾಕ್ ನೀಡಿದ್ದರು.

 

ನಯನತಾರಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವಿಘ್ನೇಶ್ ಶಿವನ್ ತಮ್ಮ ವೆಬ್‌ಸೈಟ್‌ನಲ್ಲಿ ಹಾಕಿರುವ ಪೋಸ್ಟ್ ಸಂಚಲನ ಮೂಡಿಸಿತ್ತು. ಇತ್ತೀಚೆಗಷ್ಟೇ ನಯನತಾರಾ ಮಾಧ್ಯಮಗಳ ಮುಂದೆ ಬಂದಿದ್ದಾಗ ಆಗ ಆಕೆ ಗರ್ಭ ಧರಿಸುವ ಲಕ್ಷಣ ಕಾಣಿಸದ ಕಾರಣ ಬಾಡಿಗೆ ತಾಯ್ತನದ ಮೂಲಕವೇ ಮಗು ಪಡೆದಿರಬಹುದು ಎಂಬ ಊಹಾಪೋಹ ನಡೆಯುತ್ತಿತ್ತು. ಈ ವಿಷಯವನ್ನು ನಯನತಾರಾ ಅಥವಾ ವಿಘ್ನೇಶ್ ಶಿವನ್ ಅಧಿಕೃತವಾಗಿ ಪ್ರಕಟಿಸಿದ ಬಳಿಕ ಹೊಸ ಸಂಕಷ್ಟವೊಂದು ಎದುರಾಗಿದೆ.

ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪೋಷಕರಾಗಿರುವ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್, ಮಕ್ಕಳೊಂದಿಗೆ ನೆಮ್ಮದಿಯ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಉತ್ಸಾಹದಲ್ಲಿ ಇರುವಾಗಲೇ ಸಂತೋಷಕ್ಕೆ ತಣ್ಣೀರು ಎರಚುವ ಪ್ರಸಂಗಗಳು ನಡೆಯುತ್ತಿದೆ.

ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದುಕೊಳ್ಳಲು ಕೆಲ ನಿಯಮಗಳಿದ್ದು, ಅವುಗಳನ್ನು ಪಾಲಿಸದೇ ಮಕ್ಕಳನ್ನು ಪಡೆದಿದ್ದಾರೆ ಎನ್ನುವ ಆರೋಪವನ್ನು ಹೊತ್ತಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವಾಗ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಕಾರಣದಿಂದಾಗಿ ತಮಿಳು ನಾಡು ಸರಕಾರ ನೋಟಿಸ್ ನೀಡಿದ್ದು, ಇದರ ಕುರಿತಾದ ವಿಚಾರಣೆಯನ್ನು ನಡೆಸುತ್ತಿದೆ.

ಭಾರತದಲ್ಲಿ ಸೆರೊಗೇಟರಿ ವಿಧಾನದಲ್ಲಿ ಮಗು ಪಡೆಯುವುದನ್ನು ಕಾನೂನು ಬಾಹಿರ ಎಂದು ನಿಯಮ ಜಾರಿಯಲ್ಲಿದ್ದು, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಒಂದೊಮ್ಮೆ ಸೆರೊಗೇಟರಿ ವಿಧಾನದ ಮೂಲಕ ಮಗು ಪಡೆದಿದ್ದರೆ ಅಪರಾಧವೆಂದು ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ.ಈ ಹೊತ್ತಿನಲ್ಲಿ ನಯನತಾರಾ ಅಥವಾ ವಿಘ್ನೇಶ್ ಪ್ರಕರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಪ್ರಥಮ ಬಾರಿಗೆ ಮೌನ ಮುರಿದಿರುವ ವಿಘ್ನೇಶ್ ತಮ್ಮ ಇನ್ಸ್ಟಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ‘ನಿನ್ನ ಸುತ್ತಮುತ್ತಲಿನವರನ್ನು ಗಮನಿಸು. ನಿನಗೆ ಒಳ್ಳೆಯದನ್ನು ಬಯಸುವವರು ಮಾತ್ರ ನಿನ್ನವರು. ನಿನ್ನ ಜೊತೆಗಿದ್ದು, ನಿನ್ನ ಕ್ಷೇಮ ಬಯಸುವವರನ್ನು ನಂಬು. ಇದೇ ವಾಸ್ತವ’ ಎಂದು ಬರೆದುಕೊಂಡಿದ್ದಾರೆ.

ಇವರ ಬರಹವನ್ನು ನೋಡಿದವರಿಗೆ ಈ ತಾರಾ ಜೋಡಿಯ ಕ್ಷೇಮವನ್ನು ಬಯಸದೇ ಇರುವವರು ಇದ್ದಾರಾ? ಎಂಬ ಪ್ರಶ್ನೆ ಬುಗಿಲೆದ್ದಿದೆ.

ಮಗುವಿನೊಂದಿಗೆ ಸಂತಸದ ಕ್ಷಣಗಳನ್ನು ಆಸ್ವಾದಿಸುವ ಶುಭಗಳಿಗೆಯಲ್ಲಿ ಹೊಸ ರಾದ್ದಂತ ಸೃಷ್ಟಿಯಾಗಿದ್ದು, ಪ್ರೇಮ ಜೋಡಿಗಳಿಗೆ ಬೇಸರ ತರಿಸಿದ್ದು, ಮತ್ತೊಂದು ಸ್ಟೋರಿಯಲ್ಲಿ ‘ಸಮಯವು ಎಲ್ಲವನ್ನೂ ಹೇಳುತ್ತದೆ. ಅಲ್ಲಿಯವರೆಗೂ ಸಹನೆಯಿಂದ ಕಾಯಬೇಕು’ ಎಂದು ಬರೆದಿದ್ದು, ಸೂಕ್ಷ್ಮವಾಗಿ ದುಃಖವನ್ನು ವಿಘ್ನೇಶ್ ತಮ್ಮ ಖಾತೆಯ ಮೂಲಕ ವ್ಯಕ್ತ ಪಡಿಸಿದ್ದಾರೆ.

ಪ್ರೀತಿಸಿ ಮದುವೆಯಾದ ಪ್ರಣಯ ಜೋಡಿಗಳು ಮಗುವಿನ ತುಂಟಾಟ ನೋಡುತ್ತಾ ಕಾಲ ಕಳೆಯುವ ಸುಂದರ ಕ್ಷಣಕ್ಕೆ ವಿವಾದವೊಂದು ತಡೆಗೋಡೆಯಾಗಿ ಪರಿಣಮಿಸಿರುವುದು ವಿಪರ್ಯಾಸ.

Leave A Reply

Your email address will not be published.