ಪುರುಷರೇ ಗಮನಿಸಿ ; ಈ ರೀತಿ ದಿನಾ ಮಾಡಿದರೆ ‘ವೀರ್ಯಾಣು’ಗಳ ಸಂತತಿ ಕಡಿಮೆ ಆಗುವುದು ಖಂಡಿತ !!!

ಲೈಂಗಿಕ ಜೀವನ ಸುಖಕರವಾಗಿದ್ದರೆ ಸಾಂಸಾರಿಕ ಜೀವನ ಬಲು ಸೊಗಸಾಗಿರುತ್ತದೆ. ಲೈಂಗಿಕ ಬದುಕು ಚೆನ್ನಾಗಿಲ್ಲದಿದ್ದರೆ ಮುಂದೆ ಬದುಕು ಬಲು ನೀರಸ ಎನಿಸುತ್ತದೆ. ಆದರೆ ಇಲ್ಲಿ ಮುಖ್ಯವಾಗಿ ಕೆಲವೊಮ್ಮೆ ಪುರುಷರ ಲೈಂಗಿಕ ಜೀವನ ಹದಗೆಡಲು ಕೆಲವೊಂದು ಸಂದರ್ಭಗಳಲ್ಲಿ ಅವರೇ ಕಾರಣವಾಗಿರುತ್ತಾರೆ. ಆದರೆ ಇದರ ಬಗ್ಗೆ ಅವರಿಗೆನೇ ತಿಳಿದಿರುವುದಿಲ್ಲ.


Ad Widget

Ad Widget

Ad Widget

Ad Widget
Ad Widget

Ad Widget

ಏಕೆಂದರೆ ಕೆಲವೊಮ್ಮೆ ಆರೋಗ್ಯಕರ ಅಭ್ಯಾಸಗಳು ಕೂಡ ವಿಪರೀತವಾದರೆ ತೊಂದರೆ ಉಂಟಾಗುತ್ತದೆ. ಇದರ ಜೊತೆಗೇನಾದರೂ ಅನಾರೋಗ್ಯಕರ ಅಭ್ಯಾಸ ಮಾಡಿದರೆ ಒಳ್ಳೆಯದಲ್ಲ. ಈ ಲೇಖನದಲ್ಲಿ ಪುರುಷರ ವೀರ್ಯಾಣುಗಳ ಸಂತತಿಯನ್ನು ಕಡಿಮೆ ಮಾಡುವ ಕೆಲವೊಂದು ವಿಚಾರಗಳ ಬಗ್ಗೆ ಹೇಳುತ್ತೇವೆ.


Ad Widget

ಎಲ್ಲರಿಗೂ ಚೀಸ್ ಬಹಳ ಇಷ್ಟ. ಆದರೆ ಅತಿಯಾಗಿ ಇದನ್ನು ತಿನ್ನಲು ಹೋದರೆ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ. ಇದರ ಬಗ್ಗೆ ಅಮೆರಿಕಾದ ಸಂಶೋಧನೆ ದೃಢಪಡಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶವನ್ನು ಸೇವನೆ ಮಾಡುತ್ತಿದ್ದರೆ, ಅಂತಹವರಿಗೆ ವೀರ್ಯಾಣುಗಳ ಸಂತತಿ ಕಡಿಮೆಯಾಗುತ್ತದೆ ಮತ್ತು ಅವುಗಳ ಗುಣಮಟ್ಟ ಕೂಡ ತಗ್ಗುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಇವುಗಳಿಂದ ದೂರ ಇದ್ದರೆ, ಅಂತಹ ಪುರುಷರಿಗೆ ವೀರ್ಯಾಣುಗಳ ಸಂತತಿ ಚೆನ್ನಾಗಿರುತ್ತದೆ.

ಸಕ್ಕರೆ ಮಿಶ್ರಿತ ಸಿಹಿ ಪಾನೀಯಗಳ ನಿರಂತರ ಸೇವನೆಯಿಂದ ಕೂಡಾ ಪುರುಷರ ವೀರ್ಯಾಣುಗಳ ಗುಣಮಟ್ಟ ಕುಸಿಯುತ್ತದೆ. ಏಕೆಂದರೆ ವೀರ್ಯಾಣುಗಳ ಉತ್ಪತ್ತಿಗೆ ಸಂಬಂಧಪಟ್ಟಂತೆ ಇರುವ follicle stimulating hormone ಕಡಿಮೆಯಾಗುತ್ತದೆ. ಇದರ ಬಗ್ಗೆ ಒಂದು ಸಂಶೋಧನೆಯ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ಪುರುಷರು ಹೆಚ್ಚಾಗಿ ಸೋಯಾ ಅವರೆ ಅಥವಾ ಸೋಯಾ ಮಿಶ್ರಿತ ಆಹಾರ ಉತ್ಪನ್ನಗಳನ್ನು ಸೇವನೆ ಮಾಡಬಾರದು ಎಂದು. ಇದು ಕೆಲವರಿಗೆ ಬೊಜ್ಜು ಅಥವಾ ಅತಿಯಾದ ದೇಹದ ತೂಕ ಬರುವಂತೆ ಮಾಡುತ್ತದೆ. ಇದರಿಂದಲೂ ಸಹ ಪುರುಷರಿಗೆ ಶೀಘ್ರಸ್ಖಲನ ಅಥವಾ ಅಪಸಾಮಾನ್ಯ ನಿಮಿರುವಿಕೆ ಸಮಸ್ಯೆ ಎದುರಾಗಿ ವೀರ್ಯಾಣುಗಳ ಗುಣಮಟ್ಟ ಮತ್ತು ಸಂತತಿ ಕುಸಿಯುತ್ತದೆ.

ಪ್ರತಿ ದಿನ ಬಿಸಿ ನೀರಿನ ಸ್ನಾನ ಮಾಡುವುದು ಪುರುಷರಿಗೆ ಅಷ್ಟು ಒಳ್ಳೆಯದಲ್ಲ. ಏಕೆಂದರೆ ಇದು ದೇಹದ ತಾಪಮಾನವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ವಿಶೇಷವಾಗಿ ವೃಷಣಗಳ ಭಾಗದಲ್ಲಿ ತಾಪಮಾನ ಹೆಚ್ಚಿ ವೀರ್ಯಾಣುಗಳ ಸಂತತಿ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಷ್ಟು ಮಾತ್ರವಲ್ಲದೇ ಈ ಮೊದಲೇ ಉತ್ಪತ್ತಿ ಆಗಿರುವ ವೀರ್ಯಾಣುಗಳ ಗುಣಮಟ್ಟ ಕೂಡ ಕುಸಿಯುತ್ತದೆ. ಹಾಗಾಗಿ ಯಾವಾಗಲೂ ಪುರುಷರು ತಮ್ಮ ಖಾಸಗಿ ಅಂಗಾಂಗವನ್ನು ತಣ್ಣೀರಿನಿಂದ ಸ್ವಚ್ಛ ಮಾಡಿಕೊಂಡರೆ ಉತ್ತಮ.

ಹೆಚ್ಚು ಕಾಲ ಟಿವಿ ನೋಡುತ್ತಾರೆ ಅಂದರೆ ಕುಳಿತಲ್ಲೇ ಕುಳಿತುಕೊಂಡೇ ಟಿವಿ ನೋಡುತ್ತಾ ಇರುವವರಿಗೆ ಕೂಡ ವೀರ್ಯಾಣುಗಳ ಸಂತತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ವ್ಯಾಯಾಮ ಮಾಡುವುದಿಲ್ಲ, ದೇಹ ಉತ್ಸಾಹದಿಂದ ಕೂಡಿರುವುದಿಲ್ಲ. ಯಾವುದೇ ಚಟುವಟಿಕೆ ಇಲ್ಲದ ಕಾರಣ ದೇಹದಲ್ಲಿ ಸಮರ್ಪಕ ಪ್ರಮಾಣದಲ್ಲಿ ವೀರ್ಯಾಣುಗಳ ಉತ್ಪತ್ತಿ ನಡೆಯುವುದಿಲ್ಲ. ಇದನ್ನು ಪುರುಷರು ತಿಳಿದುಕೊಂಡರೆ ಉತ್ತಮ.

error: Content is protected !!
Scroll to Top
%d bloggers like this: