Indian Railway : ರೈಲಿನಲ್ಲಿ ಕಾಯ್ದಿರಿಸಿದ ಟಿಕೆಟ್ ರದ್ದು ಮಾಡಿದರೂ, ಹಣ ರಿಫಂಡ್ ಆಗಲು ಈ ಟ್ರಿಕ್ಸ್ ಫಾಲೋ ಮಾಡಿ

ರೈಲ್ವೆ ಪ್ರಯಾಣವನ್ನು ಇಷ್ಟ ಪಡದೇ ಇರುವವರು ವಿರಳ. ಆದರೆ, ನಮ್ಮಲ್ಲಿ ರೈಲ್ವೆ ಟಿಕೆಟ್​ ಬುಕ್(railway ticket booking)​ ಮಾಡುವುದೇ ಒಂದು ದೊಡ್ಡ ಪ್ರಹಸನವಾಗಿ, ರೈಲಿನಲ್ಲಿ ಪ್ರಯಾಣಿಸುವ ತಿಂಗಳ ಮೊದಲೇ ಟಿಕೆಟ್​ ಬುಕ್​​ ಮಾಡಿ, ಅದು ಕನ್​ಫರ್ಮ್​​ ಆಗುವ ಕಾಯುವ ಅವಸ್ಥೆ ಎದುರಾದಾಗ ಇದಕ್ಕಿಂತ ಬಸ್ ಸೇವೆಯೇ ವಾಸಿ ಎಂದು ಅನಿಸಿದರೂ ಅನುಮಾನವಿಲ್ಲ.

ಕೆಲವೊಮ್ಮೆ, ಬುಕ್​ ಮಾಡಿರುವ ಟಿಕೆಟನ್ನು ರದ್ದು ಮಾಡಿ ಹಣ ಮರುಪಾವತಿ ಆಗೋದು ಮತ್ತೊಂದು ದೊಡ್ಡ ಪ್ರಸಂಗವಾಗಿ, ಬುಕ್​ ಮಾಡಿದ ಟಿಕೆಟ್​ನ ರದ್ದು ಮಾಡಿ ನಮ್ಮ ಹಣವನ್ನು ವಾಪಸ್​ ಪಡೆಯುವುದು ರಗಳೆಯ ಕೆಲಸವಾಗಿ, ಎಷ್ಟೋ ಜನ ಮನಿ ರೀ ಫಂಡ್​​ ಸಹವಾಸಕ್ಕೆ ಹೋಗದೆ ಸುಮ್ಮನಿದ್ದು ಬಿಡುತ್ತಾರೆ.

ಕೆಲವು ತುರ್ತು ಪರಿಸ್ಥಿತಿಯಿಂದಾಗಿ ರೈಲು ಚಾರ್ಟ್ ಸಿದ್ಧಪಡಿಸಿದ ನಂತರವೂ ಅನೇಕ ಬಾರಿ ರೈಲು ಟಿಕೆಟ್ ಅನ್ನು ರದ್ದುಗೊಳಿಸುವ ಅನಿವಾರ್ಯತೆ ಎದುರಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಟಿಕೆಟ್ ರದ್ದುಗೊಳಿಸಿ ಮರುಪಾವತಿಯನ್ನು ಪಡೆಯಬಹುದಾಗಿದೆ.

ರೈಲ್ವೆ ನಿಯಮಗಳ ಪ್ರಕಾರ ಟಿಕೆಟ್ ಠೇವಣಿ ರಸೀದಿಯನ್ನು (ಟಿಡಿಆರ್) ಸಲ್ಲಿಸಿ, ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸದೆ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಮರುಪಾವತಿಯನ್ನು ಪಡೆಯಬಹುದು.ಆನ್‌ಲೈನ್‌ನಲ್ಲಿ TDR ಸಲ್ಲಿಸಲು ಕೆಳಗೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಬೇಕು.

ಮೊದಲು IRCTC ಯ ಅಧಿಕೃತ ವೆಬ್‌ಸೈಟ್ www.irctc.co.in ಗೆ ಹೋಗಬೇಕು.ಬಳಿಕ ಮುಖಪುಟಕ್ಕೆ ಹೋಗಿ ಮತ್ತು “My Account” ಮೇಲೆ ಕ್ಲಿಕ್ ಮಾಡಬೇಕು.

ನಂತರ, ಡ್ರಾಪ್ ಡೌನ್ ಮೆನುಗೆ ಹೋಗಿ ಮತ್ತು “My Transaction” ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಫೈಲ್ TDR ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡುವ ಮೂಲಕ ಫೈಲ್ ಅನ್ನು TDR ಮಾಡಬಹುದಾಗಿದೆ.

ಈ ಪ್ರಕ್ರಿಯೆಯ ಬಳಿಕ ಯಾರ ಹೆಸರಿನಲ್ಲಿ ಟಿಕೆಟ್ ಬುಕ್ ಆಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಆಗ PNR ಸಂಖ್ಯೆ, ರೈಲು ಸಂಖ್ಯೆ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಬೇಕು ಜೊತೆಗೆ ರದ್ದತಿ ನಿಯಮಗಳ ಬಾಕ್ಸ್ ಅನ್ನು ಟಿಕ್ ಮಾಡಬೇಕು.

ಕೊನೆಗೆ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು. Sumbit ಕೊಟ್ಟ ಬಳಿಕ ಬುಕಿಂಗ್ ಸಮಯದಲ್ಲಿ ನಮೂನೆಯಲ್ಲಿ ನೀಡಲಾದ ಸಂಖ್ಯೆಯ ಮೇಲೆ OTP ಅನ್ನು ಪಡೆದು, OTP ನಮೂದಿಸಿದ ನಂತರ, “Submit” ಕ್ಲಿಕ್ ಮಾಡಬೇಕು.

PNR ವಿವರಗಳನ್ನು ಪರಿಶೀಲಿಸಿ ಮತ್ತು ರದ್ದುಗೊಳಿಸಿ ಟಿಕೆಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇಲ್ಲಿ ನೀವು ಪುಟದಲ್ಲಿ ಮರುಪಾವತಿ ಮೊತ್ತವನ್ನು ನೋಡಬಹುದಾಗಿದೆ.ಬುಕಿಂಗ್ ಫಾರ್ಮ್‌ನಲ್ಲಿ ನೀಡಲಾದ ಸಂಖ್ಯೆಯಲ್ಲಿ, ನೀವು PNR ಮತ್ತು ಮರುಪಾವತಿಯ ವಿವರಗಳನ್ನು ಒಳಗೊಂಡಿರುವ ದೃಢೀಕರಣ ಸಂದೇಶವನ್ನು ಪಡೆಯಬಹುದಾಗಿದೆ.

ಇನ್ನೂ ಮುಂದೆ ತರಾತುರಿಯಲ್ಲಿ ಸೀಟು ಬುಕ್ ಮಾಡಿ ಕ್ಯಾನ್ಸಲ್ ಮಾಡಿದರೆ, ಹಣ ಕಳೆದುಕೊಳ್ಳುವ ಭೀತಿ ಎದುರಾಗುವುದಿಲ್ಲ. ಏಕೆಂದರೆ, ಭಾರತೀಯ ರೈಲ್ವೆ, ಚಾರ್ಟ್ ಸಿದ್ಧಪಡಿಸಿದ ನಂತರ ಕೆಲವು ಕಾರಣಗಳಿಂದ ನೀವು ರೈಲು ಟಿಕೆಟ್ ಅನ್ನು ರದ್ದುಗೊಳಿಸಿದರೂ ಸಹ ನೀವು ಮರುಪಾವತಿಯನ್ನು ಕ್ಲೈಮ್ ಮಾಡಬಹುದಾಗಿದೆ.

Leave A Reply

Your email address will not be published.