ಕಾಂತಾರ ಹೀರೋಯಿನ್ ಎಲ್ಲಿಂದ ಸಿಕ್ಕಿದ್ದು?

Share the Article

ಕಾಂತಾರ 2022 ರ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಸಿನಿಮಾ ಎಲ್ಲೆಡೆ ಮನೆಮಾತಾಗಿದೆ. ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ, ರಾಜ್ಯಗಳಲ್ಲಿಯೂ ಸಂಚಲನ ಮೂಡಿಸುತ್ತಾ ಇರುವುದು ಹೆಮ್ಮೆಯ ವಿಚಾರ ಅಂತಾನೆ ಹೇಳಬಹುದು.

ಅದರಲ್ಲಿ ನಟನೆಯ ವಿಷಯ ಅಂತ ಬಂದ್ರೆ ಅಬ್ಬಬ್ಬ ರಿಷಬ್ ಅವ್ರನ್ನ ಮೆಚ್ಚಲೇಬೇಕು. ಅಂತ ಆಕ್ಟಿಂಗ್,ಕಥೆಯನ್ನು ಹೆಣೆದಿರುವ ಸ್ಟೈಲ್ ಸಖತ್. ಇದರಲ್ಲಿ ಚೊಚ್ಚಲ ನಾಯಕಿಯಾಗಿ ಪಾತ್ರ ವಹಿಸಿದ್ದು ಸಪ್ತಮಿ ಗೌಡ. ಸಿನಿಮಾದಲ್ಲಿ ಲೀಲಾ ಪಾತ್ರವನ್ನು ನಿಭಾಯಿಸಿದ್ದಾರೆ. ಹಾಗಾದ್ರೆ ಶೆಟ್ರು ಲೀಲಾನನ್ನು ಎಲ್ಲಿಂದ ಹೇಗೆ ಸೆಲೆಕ್ಟ್ ಮಾಡಿದ್ರು ಗೊತ್ತಾ? ಹೇಳ್ತೀವಿ ಕೇಳಿ

ರಿಷಬ್ ಅವರು ಈ ಸಿನಿಮಾಗೆ ಹೀರೋಯಿನ್ ನ್ನನ್ನು ಹುಡುಕುವಾಗ ಎಲ್ಲಾ ಕಡೆಯಲ್ಲೂ ಹುಡುಕುತ್ತಾರಂತೆ. ಆ ರೀತಿ ಹುಡುಕುವಾಗ ಇನ್​ಸ್ಟಾಗ್ರಾಮ್​ನಲ್ಲಿ ಸಪ್ತಮಿ ಅವರನ್ನು ನೋಡಿದ್ದರು. ಸಪ್ತಮಿ ಗೌಡ ಅವರ ಒಂದು ಫೋಟೋ ನೋಡಿದ್ದರು ರಿಷಬ್ ಶೆಟ್ಟಿ ಅವರಿಗೆ ಲೈಕ್ ಆಗಿತ್ತಂತೆ. ಸಪ್ತಮಿ ಗೌಡ ಅವರು ಚಾಮುಂಡಿ ಬೆಟ್ಟದಲ್ಲಿ ಪಿಂಕ್ ಮತ್ತು ನೀಲಿ ಬಣ್ಣದ ಸೀರೆ ಉಟ್ಟ ಫೋಟೋ ನೋಡಿ ಆಯ್ಕೆ ಮಾಡಿದ್ದರು.

ಇದನ್ನು ನೋಡಿದ ಮೇಲೆ ಲುಕ್ ಟೆಸ್ಟ್ ಮಾಡಿ, ಸ್ಕ್ರೀನ್ ಟೆಸ್ಟ್ ಮಾಡಿದ್ದರು. ನಂತರ ಬೆಂಗಳೂರು ಹಾಗೂ ಕುಂದಾಪುರದಲ್ಲಿ ವರ್ಕ್ ಶಾಪ್ ಕೂಡ ಸಪ್ತಮಿ ಮಾಡಿದ್ದರು. ಎಂಬುದಾಗಿ ಅನುಶ್ರೀ ಅವರು ಮಾಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

Leave A Reply